ಭಗವಾನ್ 1008 ಪಾರ್ಶ್ವನಾಥ ತೀರ್ಥಂಕರ ಮೋಕ್ಷ ಕಲ್ಯಾಣ ಮಹೋತ್ಸವ

ಮುಕುಟಸಪ್ತಮಿ 2025, ಶ್ರೀ ಕ್ಷೇತ್ರ ಶ್ರವಣಬೆಳಗೊಳ, ಪರಮಪೂಜ್ಯ ಜಗದ್ಗುರುಗಳು ಸ್ವಸ್ತಿ ಶ್ರೀ ಚಾರುಕೀರ್ತಿ ಪಂಡಿತಾಚಾರ್ಯ ವರ್ಯ ಭಟ್ಟಾರಕ ಪಟ್ಟಾಚಾರ್ಯ ಮಹಾಸ್ವಾಮಿಗಳವರ ಪಾವನ ಸಾನಿಧ್ಯದಲ್ಲಿ ಮತ್ತು ಮಾರ್ಗದರ್ಶನದಲ್ಲಿ ವಿಜೃಂಭಣೆಯಿಂದ ಕಾರ್ಯಕ್ರಮಗಳನ್ನು ನೆರವೇರಿಸಲಾಯಿತು, ಈ ಸಮಯದಲ್ಲಿ ಶ್ರೀಗಳು ಶ್ರಾವಕ ಶ್ರಾವಕಿಯರಿಗೆ ಆಶೀರ್ವಚನ ನೀಡುವ ಮೂಲಕ,ಸುಖದಿಂದ ದುಃಖ ಇರುತ್ತದೆ ದುಃಖದಿಂದ ಸುಖ ಇರುತ್ತದೆ ಜೈನ ಸಮಾಜವು ರಾಜ್ಯದಲ್ಲಿ ಅಲ್ಪಸಂಖ್ಯಾತರ ಸಮಾಜ ವಾಗಿದ್ದರು ಧಾರ್ಮಿಕ ಕ್ಷೇತ್ರದಲ್ಲಿ ತನ್ನದೇ ಆದಂತಹ ಆಚರಣೆ ಹೊಂದಿದೆ ಅಹಿಂಸೋ ಪರಮೋ ಧರ್ಮ ಎಂದು ಸಾರಿದ ಧರ್ಮ, ಜೈನ ಧರ್ಮ ಬಡವರ ಹಾಗೂ ಹಿಂದುಳಿದ ವರ್ಗದವರಿಗೆ ಸಹಾಯ ಮಾಡಲು ಮುಂದಾಗಬೇಕು, ಒಳ್ಳೆಯ ಶಿಕ್ಷಣ ಸಂಸ್ಥೆಗಳಿಂದ ಒಳ್ಳೆಯ ಶಿಕ್ಷಣ ನೀಡುವಂತಾಗಬೇಕು, ಅನಕ್ಷರತೆ ಹಾಗೂ ಅಸ್ಥಿರತೆ ಹೋಗಲಾಡಿಸಿ ಎಲ್ಲ ಧರ್ಮೀಯರೊಂದಿಗೆ ಸೌಜನ್ಯತೆ ಸಮಬಾಳು ಹೊಂದಬೇಕು ಎಂದು, 31/07/2025 ರಂದು ವಿಜಯಪುರ ನಗರದ ಮಹೇಂದ್ರ ಗಿರಿಯಲ್ಲಿರುವ ಭಗವಾನ್ 1008 ಸಹಸ್ರಪಣೆ ಪಾರ್ಶ್ವನಾಥ ಮಂದಿರದಲ್ಲಿ ಆಶೀರ್ವಚನ ನೀಡಿದರು ಬೆಳಿಗ್ಗೆ 7:00ಗೆ ಭಗವಾನ್ ಮಹಾವೀರ್ ಮಂದಿರದಿಂದ 54 ಕಳಶ ಜಾನ್ಜ್ ಪಥಕ್ ಮತ್ತು ಬ್ಯಾಂಡ್ ಬಾಜಾ ಮತ್ತು ಕುದುರೆಗಳೊಂದಿಗೆ, ವಿಶೇಷ ಅಲಂಕಾರ ರಥ ದೊಂದಿಗೆ ಭವ್ಯ ಮೆರವಣಿಗೆ ನಡೆಯಿತು ಭಗವಾನ್ ಪಾರ್ಶ್ವನಾಥ ತೀರ್ಥಂಕರ ಹಾಗೂ ಜಗನ್ಮಾತೆ ಪದ್ಮಾವತಿ ದೇವಿಯ ವಿಶೇಷ ಅಭಿಷೇಕ ಹಮ್ಮಿಕೊಳ್ಳಲಾಯಿತು ಈ ಸಂದರ್ಭದಲ್ಲಿ ಭಗವಾನ್ ಪಾಶ್ವನಾಥ ಸೇವಾ ಸಮಿತಿಯ ಎಲ್ಲ ಯುವಕರು ಮತ್ತು ಪದ್ಮಿನಿ ಮಹಿಳಾ ಮಂಡಳಿ ವಿಜಯಪುರ ಬಾಗಲಕೋಟ ಬೆಳಗಾವಿ ಚಿಕ್ಕೋಡಿ ಸಾಂಗ್ಲಿ ಉಗಾರ ಸೋಲಾಪುರ್ ಪುಣೆಯ ಪಂಡರಪುರ ಜೈನ ಶ್ರಾವಕ ಮತ್ತು ಶ್ರಾವಕಿಯರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿದ್ದರು.

ವರದಿ : ದೌಲಪ್ಪ ಮನಗೋಳಿ

error: Content is protected !!