ಚಿಂಚೋಳಿ : ಪಟ್ಟಣದ ಹೊರವಲಯದಲ್ಲಿರುವ ತಾಲೂಕು ಕ್ರೀಡಾಂಗಣದಲ್ಲಿ ಆರ್ ಎಲ್ ಎಚ್ ಪಿ ಸಂಸ್ಥೆ ಮೈಸೂರು, ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ತಾಲೂಕು ಆಡಳಿತ ಹಾಗೂ ಸ್ಥಳೀಯ ಸರ್ಕಾರಿ ಇಲಾಖೆಗಳ
ಸಹಯೋಗದೊಂದಿಗೆ ‘ಆಟದ ಹಕ್ಕಿನ ದಿನ’ 16. 8.25 ರಂದು ಬೆಳಗ್ಗೆ 11:30 ಗಂಟೆಗೆ ತಾಲೂಕಿನ ಕ್ರೀಡಾಂಗಣದಲ್ಲಿ ತಾಲೂಕಿನಲ್ಲಿರುವ 20 ಗ್ರಾಮಗಳ ಹೆಣ್ಣು ಮಕ್ಕಳ ಶಿಕ್ಷಣಕ್ಕೆ ಪ್ರೋತ್ಸಾಹಿಸಲು ವಿವಿಧ ಕ್ರೀಡಾ ಕಾರ್ಯಕ್ರಮಗಳನ್ನು ಹಮ್ಮಿಕೊಂಡಿದ್ದು ಸುಮಾರು 250 ಕ್ಕಿಂತ ಹೆಚ್ಚು ಹೆಣ್ಣು ಮಕ್ಕಳು ಪಾಲ್ಗೊಳ್ಳಲಿದ್ದು, ಕ್ರಿಕೆಟ್ ವಾಲಿಬಾಲ್ ಕಬಡ್ಡಿ ಬುಗುರಿ ಹಗ್ಗ ಜಗ್ಗಾಟ ಇನ್ನೂ ಮುಂತಾದ ಆಟಗಳನ್ನು ಅಡಿಸಲಿದ್ದಾರೆ ಎಂದು ಆರ್ ಎಲ್ ಎಚ್ ಪಿ ಸಂಸ್ಥೆಯ ನಿರ್ದೇಶಕಿ ಸರಸ್ವತಿ ಅವರು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ. ಕಾರ್ಯಕ್ರಮದ ಉದ್ಘಾಟಕರಾಗಿ ಪೌಜಿಯಾ ತರನುಮ ಜಿಲ್ಲಾಧಿಕಾರಿಗಳು, ಅಧ್ಯಕ್ಷತೆಯನ್ನು ಆನಂದ ಎನ್ ಟೈಗರ ಪುರಸಭೆ ಅಧ್ಯಕ್ಷರು, ವಿಶೇಷ ಆವ್ಹಾನಿತರಾಗಿ ಕುಮಾರಿ ದೇವಿ ಶ್ರೀ ಕೆ.ಡಿ. ಸ್ಟೇಟ್ ಲೆವೆಲ್ ಬಾಕ್ಸರ್ ಅಂಡ್ ಕ್ರೀಡಾಪಟು , ಮುಖ್ಯ ಅತಿಥಿಗಳಾಗಿ ಸುವರ್ಣ ಜಗನ್ನಾಥ ಗ್ರಾ. ಪಂ. ಅಧ್ಯಕ್ಷರು ಪೋಲಕಪಳ್ಳಿ, ರಾಜಕುಮಾರ ರಾಠೋಡ ಉಪ ನಿರ್ದೇಶಕರು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ಮಂಜುಳಾ ವಿ ಪಾಟೀಲ ಜಿಲ್ಲಾ ಮಕ್ಕಳ ರಕ್ಷಣಾಧಿಕಾರಿ, ರುದ್ರೇಶ ಎನ್. ಸ್ಟೇಟ್ ಹೆಡ್ ಅಜೀಂ ಪ್ರೇಮಜಿ ಫೌಂಡೇಶನ್, ಸೂರ್ಯಕಾಂತ ಉಪ ನಿರ್ದೇಶಕರು ಶಾಲಾ ಶಿಕ್ಷಣ ಮತ್ತು ಸಾಕ್ಷರತ ಇಲಾಖೆ, ಅಮೃತ ಸಹಾಯ ನಿರ್ದೇಶಕರು ಯುವ ಸಬಲೀಕರಣ, ಸುಬ್ಬಣ್ಣ ಜಮಖಂಡಿ ತಾಲೂಕ ದಂಡಾಧಿಕಾರಿಗಳು, ಶಂಕರ ರಾಠೋಡ ಕಾರ್ಯನಿರ್ವಾಹಕ ಅಧಿಕಾರಿ, ಇನ್ನು ತಾಲೂಕಿನ ವಿವಿಧ ಇಲಾಖೆ ಅಧಿಕಾರಿಗಳು ಉಪಸ್ಥಿತರಿರುವರು.
