ಮಕ್ಕಳ ಬಾಲ್ಯವಿವಾಹ ಕೊಸಂಬೆ ಆಕ್ರೋಶ.. ಶಿಕ್ಷಕರಿಗೆ ಶಾಲೆಯಲ್ಲಿ ಉಪಹಾರ ಕೊಂಡಾಮಂಡಲ ಶಾಲೆಯ ಸಮಸ್ಯೆ ಬಿಚ್ಚಿಟ್ಟ ವಿದ್ಯಾರ್ಥಿಗಳು

ಔರಾದ್ : ಪಟ್ಟಣದ ಕರ್ನಾಟಕ ಪಬ್ಲಿಕ್ ಶಾಲೆಯಗೆ ಶನಿವಾರ ಭೇಟಿ ನೀಡಿದ ಕರ್ನಾಟಕ ರಾಜ್ಯ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗದ ಸದಸ್ಯ ಶಶಿಧರ ಕೊಸಂಬೆ, ಪರಿಶೀಲನೆ ನಡೆಸಿದರು. ಅಲ್ಲಿಂದ ಶಾಲೆಯೊಳಗೆ ಬಂದ ಮಕ್ಕಳನ್ನು ಒಂದೆಡೆ ಸೇರಿಸಿ ಎಲ್ಲರಿಗೂ ಮಾತಾಡಿ ಸಮಸ್ಯೆಗಳನ್ನು ಆಲಿಸಿದರು. ನಮಗೆ ನಿತ್ಯ ಮೊಟ್ಟೆ ನೀಡುತ್ತಿಲ್ಲ , ನೀರಿನ ಸಮಸ್ಯೆಯಿದೆ. ಸರಿಯಾಗಿ ಬಿಸಿಯೂಟ ನೀಡುತ್ತಿಲ್ಲ. ಶಾಲೆಯಲ್ಲಿ ಶೌಚಾಲಯ ಕೋಣೆಗಳು ಆಗಬೇಕು ಹೀಗೆ ಮಕ್ಕಳು ಹೇಳಿದ್ದನ್ನು ಶಾಂತಚಿತ್ತದಿಂದ ಆಲಿಸಿದ ಸದಸ್ಯ ಶಶಿಧರ ಕೊಸಂಬೆ, ಪ್ರತಿಯೊಂದಕ್ಕೂ ಅಲ್ಲಿಂದಲೇ ಸಂಬಂಧಪಟ್ಟ ಅಧಿಕಾರಿಗಳಿಗೆ ಸೂಚಿಸಿದರು.

ಶಾಲೆಯ 9 ನೇ ಮತ್ತು 10ನೇ ತರಗತಿಯಲ್ಲಿರುವ ವಿದ್ಯಾರ್ಥಿನಿಯರ ಬಾಲ್ಯವಿವಾಹ ನಡೆಯುತ್ತಿದ್ದರೂ ಶಿಕ್ಷಕರಿಗೆ ಮಾಹಿತಿಯಿಲ್ಲ. ಶಶಿಧರ ಕೊಸಂಬೆ ಮಕ್ಕಳಿಗೆ ಪ್ರಶ್ನೆ ಮಾಡಿದಾಗ ಸರಿಸುಮಾರು 6-7 ಮಕ್ಕಳ ಬಾಲ್ಯವಿವಾಹವಾಗಿದೆ ಎಂದು ವಿದ್ಯಾರ್ಥಿಗಳು ಮಾಹಿತಿ ನೀಡಿದ್ದಾರೆ. ಇನ್ನೂ 2-3 ವಿದ್ಯಾರ್ಥಿಗಳ ನಿಶ್ಚಿತಾರ್ಥವಾಗಿದೆ. ಸದ್ಯದಲ್ಲಿಯೇ ಮದುವೆಯಾಗಲಿದೆ ಎಂದು ಮಾಹಿತಿ ನೀಡಿದರು. ಸ್ಥಳದಲ್ಲಿಯೇ ಇರುವ ಬಿಇಒ ಅವರಿಗೆ ಕುಡಲೇ ಅವರೆಲ್ಲರ ಮೇಲೆ ಪ್ರಕರಣ ದಾಖಲಿಸಿ, ಬಾಲ್ಯವಿವಾಹ ತಡೆಗೆ ಮುಂದಾಗಿ ಎಂದು ಸೂಚಿಸಿದರು. ಶಾಲೆಯ ಶಿಕ್ಷಕರ ಮಕ್ಕಳ ಗೈರಾದರೇ ಅದರ ಮಾಹಿತಿ ಪಡೆಯಬೇಕು ಆದರೆ ಪಡೆದಿಲ್ಲ. ಇದರಿಂದ ತರಗತಿಯ ಶಿಕ್ಷಕರಿಗೆ ನೋಟಿಸ್ ನೀಡುವಂತೆ ಕೋಸಂಬೆ ಸೂಚಿಸಿದ್ದಾರೆ.

