ಚಿತ್ತಾಪುರ; ಮಕ್ಕಳಿಲ್ಲದೆ ಕೊರಗುತ್ತಿರುವ ಸಾವಿರಾರು ದಂಪತಿಗಳಿಗೆ ಸುಧಾರಿತ ಐವಿಎಫ್ ಚಿಕಿತ್ಸೆ ನೀಡುವ ಮೂಲಕ ಸಂತಾನ ಭಾಗ್ಯ ಒದಗಿಸಿದ ಸೋಲಾಪುರದ ಬಲ್ದಾವಾ ಆಸ್ಪತ್ರೆಯಲ್ಲಿ ವಿಶ್ವ ಐವಿಎಫ್ ದಿನಾಚರಣೆ ಪ್ರಯುಕ್ತ ಆಗಸ್ಟ್ 3 ರಂದು ಬೆಳಿಗ್ಗೆ 10 ಗಂಟೆಗೆ ಉಚಿತ ಫಲವತ್ತತೆ(ಬಂಜೇತನ ನಿವಾರಣಾ)ತಪಾಸಣೆ ಶಿಬಿರ ಆಯೋಜಿಸಲಾಗಿದೆ.
ಮದುವೆಯಾದ ಸಾವಿರಾರು ದಂಪತಿಗಳು ಗರ್ಭಧಾರಣೆಯ ಸಮಸ್ಯೆ ಎದುರಿಸುತ್ತಿರುವುದು ಪ್ರಸ್ತುತ ಸಾಮಾನ್ಯ ಸಂಗತಿಯಾಗಿದೆ. ಇದಕ್ಕೆ ‘ವಂಧ್ಯತ್ವ’ ಎಂದು ಕರೆಯಲಾಗುತ್ತದೆ. ಆದರೆ ಇದು ಕೇವಲ ಮಹಿಳೆಯ ಸಮಸ್ಯೆ ಅಲ್ಲ- ಪುರುಷರಲ್ಲಿಯೂ ಸ್ಫೋಟವಾಗಿ ಕಂಡುಬರುತ್ತಿರುವ ಗಂಭೀರವಾದ ಸಮಸ್ಯೆಯಾಗಿದೆ. ದಂಪತಿ ವರ್ಷವಿಡಿ ಸಂಭೋಗದಲ್ಲಿ ತೊಡಗಿದ್ದರೂ ಸಹ ಮಹಿಳೆ ಗರ್ಭಧಾರಣೆಯಾಗದ ಸ್ಥಿತಿಗೆ ತಲುಪಿದಾಗ ವಂಧ್ಯತ್ವ ಎಂದು ವೈದ್ಯಕೀಯ ಪರಿಭಾಷೆಯಲ್ಲಿ ಕರೆಯಲಾಗುತ್ತದೆ. ಸುಮಾರು 10 ದಂಪತಿಗಳಲ್ಲಿ 1 ದಂಪತಿ ಈ ಸಮಸ್ಯೆಯಿಂದ ಬಳಲುತ್ತಿರುತ್ತಾರೆ. ಎಂಬುವುದು ವೈದ್ಯಕೀಯ ವರದಿಯಿಂದ ದೃಢಪಟ್ಟಿದೆ. ಆದ್ದರಿಂದ ಬಂಜೇತನ ಸಮಸ್ಯೆಯಿಂದ ಬಳಲುತ್ತಿರುವ ದಂಪತಿಗಳಿಗೆ ಈ ಉಚಿತ ಶಿಬಿರ ವರದಾನವಾಗಿದೆ.
