ಸಿದ್ಧೇಶ್ವರ ಸಂಸ್ಥೆಯ ಎಸ್ ಸಿ ಉಪ್ಪಿನ ಪದವಿ ಮಹಾವಿದ್ಯಾಲಯದಲ್ಲಿ ಇಂದು ಸರಸ್ವತಿ ಪೂಜೆಯೊಂದಿಗೆ ಪದವಿ ತರಗತಿಗಳು ಪ್ರಾರಂಭ

ನಗರದ ಶ್ರೀ ಸಿದ್ಧೇಶ್ವರ ಸಂಸ್ಥೆಯ ಎಸ್ ಸಿ ಉಪ್ಪಿನ ಪದವಿ ಮಹಾವಿದ್ಯಾಲದಯಲ್ಲಿ ಇಂದು ಸರಸ್ವತಿ ಪೂಜೆಯೊಂದಿಗೆ ಪದವಿ ತರಗತಿಗಳು ಪ್ರಾರಂಭಿಸಿದರು. ಕಾರ್ಯಕ್ರಮದಲ್ಲಿ ಸಂಸ್ಥೆ ಉಪಾಧ್ಯಕ್ಷರಾದ ಶ್ರೀ ಸಂಗನಬಸಪ್ಪ ಸಜ್ಜನ ಅವರು ಮಕ್ಕಳಿಗೆ ಶುಭ ಹಾರೈಸಿದರು ಜೊತೆಗೆ ವಿದ್ಯಾರ್ಥಿ ಜೀವನ ಪದ್ಧತಿ ಕುರಿತು ಮಾತನಾಡಿದರು. ಕಾರ್ಯಕ್ರಮದ ಅಧ್ಯಕ್ಷರಾಗಿ ಶ್ರೀ ಬಸಯ್ಯ ಹಿರೇಮಠ ಚೇರಮನರು ಶ್ರೀ ಸಿದ್ದೇಶ್ವರ ಸಂಸ್ಥೆ ವಹಿಸಿಕೊಂಡು ಅವರು ಮಕ್ಕಳಿಗೆ ಉತ್ತಮ ಮಾರ್ಗದಲ್ಲಿ ನಡೆಯಿರಿ ನಿಮ್ಮ ಜೀವನ ಉಜ್ವಲವಾಗುತ್ತದೆ ಎಂದು ನುಡಿದರು. ಮುಖ್ಯ ಅಥಿತಿಯಾಗಿ ಸಿದ್ರಾಮಪ್ಪ ಉಪ್ಪಿನ ಅವರು ಮಾತನಾಡಿ ಮೌಲ್ಯತಯುವಾದ ಬದುಕನ್ನು ಕಟ್ಟಿಕೊಳ್ಳಿ ಸುಂದರವಾದ ಪ್ರಕೃತಿ ನಮಗೆಲ್ಲ ಕೊಟ್ಟಿದೆ ಅದರಿಂದ ಅನೇಕ ಪಾಠಗಳನ್ನು ಕಲಿಯಬೇಕು ಎಂದು ನುಡಿದರು. ಪ್ರಾಸ್ತಾವಿಕವಾಗಿ ವೀರೇಶ ಪಿ ಅವರು ಕಾಲೇಜಿನ ಇತಿಹಾಸ ಕುರಿತು ಮಾತನಾಡಿದರು.ಡಾ ಸುನೀತಾ ಕಟ್ಟಿಮನಿ ಅವರು ಕಾಲೇಜಿನ ನಿಯಮಗಳು ಕುರಿತು ಮಾತನಾಡಿದರು.ಅದೇ ರೀತಿಯಾಗಿ ಸಂಸ್ಥೆಯ CEO ಡಾ ಹೆಚ್ ವೆಂಕಟೇಶ ಅವರು ಕಾರ್ಯಕ್ರಮ ಉದ್ದೇಶಿಸಿ ಮಾತನಾಡಿ ಸಂಸ್ಥೆಯು ಎಲ್ಲಾ ರೀತಿಯಿಂದ ಸೌಲಭ್ಯ ಕೊಡುತ್ತದೆ ಅದನ್ನು ಸರಿಯಾಗಿ ಬಳಸಿಕೊಂಡು ಉತ್ತಮ ವಿದ್ಯಾರ್ಥಿಗಳಾಗಿ ಎಂದರು.ಈ ಸಂದರ್ಭದಲ್ಲಿ ಬೆಂಗಳೂರಿನ TV 5 ಚಾಲನವರು ಪ್ರತಿ ವರ್ಷ ಕೊಡವ ಜೀವ ಮಾನ ಸಾಧನೆ ಪ್ರಶಸ್ತಿ ತೆಗೆದುಕೊಂಡ ಡಾ ಸುನೀತಾ ಕಟ್ಟಿಮನಿ ಅವರಿಗೆ ಸನ್ಮಾನಿಸಲಾಯಿತು. ಕಾರ್ಯಕ್ರಮದಲ್ಲಿ ಸದಾನಂದ ದೇಸಾಯಿ,ಬಸವರಾಜ ಸೂಗುರ,ಎಸ್ ಸಿ ಉಪ್ಪಿನ, ಮಲ್ಲಿಕಾರ್ಜುನ ಸಜ್ಜನ,ಎನ್ ಎಮ್ ಗೋಲಾಯಿ, ,, ಸದಾಶಿವ ಗುಡೊಡ್ಡಗಿ,ಸುಧೀರ ಚಿಂಚಲಿ ಮಲಕ್ಕಪ್ಪ ಗಾಣಿಗೆರ.ಡಾ ಎಚ್ ವೆಂಕಟೇಶ, ಅರುಣಾ ತೆನ್ನಹಳ್ಳಿ,ಸುಷ್ಮಾ ದೇಸಾಯಿ,ಡಾ ಸುನೀತಾ ಕಟ್ಟಿಮನಿ . ಕಾರ್ಯಕ್ರದಲ್ಲಿ ಕಿರಣಕುಮಾರ B G, ಸಂಜಯ ಅಗ್ನಿಹೋತ್ರಿ ಅಭಿಷೇಕ ಚಿಂಚಲಿ,ಅಜಿತ ಪ್ಯಾಟಿ, ಸಂಗೀತ ಸೌದಿ, ಮಹಾನಂದ ಉಪ್ಪಿನ,ಜಗದೀಶ ಸಾತಿಹಾಳ, ಪ್ರಭoಜನ ಜೋಷಿ ಉಪಸ್ಥಿತರಿದ್ದರು.ಕಾರ್ಯಕ್ರಮವನ್ನು ರಮೇಶ ಮೇತ್ರಿ ನಿರೂಪಿಸಿದರು. ಡಾ ಯಲ್ಲಮ್ಮ ಚೌವ್ಹಾಣ ಸ್ವಾಗತಿಸಿದರು ಜಯಲಷ್ಮಿ ಅನವಾಲ ವಂದಿಸಿದರು ಹಾಗೂ ಕಾಲೇಜಿನ ಭೋದಕ ಭೋದಕೇತರ ಸಿಬ್ಬಂದಿ ಭಾಗವಹಿಸಿದ್ದರು.

ವರದಿ : ದೌಲಪ್ಪ ಮನಗೂಳಿ
ವಿಜಯಪುರ

error: Content is protected !!