ಇಲ್ಲಿಯ ವಿದ್ಯಾರ್ಥಿಗಳಿಗೆ ಬಯಲು ಮೂತ್ರ ವಿಸರ್ಜನೆ ಅನಿವಾರ್ಯವಾಗಿದೆ. ಶೌಚಾಲಯಕ್ಕೆ ಮನೆಗಳಿಗೆ ಹೋಗಬೇಕಾಗಿದೆ. ಬಾಲಕಿಯರಿಗೆ ಶೌಚಾಲಯಗಳಿವೆ ಅವು ಇದ್ದು ಇಲ್ಲದಂತಾಗಿವೆ ಎಂದು ವಿದ್ಯಾರ್ಥಿಗಳು ತಮ್ಮ ನೋವು ತೋಡಿಕೊಂಡರು. ಬಿಇಒ, ಬಿಆರ್ ಸಿ ಆವರಣದಲ್ಲಿಯೇ ಇರುವ ಕರ್ನಾಟಕ ಪಬ್ಲಿಕ್ ಶಾಲೆಯಲ್ಲಿ ಅನೇಕ ಸಮಸ್ಯೆಗಳಿದ್ದರೂ ಇಸಿಒ, ಬಿಆರ್ ಸಿ, ಸಿಆರ್ ಸಿ ಅವರು ಗಮನ ಹರಿಸಿಲ್ಲ. ಆದ್ದರಿಂದ ಅವರ ಜತೆಗೆ ಶಾಲೆಯ ಮುಖ್ಯಗುರುಗಳಿಗೆ ಕುಡಲೇ ಕಾರಣ ಕೇಳಿ ನೋಟಿಸ್ ನೀಡುವಂತೆ ಬಿಇಒಗೆ ಸೂಚಿಸಿದರು.
ಬಿಸಿಯೂಟದ ಬೇಳೆಕಾಳುಗಳು ಪರಿಶೀಲಿಸಿ ಕಳಪೆ ಮಟ್ಟದಲ್ಲಿದೆ ಅವರಿಗೆ ಎಚ್ಚರಿಕೆ ನೀಡುವಂತೆ ಎಚ್ಚರಿಕೆ ನೀಡಿದರು. ಶಾಲೆಯ ಕೋಣೆಗಳು ಪರಿಶೀಲಿಸಿದ ಅವರು ಶಾಲೆಯ ಕೋಣೆಯಲ್ಲಿ ನೀರು ಕಂಡು ಯಾವಾಗ ಕೋಣೆಗಳು ದುರಸ್ಥಿಯಾಗಿವೆ ಎಂದು‌ ಪ್ರಶ್ನಿಸಿದರು. ಇದಕ್ಕೆ ಉತ್ತರಿಸಿದ ಶಿಕ್ಷಕರು 2-3 ವರ್ಷದ ಹಿಂದೆಯಷ್ಟೇ ರಿಪೇರಿ ಮಾಡಲಾಗಿದೆ ಎಂದರು. ಸಂಬಂಧಿಸಿದ ಇಲಾಖೆ ಪತ್ರಬರೆಯುವಂತೆ ಸೂಚಿಸಿದರು.

ಇನ್ನೂ ಶಾಲೆಯಲ್ಲಿ ಮಧ್ಯಾಹ್ನದ ಸಹಿಯನ್ನು ಶಿಕ್ಷಕರು ಬೆಳಗ್ಗೆಯೇ ಹಾಕಿರುವದನ್ನು ಕಂಡು ಶಿಕ್ಷಕರಿಗೆ ತರಾಟೆ ತೆಗೆದುಕೊಂಡರು. ಈ ಹಿಂದೆಯಷ್ಟೇ ನ್ಯಾಯಾಧೀಶರು ಭೇಟಿ ನೀಡಿದಾಗ ಮೊಟ್ಟೆ ನೀಡುತ್ತಿಲ್ಲ ಎಂದು ವಿದ್ಯಾರ್ಥಿಗಳು ತಿಳಿಸಿದರು. ಆದರೂ ಇಲ್ಲಿಯ ಮುಖ್ಯಗುರು ಎಚ್ಚತ್ತುಕೊಂಡು ಮೊಟ್ಟೆ ನೀಡುವಲ್ಲಿ ವಿಫಲರಾಗಿದ್ದಾರೆ. ಶಿಕ್ಷಕರಿಗೆ ಹೇಳಿದರು ಮಧ್ಯಾಹ್ನದ ಸಹಿಯನ್ನು ಬೆಳಗ್ಗೆಯೇ ಹಾಕಿದ್ದಾರೆ. ತಪ್ಪಿಸ್ಥರ ಮೇಲೆ ಕ್ರಮಕ್ಕೆ ಮೇಲಾಧಿಕಾರಿಗಳಿಗೆ ಪತ್ರ ಬರೆಯಲಾಗುತ್ತದೆ ಎಂದು ಎಚ್ಚರಿಕೆ ನೀಡಿದರು. ಸಿಡಿಪಿಒ ಇಮಲಪ್ಪ, ಬಿಇಒ ಬಿಜೆ ರಂಗೇಶ್ ಸೇರಿದಂತೆ ಅನೇಕರಿದ್ದರು.

