ಶ್ರೀ ಸಂತ ಶಿರೋಮಣಿ ನಾಮದೇವ ಮಹಾರಾಜರ ಪುಣ್ಯತಿಥಿ ಜರುಗಿತು

ಹುಕ್ಕೇರಿ ಶ್ರೀ ಸಂತ ಶಿರೋಮಣಿ ನಾಮದೇವ ಮಹಾರಾಜರ ಪುಣ್ಯತಿಥಿಯ ಅಂಗವಾಗಿ ಶ್ರೀ ಅಕ್ಕಮಹಾದೇವಿ ಸಭಾಂಗಣದಲ್ಲಿ ಶ್ರೀ ನಾಮದೇವ ಮಹಾರಾಜರ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿದರು
ಹ.ಬ.ಪ. ಬಾಬಾಮಹಾರಾಜರ ಹುಪ್ಪರಿಕರ ಇವರಿಂದ ಪ್ರವಚನ ಹಾಗೂ ಹರಿ ಭಜನೆ ಸಮಸ್ತ ಸಂತರು ದಡ್ಡಿ ಬೆಳವಿ ಹಾಗೂ ಹುಕ್ಕೇರಿ ಇವರಿಂದ ಜರಗಿತು
ಮಧ್ಯಾಹ್ನ ಮಹಾಪ್ರಸಾದ ಜರಗಿತು ಹಾಗೂ
ಶ್ರೀ ಸಂತ ಶಿರೋಮಣಿ ನಾಮದೇವ ಮಹಾರಾಜರ ಭಾವಚಿತ್ರಕ್ಕೆ ಪುಷ್ಪಾರ್ಚನೆ ಆರತಿಯೊಂದಿಗೆ ಕಾರ್ಯಕ್ರಮ ಮುಕ್ತಾಯಗೊಳಿಸಲಾಯಿತು
ವಾರಕರಿ ಪಂಥದ ಮಹಾನ್‌ ಸಂತ ನಾಮದೇವ ಮಹಾರಾಜ್‌. ಅವರ ಪುಣ್ಯದಿನ ಇಂದು. ಆಷಾಢ ಕೃಷ್ಣ ತ್ರಯೋದಶಿ. ದೇಶಾದ್ಯಂತ ಸಂಚರಿಸಿ ಭಾಗವತ ಧರ್ಮ ಪ್ರಚಾರ ಮಾಡಿದ ನಾಮದೇವ ಮಹಾರಾಜ್‌ ಅನೇಕ ಮರಾಠಿ ಅಭಂಗ ರಚಿಸಿದ್ದಾರೆ. ʻಅಮೃತಾಹುನೀ ಗೋಡ ನಾಮ ತುಝೆ ದೇವʼ ಎಂಬ ಮರಾಠಿ ರಚನೆ ಜನಪ್ರಿಯ. ಇದರ ಕನ್ನಡ ಅನುವಾದ ʻಅಮೃತಕ್ಕುತಾ ರುಚಿ ನಾಮ ನಿನ್ನದೇವʼ ವಿಠಲ ಭಕ್ತರ ನಡುವೆ ಪ್ರಸಿದ್ಧ.

ಈ ಸಂದರ್ಭದಲ್ಲಿ.ಮಾರುತಿ ಬೊಂಗಾಳೆ.ನಾಮದೇವ ಬೊಂಗಾಳೆ.ರಾಜು ಚಿಕ್ಕೋರ್ಡ್.ಪ್ರಕಾಶ್ ಚಿಕ್ಕೋರ್ಡ್.ಪ್ರಸಾದ್ ಬೊಂಗಾಳೆ.ಸುಶಾಂತ ಬೊಂಗಾಳೆ.ಪ್ರಭಾಕರ್ ಬೋಕರೇ.ಸಂದೀಪ್ ಚೀಕ್ಕೋರ್ಡ್.
ಶುಭಂ ಸುನಿಲ್ ಬೊಂಗಾಳೆ.
ದೀಪಕ್ ಲಾಳಗೆ.ಸರ್ವ ನಾಮದೇವ ಸಿಂಪಿ ಸಮಾಜದ ಗುರುಹಿರಿಯರು ಮುಖಂಡರು ಮಹಿಳೆಯರು ಮಕ್ಕಳು ಉಪಸ್ಥಿತರಿದ್ದರು.

ವರದಿ ಸದಾನಂದ ಎಂ

error: Content is protected !!