ಲಾಸ್ಟ್ ಬೆಂಚ್ ಗೆ ವಿದಾಯ ವಿದ್ಯಾರ್ಥಿಗಳಲ್ಲಿ ಮಂದಹಾಸ

ಚಿಂಚೋಳಿ : ಪಟ್ಟಣದ ಪ್ರತಿಷ್ಠಿತ ಶ್ರೀ ವೀರೇಂದ್ರ ಪಾಟೀಲ ಕನ್ನಡ ಮಾಧ್ಯಮ ಶಾಲೆಯಲ್ಲಿ ಲಾಸ್ಟ್ ಬೆಂಚ್ ಗಳಿಗೆ ವಿದಾಯ ಹೇಳಿದ್ದು ಇಂಗ್ಲೀಷ್ ಅಕ್ಷರದ ‘ಯು’ ಆಕಾರ ಪದ್ಧತಿಯನ್ನು ಇದೇ ವರ್ಷದಿಂದಲೇ ಜಾರಿ ಮಾಡಿದ್ದಾರೆ. ಜಿಲ್ಲೆಯಲ್ಲಿಯೇ ಪ್ರಥಮ ಬಾರಿಗೆ ಈ ರೀತಿ ಮಾಡಿದ್ದು ಶ್ರೀ ವೀರೇಂದ್ರ ಪಾಟೀಲ ಕನ್ನಡ ಮಾಧ್ಯಮ ಶಾಲೆ ವಿಶೇಷವಾಗಿದೆ. ಇದರಿಂದ ಕನ್ನಡ ಮಾಧ್ಯಮದಲ್ಲಿ ಕಲಿಯುತ್ತಿರುವ ವಿದ್ಯಾರ್ಥಿಗಳಲ್ಲಿ ಹೆಚ್ಚಿನ ಹುಮ್ಮಸ್ಸು ಹಾಗೂ ಮಂದಹಾಸ ಉಂಟುಮಾಡಿದೆ ಕಲಿಕೆಯಲ್ಲಿ ಹೆಚ್ಚಿನ ಮುತುವರ್ಜಿ ವಹಿಸುತ್ತಿದ್ದಾರೆ ಪೋಷಕರಲ್ಲಿ ಮಕ್ಕಳ ಕಲಿಕೆಯಿಂದ ಹರ್ಷ ಉಂಟಾಗುತ್ತಿದೆ.

ಶಾಲೆಯ ಮುಖ್ಯೋಪಾದಾಯರಾದ ವಿಶ್ವನಾಥ ರೆಡ್ಡಿ ವರದಿಗಾರರೊಂದಿಗೆ ಮಾತನಾಡಿ ಪ್ರತಿ ಸಾರಿಯೂ ಕೂಡ ಪಾಲಕರು ಹಾಗೂ ಮಕ್ಕಳ ಲಾಸ್ಟ್ ಬೆಂಚ್ ಕೂಡಿಸಿರುವ ಬಗ್ಗೆ ಸಮಸ್ಯೆ ಎದುರಾಗುತ್ತಿತ್ತು ಅದನ್ನು ನಿವಾರಿಸಲು ನಾವು ಈ ವರ್ಷದಿಂದಲೇ 1 ನೇ ತರಗತಿಯಿಂದ 8 ನೇ ತರಗತಿವರೆಗೆ ಇಂಗ್ಲೀಷ್ ಅಕ್ಷರದ ಯು ಆಕಾರ ಪದ್ಧತಿಯನ್ನು ಜಾರಿ ಮಾಡಿದ್ದು ಇದರಿಂದ ಕೊನೆಯ ಬೆಂಚ್ ನಲ್ಲಿ ಕೂಡುವಂತಹ ಸಮಸ್ಯೆ ಇರುವುದಿಲ್ಲ ಇದರಿಂದ ಮಕ್ಕಳು ಕೂಡ ಇದರಿಂದ ಮಕ್ಕಳು ಕೂಡ ಓದಿನ ಕಡೆ ಹೆಚ್ಚಿನ ಆಸಕ್ತಿ ವಹಿಸುತ್ತಿದ್ದು ಪೋಷಕರು ಕೂಡ ಹರ್ಷ ವ್ಯಕ್ತಪಡಿಸುತ್ತಿದ್ದಾರೆ ಎಂದು ಹೇಳಿದರು.

ಭಾಗ್ಯಶ್ರೀ 8 ನೇ ತರಗತಿಯ ವಿದ್ಯಾರ್ಥಿನಿ ಪ್ರತಿಕ್ರಿಯಿಸಿ ಹಲೋ ಬರಿ ಲಾಸ್ಟ್ ಬೆಂಚ್ ನಲ್ಲಿ ಕುಳಿತುಕೊಂಡು ಪಾಠ ಕೇಳಲು ಸಮಸ್ಯೆ ಆಗುತ್ತಿತ್ತು ಆದರೆ ಈ ವರ್ಷದಿಂದ ಯು ಆಕಾರ ಪದ್ಧತಿಯಿಂದ ನಮಗೆ ಸರಳವಾಗಿ ಹಾಗೂ ಎಲ್ಲರೂ ಒಂದೇ ಅನ್ನುವ ರೀತಿಯಲ್ಲಿ ವ್ಯಾಸಂಗ ಮಾಡುತ್ತಿದ್ದು ಇದರಿಂದ ನಮಗೆ ತುಂಬಾ ಸಂತೋಷವಾಗುತ್ತಿದೆ ಹಾಗೂ ಕಲಿಕೆಯಲ್ಲಿ ಹೆಚ್ಚಿನ ಆಸಕ್ತಿ ಮೂಡುತ್ತಿದೆ ಎಂದು ಹೇಳಿದರು.

ವರದಿ : ರಾಜೇಂದ್ರ ಪ್ರಸಾದ್

error: Content is protected !!