ಬೆಳಗಾವಿ ಜಿಲ್ಲೆಯ ಹುಕ್ಕೇರಿ ತಾಲೂಕಿನ ಬಾಡ ಗ್ರಾಮದಲ್ಲಿ ಬಾಬಾ ಸಾಹೇಬ್ ಅಂಬೇಡ್ಕರ ಮೂರ್ತಿ ಪ್ರತಿಷ್ಠಾಪನೆ ಕಾರ್ಯಕ್ರಮ ಹಮ್ಮಿಕೊಂಡಿದ್ದರು. ಗಣ್ಯ ವ್ಯಕ್ತಿಗಳಿಂದ ಬುದ್ಧ, ಬಸವ, ಅಂಬೇಡ್ಕರ್ ಭಾವಚಿತ್ರಕ್ಕೆ ಜ್ಯೋತಿ ಬೆಳಗಿಸಲಾಯಿತು. ಈ ಕಾರ್ಯಕ್ರಮಕ್ಕೆ ಆಗಮಿಸಿದ ರಮೇಶ್ ಕತ್ತಿ ಅವರಿಗೆ ಸದಾಶಿವ ಜಾಡರ್ ಅವರಿಂದ ಮಾಲಾರ್ಪನೇ ಹಾಗೂ ನರೇಶ್ ವಡ್ಡಗೋಲ್ ಇವರಿಂದ ಏ.ಬಿ.ಪಾಟೀಲ್ ಅವರಿಗೆ ಮಾಲಾರ್ಪಣೆ ಮಾಡಲಾಯಿತು. ನಂತರ ರಮೇಶ್ ಕತ್ತಿ ಹಾಗೂ ಏ. ಬಿ.ಪಾಟೀಲ ಅವರ ಹಸ್ತದಿಂದ ಬಾಬಾ ಸಾಹೇಬ್ ಅಂಬೇಡ್ಕರ್ ಅವರ ಮೂರ್ತಿ ಪ್ರತಿಷ್ಠಾಪನೆಗೆ ಭೂಮಿ ಪೂಜೆ ಮಾಡುವ ಮೂಲಕ ಚಾಲನೆ ನೀಡಿದರು. ಬಾಡ ಗ್ರಾಮದ ಭೀಮ ನಗರ ವೃತ್ತದಲ್ಲಿ ಬಾಬಾ ಸಾಹೇಬ್ ಅಂಬೇಡ್ಕರ್ ಮೂರ್ತಿಯನ್ನು ಪ್ರತಿಷ್ಠಾಪನೆ ಮಾಡಲು ಬಾಡ ಗ್ರಾಮದ ಪಂಚಾಯಿತಿಯ ಅಭಿವೃದ್ಧಿ ಅಧಿಕಾರಿಗಳು ಹಾಗೂ ಪಂಚಾಯತಿಯ ಅಧ್ಯಕ್ಷರು ಹಾಗೂ ಚಿಕ್ಕೋಡಿ ಕ್ಷೇತ್ರದ ಮಾಜಿ ಸಂಸದರಾದ ರಮೇಶ್ ಕತ್ತಿಯವರು ಸಹಾಯವನ್ನು ಮಾಡಿರುತ್ತಾರೆ. ಈ ಒಂದು ಶುಭ ಸಮಾರಂಭದಲ್ಲಿ ವಿಕ್ರಮ್ ಕರ್ನಿಂಗ್, ಅಶೋಕ್ ಹಿರೇಕೊಡಿ, ಬಸವರಾಜ್ ತಳವಾರ್, ಸುಖದೇವ್ ಪಾನಬುಡೆ, ರಾಜು ಹಿಂಗ್ಲಜಿ,ರವೀಂದ್ರ ಜಾಡರ್, ಸಂತೋಷ್ ಚಂಗಳೆ,ದಿಲೀಪ್ ಜಾಡರ, ಯುವರಾಜ್ ಥಳ್ಯಾಪಗೋಲ್,ಲವು ಕಾವಳಿಕಟ್ಟಿ, ಸಿಕಂದರ್ ಸನದಿ, ಕಾಶಿನಾಥ್ ದೇವಕತ್ತೆ ಮುಂತಾದ ಹಿರಿಯ ನಾಯಕರು ಹಾಗೂ ಗ್ರಾಮಸ್ಥರು ಉಪಸ್ಥಿತರಿದ್ದರು.
ವರದಿ : ಸದಾನಂದ ಎಂ
