ಲೋಕಶಾಹಿರ ಸತ್ಯಶೋಧಕ ಡಾ!! ಅಣ್ಣಭಾವು ಸಾಠೆ ಮರಾಠಿಯ ಹೆಸರಾಂತ ಬರಹಗಾರರು ಹಾಗೂ ದಲಿತ ಚಳುವಳಿಯ ಮಹಾನ್ ನಾಯಕರು ತಮ್ಮ ಮಾತೃಭಾಷೆಯಲ್ಲಿ ಸಾಮಾಜಿಕ ಅಸಮಾನತೆಯನ್ನು ಮೂಡನಂಬಿಕೆಗಳ ಕಲ್ಪನೆಗಳನ್ನು ತೊಡೆದು ಹಾಕುವಲ್ಲಿ ಇವರ ಲೇಖನಗಳು ಅದ್ಭುತ ಕಾರ್ಯಗಳನ್ನು ಮಾಡಿದವು ಅದರಂತೆ ಡಾ. ಬಾಬಾ ಸಾಹೇಬ್ ಅಂಬೇಡ್ಕರ್ ಅವರ ಅನುಯಾಯಿಯಾಗಿ ಶೋಷಿತ ವರ್ಗದ ಏಳಿಗೆಗಾಗಿ ತಮ್ಮ ಸಾಹಿತ್ಯದ ಜೊತೆಗೆ ಚಳವಳಿಗಳ ಮೂಲಕ ಹೋರಾಟ ಮಾಡಿದರು ಅಷ್ಟೇ ಅಲ್ಲದೆ ದಲಿತ ಜನಾಂಗದಲ್ಲಿ ಬೇರೂರಿದ ದಾಸತ್ವವನ್ನು ತೊಡೆದು ಹಾಕುವಲ್ಲಿ ಇವರ ಹೋರಾಟ ಸ್ಮರಣೀಯವಾದದ್ದು. ಶೋಷಣೆಯ ಕಟು ಅನುಭವಗಳನ್ನು ಸ್ವತಃ ಪಡೆದ ಇವರು ದಲಿತ ಜನಾಂಗದ ಏಳಿಗೆಗಾಗಿ ಹಲವಾರು ಲೇಖನಗಳ ಮೂಲಕ ಶೋಷಿತ ಜನಾಂಗವನ್ನು ಸಮಾಜದ ಮುಖ್ಯ ವಾಹಿನಿಗೆ ತರುವಲ್ಲಿ ಯಶಸ್ವಿಯಾದರು ಎಂದು ದಲಿತ ಸಂಘಟನೆಗಳ ಮಹಾ ಒಕ್ಕೂಟದ ಅಧ್ಯಕ್ಷರಾದ ಪರಶುರಾಮ್ ಲಂಬು ಸತ್ಯಶೋಧಕ ಡಾ!! ಅಣ್ಣಾಭಾವು ಸಾಠೆ ಸಂಘಟನಾ ಸಮಿತಿ ವಿಜಯ ಪೂರಾ ಸಂಘಟಿಸಿದ ಡಾ!! ಅಣ್ಣಾಭಾವು ಸಾಠೆಯವರ ೧೦೫ ನೇ ಜಯಂತಿ ಕಾರ್ಯಕ್ರಮ ನೆರವೇರಿಸಿ ಮಾತನಾಡಿದರು ಈ ಕಾರ್ಯಕ್ರಮವು ವಿಜಯಪುರ ನಗರದ ಸ್ಟೇಶನ್ ರಸ್ತೆಯಲ್ಲಿರುವ ಡಾ!!ಅಣ್ಣಾಭಾವು ಸಾಠೆ ವೃತ್ತದಲ್ಲಿ ಜರಗಿತು ಈ ಸಂದರ್ಭದಲ್ಲಿ ವಿವಿಧ ಪ್ರಗತಿಪರ ಸಂಘಟನೆಗಳು ಪಾಲ್ಗೊಂಡು ಸಂಘಟನೆಗಳ ಮುಖಂಡರು ಡಾ!! ಅಣ್ಣಾ ಭಾವು ಹಾಗೆ ಜೀವನ ಚರಿತ್ರೆ ಸಾಹಿತ್ಯ ಚಳುವಳಿಗಳ ಬಗ್ಗೆ ಮಾತನಾಡಿ ಇವರ ಲೇಖನಗಳು ಸಾಮಾಜಿಕ ಪರಿವರ್ತನೆಗೆ ಕಾರಣವಾದವು ಇಂತಹ ಮಹಾನ್ ವ್ಯಕ್ತಿಗೆ ಭಾರತ ರತ್ನ ಪ್ರಶಸ್ತಿ ನೀಡಬೇಕೆಂದು ಕೇಂದ್ರ ಸರಕಾರಕ್ಕೆ ಹಾಗೂ ಇವರ ಜಯಂತಿಯನ್ನು ಸಕಾ೯ರದ ವತಿಯಿಂದ ಆಚರಿಸಬೇಕೆಂದು ಸರಕಾರಕ್ಕೆ ಒತ್ತಾಯಿಸಿದರು ಈ ಸಂದರ್ಭದಲ್ಲಿ ಎಲ್ಲಾ ಪ್ರಗತಿಪರ ಸಂಘಟನೆಗಳ ಪದಾಧಿಕಾರಿಗಳು ಮುಖಂಡರು ಸದಸ್ಯರು ಪಾಲ್ಗೊಂಡು ವಿಜ್ರಂಬ ಣೆಯಿಂದ ಆಚರಿಸಲಾಯಿತು ಈ ಕಾರ್ಯಕ್ರಮವನ್ನು ಆಯೋಜಿಸಿದ ಸತ್ಯಶೋಧಕ ಡಾ!! ಅಣ್ಣಾಭಾವು ಸಾಠೆ ಸಂಘಟನಾ ಸಮಿತಿ ವಿಜಯಪುರ ಅಧ್ಯಕ್ಷರಾದ ಸೋಮನಿಂಗ ರಣದೇವಿ ಹಾಗೂ ಸಂಘಟನೆಯ ಎಲ್ಲಾ ಪದಾಧಿಕಾರಿಗಳು ಸದಸ್ಯರುಗಳು ಆಗಮಿತ ಎಲ್ಲಾ ನಾಯಕರುಗಳಿಗೆ ಆತ್ಮೀಯವಾಗಿ ಸ್ವಾಗತಿಸಿ ವಂದಿಸಿದರು.
ಅಧ್ಯಕ್ಷರು
ಸತ್ಯಶೋಧಕ ಅಣ್ಣಾಭಾವು ಸಾಠೆ ಸಂಘಟನಾ ಸಮಿತಿ ವಿಜಯಪುರ.
ವರದಿ : ಅಜೀಜ ಪಠಾಣ.