*ಶಿಕ್ಷಕರಿಗೆ ಉಪಹಾರ ಕೊಂಡಾಮಂಡಲ*

ಶಾಲೆಯಲ್ಲಿ ಶಿಕ್ಷಕರಿಗೆ ಅಲ್ಪ ಉಪಹಾರ ಮಾಡುತ್ತಿರುವುದನ್ನು ಗಮನಿಸಿದ ಕರ್ನಾಟಕ ರಾಜ್ಯ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗದ ಸದಸ್ಯ ಶಶಿಧರ ಕೊಸಂಬೆ ಶಾಲೆಯ ಮುಖ್ಯಗುರು ಮಾದು ವಿರುದ್ಧ ತೀವ್ರ ಆಕ್ರೋಶ ವ್ಯಕ್ತಪಡಿಸಿದರು. ಶಾಲೆಯಲ್ಲಿ ಮಕ್ಕಳಿಗೆ ಬಿಸಿಯೂಟ ನೀಡವಂತೆ ನಿಯಮವಿದೆ. ಆದರೆ ಇಲ್ಲಿ ಶಿಕ್ಷಕರಿಗೆ ಅಲ್ಪ ಉಪಹಾರ ಯಾಕೆ ಮಾಡಿದ್ದಾರೆ ಎಂದು ಬಿಇಒ ಬಿಜೆ ರಂಗೇಶ ಅವರಿಗೆ ಕುಡಲೇ ಕ್ರಮ ಜರುಗಿಸುವಂತೆ ಸೂಚಿಸಿದರು. ಈ ವೇಳೆ ಮಕ್ಕಳಿಗೆ ನೀಡಲು ತಂದಿರುವ ಬಾಳೆಹಣ್ಣು ಪರಿಶೀಲಿಸಿದ ಅವರು 560 ಮಕ್ಕಳಿಗೆ ಇಷ್ಟು ಕಡಿಮೆ ತರಲಾಗಿದೆ ಎಂದಾಗ ಶಾಲೆಯಲ್ಲಿ 110 ಜನ ಹಾಜರಾಗುದ್ದಾರೆ ಎಂದು ಶಾಲೆಯ ಪ್ರಭಾರಿ ಮುಖ್ಯಗುರು ಮಾದು ತಿಳಿಸಿದರು. ಇದಕ್ಕೆ ಆಕ್ರೋಶಗೊಂಡ ಕೊಸಂಬೆ 50-60 ಬಾಳೆಹಣ್ಣು ಸಾಕಾಗುತ್ತದೆಯೇ ಎಂದು ಮೊಟ್ಟೆ ಎಲ್ಲಿ ಎಂದರು. ಇವತ್ತು ಮೊಟ್ಟೆ ಇಲ್ಲ ಎಂದು ಅಡುಗೆ ಸಹಾಯಕಿ ಉತ್ತರಿಸುತ್ತಿದ್ದಂತೆ ಮೊಟ್ಟೆ ನೀಡುತ್ತಿಲ್ಲ ಇವರ ಮೇಲೆ ಕ್ರಮ ಜರುಗಿಸುವಂತೆ ಬಿಇಒ ಅವರಿಗೆ ಎಚ್ಚರಿಕೆ ನೀಡಿದರು.

ಶಾಲೆಯ ಆವರಣದಲ್ಲಿ ಕೇಸರಿನಿಂದ ಮಕ್ಕಳಿಗೆ ಓಡಾಡಲು ಬರದಂತಹ ಸ್ಥಿತಿ ನಿರ್ಮಾಣವಾಗಿದೆ. ಶಾಲೆಯಲ್ಲಿ ಕುಡಿಯುವ ನೀರು, ಬಿಸಿಯೂಟ, ಶಾಲೆಯ ಅವ್ಯವಸ್ಥೆ ತೀವ್ರವಾಗಿದೆ. ಎರಡು ವಾರದೊಳಗೆ ಸಮಸ್ಯೆ ಬಗೆಹರಿಸದೇ ಹೋದಲ್ಲಿ ಪಪಂ ಮುಖ್ಯಾಧಿಕಾರಿ ಸ್ವಾಮಿದಾಸ, ಬಿಇಒ ಬಿಜೆ ರಂಗೇಶ ಮತ್ತು ಶಾಲೆಯ ಮುಖ್ಯಗುರು‌ ಮಾದು ಮೇಲೆ ಸ್ವಯಂ ಪ್ರೇರಿತ ದೂರು ದಾಖಲಿಸಿಕೊಳ್ಳಗುತ್ತದೆ ಎಂದು ಶಶಿಧರ ಕೊಂಸಬೆ ಎಚ್ಚರಿಕೆ ನೀಡಿದ್ದಾರೆ.

ಶಶಿಧರ ಕೊಸಂಬೆ
ಸದಸ್ಯರು
ಕರ್ನಾಟಕ ರಾಜ್ಯ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗ ಬೆಂಗಳೂರು ಇದ್ದರು.

ವರದಿ : ರಾಚಯ್ಯ ಸ್ವಾಮಿ

error: Content is protected !!