ಐವಿಎಫ್ ಎಂದರೇನು; ಫಲವತ್ತತೆ ಸಮಸ್ಯೆಗಳಿರುವ ಜನರಿಗೆ ಮಗುವನ್ನು ಹೊಂದಲು ಸಹಾಯ ಮಾಡಲು ಲಭ್ಯವಿರುವ ಹಲವಾರು ತಂತ್ರಗಳಲ್ಲಿ ಇನ್ ವಿಟ್ರೊ ಫಲೀಕರಣ (IVF) ಒಂದಾಗಿದೆ. ಚಿಕಿತ್ಸೆಯ ಪ್ರಕ್ರಿಯೆಯಲ್ಲಿ, ಮಹಿಳೆಯ ಅಂಡಾಶಯದಿಂದ ಮೊಟ್ಟೆಯನ್ನು ತೆಗೆದು ಪ್ರಯೋಗಾಲಯದಲ್ಲಿ ವೀರ್ಯದೊಂದಿಗೆ ಫಲವತ್ತಾಗಿಸಲಾಗುತ್ತದೆ. ಭ್ರೂಣ ಎಂದು ಕರೆಯಲ್ಪಡುವ ಫಲವತ್ತಾದ ಮೊಟ್ಟೆಯನ್ನು ನಂತರ ಮಹಿಳೆಯ ಗರ್ಭಾಶಯಕ್ಕೆ ಹಿಂತಿರುಗಿಸಲಾಗುತ್ತದೆ ಮತ್ತು ಬೆಳೆಯಲಾಗುತ್ತದೆ ಎಂಬುವುದು ಖ್ಯಾತ ಭ್ರೂಣಶಾಸ್ತ್ರಜ್ಞೆ ಡಾ.ಪ್ರತಿಭಾ ತಿಳಿಸಿದ್ದಾರೆ.
ವಂಧ್ಯತ್ವಕ್ಕೆ ಕಾರಣ: ಪುರುಷರಲ್ಲಿರುವ ಕಮ್ಮಿಯಾದ (Low sperm count)
ಮಹಿಳೆಯರಲ್ಲಿ ಪಾಲಿಸಿಸ್ಟಿಕ್ ಓವೇರಿ ಸಿಂಡ್ರೋಮ್ (PCOS) ಹಾರ್ಮೋನ್ ಅಸಮತೋಲನ ಸೇರಿದಂತೆ ತೀವ್ರ ಮಾನಸಿಕ ಒತ್ತಡ, ಪ್ರಸ್ತುತ ಇರುವ ಜೀವನಶೈಲಿಯೇ ಸಮಾಜದಲ್ಲಿ ಬಂಜೇತನ ಹೆಚ್ಚುವುದಕ್ಕೆ ಕಾರಣವಾಗುತ್ತಿದೆ. ಎಂಬ ಸ್ಫೋಟಕ ವರದಿಯಿಂದ ಕುಟುಂಬಗಳಲ್ಲಿ ಆತಂಕ ಮೂಡಿದೆ.
ವಂಧ್ಯತ್ವ(ಬಂಜೇತನ ನಿವಾರಣೆಗೆ) ಇಂದಿನ ವೈಜ್ಞಾನಿಕ ಸುಧಾರಿತ ಸಾಧನಾಗಳಿಂದ ಸಾಧ್ಯ:
ಬಂಜೇತನದಿಂದ ಬಳಲುತ್ತಿರುವ ಸಾವಿರಾರು ದಂಪತಿಗಳಿಗೆ ಪ್ರಸ್ತುತ ಪ್ರಗತಿ ಹೊಂದಿದ ಸುಧಾರಿತ ವೈಜ್ಞಾನಿಕ ತಂತ್ರಜ್ಞಾನದಿಂದ
ಮತ್ತು ವೈದ್ಯಕೀಯ ಕ್ಷೇತ್ರದಲ್ಲಿ ಸಂಭವಿಸಿದ ಪ್ರಗತಿಯಿಂದಾಗಿ, ಐಯುಐ, ಐವಿಎಫ್, ಐಸಿಎಸ್.ಐ ಚಿಕಿತ್ಸೆಗಳಿಂದ ಅನೇಕ ದಂಪತಿಗಳಿಗೆ ಸಂತಾನದ ಭಾಗ್ಯ ಸಾಧ್ಯವಾಗಿದೆ.
