ಔರಾದ್ : ಹಣೆಗಾಂವ ಹಿರೇಮಠ ಸಂಸ್ಥಾನ ಹಾಗೂ ಶ್ರೀ ದತ್ತ ಸಾಯಿ ಶನೀಶ್ವರ ದೇವಸ್ಥಾನ ಸಮಿತಿ ಅಧ್ಯಕ್ಷರಾದ ಪೂಜ್ಯ ಷ.ಬೃ 108 ಶ್ರೀ ಶಂಕರಲಿಂಗ ಶಿವಾಚಾರ್ಯ ಸ್ವಾಮೀಜಿಗಳು ಲೋಕ ಕಲ್ಯಾಣಾರ್ಥ ನೇರೆಯ ಮಹಾರಾಷ್ಟ್ರದ ನಾಂದೇಡ ಜಿಲ್ಲೆಯ ದೆಗಲೂರ ತಾಲೂಕಿನ ಕೋಕಲಗಾಂವ ಗ್ರಾಮದ ಶ್ರೀ ವೀರಭದ್ರೇಶ್ವರ ದೇಗುಲದಲ್ಲಿ 3ನೇ ವರ್ಷದ ಮೌನ ತಪೋನುಷ್ಠಾನ ಕೈಗೊಳ್ಳಲಿದ್ದಾರೆ ಎಂದು ಶ್ರೀ ವೀರಭದ್ರೇಶ್ವರ ದೇವಸ್ಥಾನ ಸಮಿತಿ ಅಧ್ಯಕ್ಷ ಸುಭಾಷ ಹತ್ತೇ ತಿಳಿಸಿದ್ದಾರೆ.
ಪ್ರತಿ ವರ್ಷ ಪವಿತ್ರ ಶ್ರಾವಣ ಮಾಸದ ಪ್ರಯುಕ್ತ ಮಠದ ಭಕ್ತರ ಶ್ರೇಯಸ್ಸು ಹಾಗೂ ಲೋಕ ಕಲ್ಯಾಣಾರ್ಥವಾಗಿ ಪೂಜ್ಯರು ಮೌನ ತಪೋನುಷ್ಠಾನ ಕೈಗೊಳ್ಳುತ್ತಾರೆ. ಅದರಂತೆ ಈ ವರ್ಷವೂ ಸಹ ಜುಲೈ 25ರಿಂದ ಅಗಸ್ಟ್, 15ರ ವರೆಗೆ 3ನೇ ವರ್ಷದ 21 ದಿನಗಳ ಕಾಲ ಮೌನ ತಪೋನುಷ್ಠಾನ ಕೈಗೊಳ್ಳಲಿದ್ದಾರೆ, ಜೊತೆಗೆ ಮಠದ ಭಕ್ತರು ಹಾಗೂ ಗ್ರಾಮಸ್ಥರಿಂದ ಸಾಮೂಹಿಕ ಜಪ ನಡೆಯಲಿದೆ ಎಂದು ಗುರುಲಿಂಗ ಸ್ವಾಮಿ, ಜಗನ್ನಾಥ ಪಾಟೀಲ ತಿಳಿಸಿದ್ದಾರೆ.
ವರದಿ :ರಾಚಯ್ಯ ಸ್ವಾಮಿ
