ಕಾಳಗಿ : ತಾಲೂಕಿನ ಡೊಣ್ಣೂರ್ ಗ್ರಾಮದ ಅಂಗನವಾಡಿ ಕಾರ್ಯಕರ್ತೆ ಪಾರ್ವತಿ ಡೊಣ್ಣೂರ್ ಅವರಿಗೆ ಜುಲೈ 2024ಮತ್ತು ಸೆಪ್ಟೆಂಬರ್ 2024ರ ಸಾಲಿನಲ್ಲಿ ನಡೆದ ಸಂಪೂರ್ಣ ಅಭಿಯಾನ ಕಾರ್ಯಕ್ರಮದಲ್ಲಿ ಸಮರ್ಪಿತ ಸೇವೆ ಮತ್ತು ಕಠಿಣ ಪರಿಶ್ರಮಕ್ಕಾಗಿ ಸೇವೆ ಸಲ್ಲಿಸಿದಕ್ಕೆ ಪಾರ್ವತಿ ಕಲ್ಯಾಣ ಅವರಿಗೆ ಜಿಲ್ಲಾ ಮಟ್ಟದ ಪ್ರಶಸ್ತಿ ನೀಡಿ ಸನ್ಮಾನಿಸಿದರು ಈ ಸಂದರ್ಭದಲ್ಲಿ ಕಲ್ಬುರ್ಗಿ ದಕ್ಷಿಣ ಮತ್ ಕ್ಷೇತ್ರ ಶಾಸಕರಾದ ಅಲ್ಲಮಪ್ರಭು ಪಾಟೀಲ್ ಜಿಲ್ಲಾ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಅಧಿಕಾರಿಗಳದಾ ಶ್ರೀ ರಾಜಕುಮಾರ್ ರಾಠೋಡ್,ಜಿಲ್ಲಾ ಪಂಚಾಂಯತ್ ಯೋಜನಾ ಅಧಿಕಾರಿಗಳಾದ ಶ್ರೀ ಜಗದೇವಪ್ಪ,ಜಿಲ್ಲಾಕೃಷಿ ಜಂಟಿ ನಿರ್ದೇಶಕರು ಸಮದ್ ಪಟೇಲ್ ತಾಲೂಕ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಅಧಿಕಾರಿಯಾದ ಶ್ರೀಮತಿ ಆರತಿ ಬಿ ತುಪ್ಪದ, ಅಂಗನವಾಡಿ ಮೇಲ್ವಿಚಾರಕಿ ಯಾರಾದ ಶ್ರೀಮತಿ ಶೀಲಾದೇವಿ ಅರಸ್, ಅಂಗನವಾಡಿ ಕಾರ್ಯಕರ್ತೆ ಯಾರಾದ ಸುಲೋಚನಾ, ರೂಬಿನಾ,ಪವಿತ್ರ,ಅನೇಕರು ಭಾಗವಹಿಸಿದರು.
ವರದಿ ರಮೇಶ್ ಎಸ್ ಕುಡಹಳ್ಳಿ