ಆದ್ದರಿಂದ ಬಂಜೇತನದಿಂದ ಬಳಲುತ್ತಿರುವ ದಂಪತಿಗಳು ಐವಿಎಫ್ ಚಿಕಿತ್ಸೆಯನ್ನು ಯಾವುದೇ ರೀತಿ ಮುಜುಗರ, ನಾಚಿಕೆ ಇಲ್ಲದೇ ಮಾಡಿಕೊಳ್ಳಬಹುದಾಗಿದೆ. ಇದು ಆರೋಗ್ಯದ ಒಂದು ಭಾಗವಾಗಿದೆ ಅಷ್ಟೇ.
ಬಂಜೇತನ ಸಮಸ್ಯೆ ಉಲ್ಬಣವಾಗುವ ಮುಂಚೆಯೇ ತಪಾಸಣೆ ಮಾಡಿ, ನುರಿತ ಭ್ರೂಣಶಾಸ್ತ್ರಜ್ಞರ ಮಾರ್ಗದರ್ಶನದಲ್ಲಿ ಸಾಗಿದರೆ, ಖಂಡಿತವಾಗಿ ಸಂತಾನದ ಆಸೆ ನೆರವೇರುತ್ತದೆ. ಎಂದು ಬಲ್ದಾವಾ ಆಸ್ಪತ್ರೆಯ ಫರ್ಟಿಲಿಟಿ ಪಾಯಿಂಟ್ ಕೇಂದ್ರದ ನಿರ್ದೇಶಕಿ ಮತ್ತು ಡಿಎಫ್‌ಪಿಯಲ್ಲಿ ಬಂಗಾರದ ಪದಕ ವಿಜೇತೆ ಹಾಗೂ ಪ್ರಸೂತಿ, ಸ್ತ್ರೀರೋಗ ಖ್ಯಾತ ಭ್ರೂಣಶಾಸ್ತ್ರಜ್ಞೆ ಡಾ.ಪ್ರತಿಭಾ ಅವರ ಅಭಿಪ್ರಾಯ.
ಶಿಬಿರದಲ್ಲಿ ಕೈಗೊಳ್ಳುವ ಉಚಿತ ತಪಾಸಣೆ: ಉಚಿತ ಮೊದಲ ಸಮಾಲೋಚನೆ, ಉಚಿತ ಅಲ್ಟ್ರಾಸೌಂಡ್, ಉಚಿತ ವೀರ್ಯ ಪರೀಕ್ಷೆ, ತಜ್ಞ ವೈದ್ಯರ ಸಮರ್ಪಿತ ಆರೈಕೆ, ಉಚಿತ ಅಲ್ಟ್ರಾಸೊನೋಗ್ರಫಿ, ನವೀನ ಉಪಕರಣಗಳೊಂದಿಗೆ ಪರಿಣಾಮಕಾರಿ ಚಿಕಿತ್ಸೆ ನೀಡಲಾಗುತ್ತದೆ. ಭವಿಷ್ಯದ ಎಲ್ಲಾ ಫಲವತ್ತತೆ ಚಿಕಿತ್ಸೆಗಳ ಮೇಲೆ 25% ರಷ್ಟು ರಿಯಾಯಿತಿ ದರದಲ್ಲಿ ಚಿಕಿತ್ಸೆ ನೀಡಲಾಗುತ್ತದೆ. ಶಿಬಿರಕ್ಕೆ ಬರುವ ರೋಗಿಗಳು 100 ರೂ. ಪಾವತಿಸಿ ನೋಂದಣಿ ಮಾಡಿಕೊಳ್ಳಬೇಕು. ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ.
ಎಸ್.ಎಸ್ ಬಲ್ದಾವಾ ಆಸ್ಪತ್ರೆಯಲ್ಲಿ ವಿವಿಧ ತಂತ್ರಜ್ಞಾನ ಸೌಲಭ್ಯಗಳ ಲಭ್ಯ: ವಿಟ್ರೊ ಫಲೀಕರಣ, ಘನೀಕೃತ ಭ್ರೂಣ ವರ್ಗಾವಣೆ, ಬ್ಲಾಸೊಸಿಸ್ಟ್ ವರ್ಗಾವಣೆ, ಕ್ರಯೋರಕ್ಷಣೆ, ಫಲವತ್ತತೆ ವರ್ಧಕ, ಎಂಡೋಸ್ಕೋಪಿಕ್ ಶಸ್ತ್ರ ಚಿಕಿತ್ಸೆ ನೀಡಲಾಗುತ್ತಿದೆ.
