ಹುಕ್ಕೇರಿ : ತಾಲೂಕಿನ ಕೋಚರಿ ಗ್ರಾಮದ ಮಗದುಮ್ಮ ತೋಟದಲ್ಲಿ ನೂರಕ್ಕಿಂತ ಹೆಚ್ಚು ಮನೆಗಳು ಸುಮಾರು ವರ್ಷಗಳಿಂದ ವಾಸವಿದ್ದು ಹಾಗೂ ಇಲ್ಲಿ ವೃದ್ಧರು ಮತ್ತು ಚಿಕ್ಕ ಮಕ್ಕಲೂ ಸಹ ಇರುತ್ತಾರೆ ಹಾಗೂ ಇಲ್ಲಿ ಹತ್ತ ಕ್ಕಿಂತ ಹೆಚ್ಚು ಕೋಳಿ ಪಾರ್ಮಗಳಿರುತ್ತವೆ ಇದರಿಂದ ನೋಣಗಳ ಕಾಟ ಮತ್ತು ಇದರಿಂದ ಬರುವ ವಾಸನೆಯಿಂದ ಹಿರಿಯರಿಗೆ, ಸಣ್ಣ ಮಕ್ಕಳಿಗೆ ಆರೋಗ್ಯದಲ್ಲಿ ಸಮಸ್ಯೆಯಾಗುತ್ತಿದೆ. ನೋಣಗಳ ಕಾಟದಿಂದ ಮನೆಯಲ್ಲಿ ಅಡುಗೆಯನ್ನು ಕೂಡ ಮಾಡಲಿಕ್ಕೆ ಆಗುತ್ತಿಲ್ಲ. ಆದ್ದರಿಂದ ಸದರಿ ಗ್ರಾಮದಲ್ಲಿರುವ ಕೋಳಿ ಪಾರ್ಮಗಳಿಗೆ ತಮ್ಮ ಇಲಾಖೆಯಿಂದ ಪರವಾನಿಗೆ ನೀಡಿದ್ದಲ್ಲಿ ಅವುಗಳನ್ನು ರದ್ದು ಪಡೆಸಿ ಜನ ವಸತಿಯಿಂದ ಸದರಿ ಪಾರ್ಮಗಳನ್ನು ಸ್ಥಳಾಂತರಿಸಲು ಸೂಚಿಸಬೇಕೆಂದು ಕೆಲ ಕಾಲ ಮಿನಿ ವಿಧಾನಸೌಧ ಮುಂದೆ ಧರಣಿ ಮಾಡಿದರು ಸ್ಥಳಕ್ಕೆ ಆಗಮಿಸಿದ ಹುಕ್ಕೇರಿ ತಹಶೀಲ್ದಾರರಾದ ಶ್ರೀಮತಿ ಮಂಜುಳಾ ನಾಯಕ್ ಇವರಿಗೆ ಕೋಚರಿಗೆ ಜನತೆ ಹಾಗೂ ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ವತಿಯಿಂದ ಮನವಿ ನೀಡಲಾಯಿತು
ಈ ಸಂದರ್ಭದಲ್ಲಿ
ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ,
ತಾಲೂಕಾ ಅಧ್ಯಕ್ಷರಾದ ಸಂಜೀವ್ ಮಲ್ಲಪ್ಪ ಹಾವಣ್ಣವರ. ಮಲ್ಲಪ್ಪ ಬೈಲಣ್ಣವರ್ ಜಿಲ್ಲಾ ಪ್ರಧಾನ ಕಾರ್ಯದರ್ಶಿ ನಾಗರಾಜ ಹಾದಿಮನಿ ತಾಲೂಕ ಉಪಾಧ್ಯಕ್ಷರು ಹುಕ್ಕೇರಿ ಸಿದ್ದಪ್ಪ ನಾಯಿಕ ತಾಲೂಕಾ ಸಂಚಾಲಕರು ಹುಕ್ಕೇರಿ ಆನಂದ ಮಗದುಮ್ಮ ತಾಲೂಕಾ ಪ್ರದಾನ ಕಾರ್ಯದರ್ಶಿ ಹುಕ್ಕೇರಿ ಸದಾಶಿವ ದುಂಡಗಿ ಕಮತನೂರ ಅಧ್ಯಕ್ಷರು ಕಾಡಪ್ಪಾ ಮಗದುಮ್ಮ ಕೋಚರಿ ಅಧ್ಯಕ್ಷರು ಬಸವರಾಜ ಗಿರಮಲ್ಲನವರ ಉಳ್ಳಾಗಡ್ಡಿ ಖಾನಾಪುರ ಅಧ್ಯಕ್ಷರು ಶಿವಲಿಂಗ ಪಾಟೀಲ್ ಜಿಲ್ಲಾ ಕಾರ್ಯದರ್ಶಿ ರಾಮಗೌಡ್ ಪಾಟೀಲ್ ಸಂಕೇಶ್ವರ ಬ್ಲಾಕ್ ಅಧ್ಯಕ್ಷರು ಶಂಕರ ಗೋಟೂರ ಅಧ್ಯಕ್ಷರು ಮಲ್ಲಿಕಾರ್ಜುನ ತೊದಲೇ ಕೋಣನಕೇರಿ ಅಧ್ಯಕ್ಷರು ನಾಗರಾಜ ದೇಸಾಯಿ ಅಮ್ಮಣಗಿ ಅಧ್ಯಕ್ಷರು ಮಹೇಶ್ ಯಡೂರಿ ಬೊರಗಲ್ಲ ಅಧ್ಯಕ್ಷರು ಅಜ್ಜಪ್ಪ ಗಜಬರ್ ಹಾಗೂ ಎಲ್ಲ ರೈತಪರ ಹೋರಾಟಗಾರರು ಪದಾಧಿಕಾರಿಗಳು ಹಾಗೂ ವಿವಿಧ ಗ್ರಾಮಗಳಿಂದ ಬಂದ ರೈತರು ಮುಖಂಡರು ಯುವಕರು ಉಪಸ್ಥಿತರಿದ್ದರು.
ವರದಿ : ಸದಾನಂದ ಎಂ