ಹುಬ್ಬಳ್ಳಿ : ಡಾ!! ಬಿ ಆರ್ ಅಂಬೇಡ್ಕರ್ ದಲಿತ ಸಂಘರ್ಷ ಸಮಿತಿಯ ಧಾರವಾಡ ಜಿಲ್ಲಾಧ್ಯಕ್ಷರಾದ ಶಂಕರ ಪಾತ್ರದ ಇವರ ನೇತೃತ್ವದಲ್ಲಿ ಎಸ್.ಎಸ್.ಎಲ್.ಸಿ ಹಾಗೂ ದ್ವೀತಿಯ ಪಿಯುಸಿ ಪರೀಕ್ಷೆಯಲ್ಲಿ ಉನ್ನತ ಶ್ರೇಣಿಯಲ್ಲಿ ಪಾಸಾದ ವಿದ್ಯಾರ್ಥಿ/ ವಿದ್ಯಾರ್ಥಿನಿಯರಿಗೆ ಪ್ರತಿಭಾ ಪುರಸ್ಕಾರ ಮತ್ತು ಸನ್ಮಾನ ಸಮಾರಂಭ ಕಾರ್ಯಕ್ರಮವನ್ನು ಹುಬ್ಬಳ್ಳಿ ತಾಲೂಕು ಬ್ಯಾಹಟ್ಟಿ ಗ್ರಾಮದ ವೀರಭದ್ರೇಶ್ವರ ಕಲ್ಯಾಣ ಮಂಟಪದಲ್ಲಿ ಇಂದು ಅದ್ದೂರಿಯಾಗಿ ಜರುಗಿತು..
ಕಾರ್ಯಕ್ರಮದಲ್ಲಿ ಪ್ರತಿಭಾವಂತ ವಿದ್ಯಾರ್ಥಿಗಳಿಗೇ ಸನ್ಮಾನ ಮಾಡಿ ಅವರನ್ನು ಉದ್ದೇಶಿಸಿ ಸಂಘಟನೆಯ ರಾಜ್ಯಾಧ್ಯಕರಾದ ಮಾರುತಿ ದೊಡ್ಡಮನಿ ಇಂದಿನ ಯುವ ಪೀಳಿಗೆ ಸಾಧನೆ ಮಾಡಿ ಯಶಸ್ವಿಯಾಗಬೇಕಾದರೆ ಶಿಕ್ಷಣದ ಶಕ್ತಿಯನ್ನು ಪಡೆದುಕೊಂಡಾಗ ಮಾತ್ರ ಸಾಧ್ಯ ಆದ್ದರಿಂದ ತಾವೆಲ್ಲರೂ ಉನ್ನತ ಮಟ್ಟದಲ್ಲಿ ಶಿಕ್ಷಣವನ್ನು ಪಡೆದುಕೊಂಡು ಸರ್ಕಾರ ಮತ್ತು ಸಮಾಜವನ್ನು ಮುನ್ನಡೆಸುವ ಜನಪ್ರತಿನಿಧಿಗಳು ಆಗಬೇಕೆಂದು ಸಲಹೆ ನೀಡಿದರು..
ಕಾರ್ಯಕ್ರಮದಲ್ಲಿ ಮಲ್ಲಿಕಾರ್ಜುನ ಯಾತಗೇರಿ, ಉಡಚಪ್ಪ ಕಾಕಣ್ಣವರ, ಮಲ್ಲಿಕಾರ್ಜುನ ಬಿಳಾರ, ರೋಹಿತ್ ಮತ್ತಿಹಳ್ಳಿ, ನಿರ್ಮಲಾ ದ್ಯಾವನಗೌಡ್ರ, ಗಂಗಮ್ಮ ರೂಗಿ, ಪರಮೇಶ ಕಾಳೆ, ವಿರುಪಾಕ್ಷ ಚಲವಾದಿ, ಆನಂದ ಕಾಳಿ, ಸಂಗಮೇಶ ದೊಡ್ಡಮನಿ, ಮಾರುತಿ ಜವಳಿ, ಮಂಜುನಾಥ ಮಕ್ಕಳಗೇರಿ, ವಿನೋದ ಕಾಳಿ, ಲಕ್ಷ್ಮಣ ಚಲವಾದಿ ಹಾಗೂ ಹಲವಾರು ವಿದ್ಯಾರ್ಥಿಗಳು , ಗ್ರಾಮದ ಮುಖಂಡರುಗಳು ಪಾಲ್ಗೊಂಡಿದ್ದರು..