ರಾಷ್ಟ್ರ, ಅಂತರಾಷ್ಟ್ರೀಯ ಮಟ್ಟದ ಜರ್ನಲ್ ಗಳಲ್ಲಿ ಡಾ.ಪ್ರತಿಭಾ ಸಚೀನ್ ರವರು ಬಂಜೇತನ ಕುರಿತು ಬರೆದ ಪ್ರಬಂಧಗಳ ಪ್ರಕಟ:
ಪಿಸಿಓಎಸ್, ಎಎಂಹೆಚ್ ಮತ್ತು ಬಂಜೆತನ ಸಂಬಂಧಿತ ವಿಷಯಗಳ ಕುರಿತು ಇಂಡಿಯನ್ ಹೆಲ್ತ್ ಜರ್ನಲ್, ಜೆ. ಹಮ್ ರೆಪ್ರೊ ಸೈನ್ಸ್, ಇಂಡಿಯನ್ ಪ್ರಸೂತಿ ಮತ್ತು ಸ್ತ್ರೀರೋಗ ಶಾಸ್ತ್ರ, ರಿಸರ್ಚ್ ಗೇಟ್ ಕ್ರಾನಿಕಲ್ಸ್ ರಾಷ್ಟ್ರೀಯ ಜರ್ನಲ್ ಗಳಲ್ಲಿ 12 ಪ್ರಬಂಧ ಪ್ರಕಟವಾಗಿವೆ. ಹಾಗೆ
ಜನವರಿ 2022 ರಲ್ಲಿ “95 ಕೋವಿಡ್ ಪಾಸಿಟಿವ್ ಗರ್ಭಿಣಿ ರೋಗಿಗಳ ಯಶಸ್ವಿ ಭ್ರೂಣದ ಫಲಿತಾಂಶ” ಕುರಿತು ಅಂತರರಾಷ್ಟ್ರೀಯ ಮಟ್ಟದ ಜರ್ನಲ್ ನಲ್ಲಿ ಡಾ.ಪ್ರತಿಭಾ ಅವರ ಪ್ರಬಂಧಗಳು ಪ್ರಕಟವಾಗಿವೆ.
ಆಸ್ಪತ್ರೆ ದೂರವಾಣಿ ಸಂಖ್ಯೆ: 840890852|906770015.
ಆಸ್ಪತ್ರೆ ವಿಳಾಸ:
ವಸಂತ್ ವಿಹಾರ್, ಸಾಯಿ ಸೂಪರ್ ಮಾರ್ಕೆಟ್ ಹತ್ತಿರ ಜುನಾ ಪುನಾ ನಾಕಾ, ಸೋಲಾಪುರ.
ಬಾಕ್ಸ್ ಐಟಂ
ಬಲ್ದಾವಾ ಆಸ್ಪತ್ರೆ ಟೆಸ್ಟ್ ಟ್ಯೂಬ್ ಬೇಬಿ ಸೆಂಟರ್ ನಲ್ಲಿ ಸುಧಾರಿತ ತಂತ್ರಜ್ಞಾನ ಬಳಸಿ ಐವಿಎಫ್ ಮೂಲಕ 2022 ರಿಂದ 2025ರವರೆಗೆ
ಬಂಜೇತನ ಸಮಸ್ಯೆ ಎದುರಿಸುತ್ತಿರುವ ಕಡಿಮೆ ಫಲವತ್ತತೆ ಹೊಂದಿದ ಒಟ್ಟು 3676 ಮಹಿಳೆಯರಿಗೆ ಚಿಕಿತ್ಸೆ ನೀಡಲಾಗಿದೆ. ಇದರಲ್ಲಿ ಒಟ್ಟು 2195 ದಂಪತಿಗಳು ಐವಿಎಫ್ ಚಿಕಿತ್ಸೆ ಪಡೆದು, ಸಂತಾನ ಭಾಗ್ಯ ಪಡೆದಿದ್ದಾರೆ.
ಇಲ್ಲಿಯವರೆಗೆ, ಇದು ಅತ್ಯಂತ ಪರಿಣಾಮಕಾರಿ ಮತ್ತು ವ್ಯಾಪಕವಾಗಿ ಬಳಸಲಾಗುವ ನೆರವಿನ ಸಂತಾನೋತ್ಪತ್ತಿ ತಂತ್ರಜ್ಞಾನಗಳಲ್ಲಿ ಐವಿಎಫ್ ಚಿಕಿತ್ಸೆ ಒಂದಾಗಿದೆ.
ವೈದ್ಯಕೀಯ ಸಂಶೋಧನೆ ಪ್ರಕಾರ ವಯಸ್ಸಿನ ಆಧಾರದ ಮೇಲೆ ಅತಿ ಹೆಚ್ಚು ಮಹಿಳೆಯರು ಗರ್ಭಧರಿಸುವ ಸಾಧ್ಯತೆ ಇದೆ. ಮಹಿಳೆಯರಲ್ಲಿ ಕಂಡುಬರುವ ಸೋಂಕುಗಳು, ಥೈರಾಯ್ಡ್, ಅನಾಂಶಿಕ ಸಮಸ್ಯೆ ಸೇರಿದಂತೆ ವಿವಿಧ ಕಾರಣದಿಂದ ಬಂಜೇತನ ಸಮಸ್ಯೆ ಎದುರಿಸುತ್ತಿರುವ 21ರಿಂದ 31 ಮಹಿಳೆಯರಲ್ಲಿ ಶೇ.84 ರಷ್ಟು ಮಹಿಳೆಯರು ಗರ್ಭಧರಿಸುವ ಸಾಧ್ಯತೆ ಇದೆ. ಅದೇ ರೀತಿ 40 ವರ್ಷ ಮೇಲ್ಪಟ್ಟ ಮಹಿಳೆಯರಲ್ಲಿ ಹೆಚ್ಚು ಅಂಡಾಣು ಉತ್ಪತ್ತಿಯಾಗುವ ಸಾಧ್ಯತೆ ಕಡಿಮೆ ಇರುತ್ತದೆ. ಆದ್ದರಿಂದ ಶೇ.50 ರಷ್ಟು ಮಹಿಳೆಯರು ಮಾತ್ರ ಗರ್ಭಧರಿಸುವ ಸಾಧ್ಯತೆ ಇದೆ. ಇದರಿಂದ ಬಂಜೇತನದಿಂದ ಬಳಲುತ್ತಿರುವ ಮಹಿಳೆಯರು ಬೇಗ ಚಿಕಿತ್ಸೆ ಪಡೆದುಕೊಂಡರೇ ತಮ್ಮ ಮುಂದಿನ ಜೀವನ ಸುಕಾಕರವಾಗಲಿದೆ. ಎಂದು ಬಲ್ದಾವಾ ಆಸ್ಪತ್ರೆಯ ಫರ್ಟಿಲಿಟಿ ಪಾಯಿಂಟ್ ಕೇಂದ್ರದ ನಿರ್ದೇಶಕಿ ಮತ್ತು ಡಿಎಫ್‌ಪಿಯಲ್ಲಿ ಬಂಗಾರದ ಪದಕ ವಿಜೇತೆ ಹಾಗೂ ಪ್ರಸೂತಿ
ಸ್ತ್ರೀರೋಗ ಖ್ಯಾತ ಭ್ರೂಣಶಾಸ್ತ್ರಜ್ಞೆ ಡಾ.ಪ್ರತಿಭಾ ಅವರು ತಿಳಿಸಿದ್ದಾರೆ.