ಹುಕ್ಕೇರಿ : ತಾಲೂಕ ಪಂಚಾಯತ್ ಸಭಾಭವನದಲ್ಲಿ ಕರ್ನಾಟಕ ಕಾರ್ಯನಿರತ ಪತ್ರಕರ್ತರ ಧ್ವನಿ ಸಂಘಟನೆಯ ವತಿಯಿಂದ ಸ್ವಾತಂತ್ರೋತ್ಸವದ ನಿಮಿತ್ಯ ಐತಿಹಾಸಿಕ ಪತ್ರಿಕಾ ದಿನಾಚರಣೆ ಹಾಗೂ ಅದ್ಧೂರಿಯಾಗಿ ಆಚರಿಸಲಾಯಿತು.
ಈ ಸಂದರ್ಭದಲ್ಲಿ 85 ವಿದ್ಯಾರ್ಥಿಗಳಿಗೆ ಸ್ಕೂಲ್ ಕಿಟ್‌ಗಳು ವಿತರಿಸಲಾಯಿತು. ಜಿಟಿ ಗ್ರೂಪ್ ವತಿಯಿಂದ ಶಾಲಾ ಬ್ಯಾಗ್‌ಗಳು, ಧ್ವನಿ ಸಂಘಟನೆಯ ವತಿಯಿಂದ ನೋಟ್ ಬುಕ್‌ಗಳು 12, ಕಂಪಾಸ್ 1, ಪೆನ್ನು 10, ಸಿಸ್ 10 ಹಾಗೂ ಎಕ್ಸಾಮ್ ಪ್ಯಾಡ್ 1 ವಿದ್ಯಾರ್ಥಿಗಳಿಗೆ ಹಂಚಲಾಯಿತು. ಜೊತೆಗೆ 200ಕ್ಕೂ ಹೆಚ್ಚು ಸಸಿಗಳನ್ನು ರೈತರಿಗೆ ವಿತರಣೆ ಮಾಡಲಾಯಿತು.
ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡಿದ ಶ್ರೀ ಸುರೇಶ ತಳವಾರ ಅವರು “ಹುಕ್ಕೇರಿಯ ಪತ್ರಕರ್ತರು ಭ್ರಷ್ಟಾಚಾರದ ವಿರುದ್ಧ ಧೈರ್ಯವಾಗಿ ನಿಲ್ಲುತ್ತಾರೆ. ಸಮಾಜದ ಕಳಕಳಿಯ ಸುದ್ದಿಯನ್ನು ತಲುಪಿಸುವಲ್ಲಿ ಇವರ ಪಾತ್ರ ಶ್ಲಾಘನೀಯ. ನಾನು ಯಾವತ್ತೂ ಇವರ ಬೆಂಬಲಿಗ” ಎಂದು ಹೇಳಿದರು.
ನಂತರ ಮಾತನಾಡಿದ ಶ್ರೀ ಅಭಿನವ ಮಂಜುನಾಥ ಮಹಾಸ್ವಾಮಿಗಳು ಅವರು “ಡಾ. ರವಿ ಬಿ ಕಾಂಬಳೆ ಅವರ ನೇತೃತ್ವದ ಧ್ವನಿ ತಂಡ ಸಮಾಜದ ಅಂಕುಡೊಂಕು ತಿದ್ದುವ ಕಾರ್ಯವನ್ನು ನಿರ್ಭಯವಾಗಿ ಮಾಡುತ್ತಿದೆ. ಇಂದು ವಿದ್ಯಾರ್ಥಿಗಳಿಗೆ ನೀಲಿ ಪೆನ್ ನೀಡಲಾಗಿದೆ. ಇದೇ ಪೆನ್ ಮುಂದೆ ಒಂದು ದಿನ ಹಸಿರು ಪೆನ್ನಾಗಿ ಪರಿವರ್ತನೆ ಆಗಲಿ. ಅಂದರೆ, ವಿದ್ಯಾರ್ಥಿಗಳು ವಿದ್ಯಾಭ್ಯಾಸದ ಮೂಲಕ ಸರ್ಕಾರಿ ಹುದ್ದೆಗಳನ್ನು ಅಲಂಕರಿಸಿ ಹಸಿರು ಪೆನ್ನಿನಿಂದ ಸಮಾಜದ ಸೇವೆ ಮಾಡಲಿ” ಎಂದು ಹಾರೈಸಿದರು.
ಜಿಲ್ಲಾ ಅಧ್ಯಕ್ಷರಾದ ಡಾ. ರವಿ ಬಿ ಕಾಂಬಳೆ ಅವರು ಮಾತನಾಡಿ “2022ರಲ್ಲಿ ಹುಟ್ಟಿಕೊಂಡ ಈ ಸಂಘಟನೆ ಇಂದು ಜನರ ಧ್ವನಿಯಾಗಿ ಬೆಳೆದು, ಹಲವಾರು ಸಮಸ್ಯೆಗಳನ್ನು ಪರಿಹರಿಸಿದೆ. ಮುಂದಿನ ದಿನಗಳಲ್ಲಿ ಬಡ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಇನ್ನಷ್ಟು ಸಹಾಯ ಸಹಕಾರ ಒದಗಿಸಲಾಗುವುದು” ಎಂದು ಭರವಸೆ ನೀಡಿದರು.
ಡಾ. ಕಾಂಬಳೆ ರವರ ಮಾರ್ಗದರ್ಶನದಲ್ಲಿ ಸಂಘಟನೆ ಇವತ್ತು ಬೆಳಗಾವಿ ಜಿಲ್ಲೆಯಲ್ಲಿ ಬಲಿಷ್ಠವಾಗಿದೆ ಪತ್ರಕರ್ತರಿಗೆ ಒಂದು ಒಳ್ಳೆಯ ಸ್ಥಾನಮಾನ ನೀಡುವುದರಲ್ಲಿ ನಿರಂತರವಾಗಿದ್ದಾರೆ ಎಂದು ಬೆಳಗಾವಿ ಜಿಲ್ಲಾ ಗೌರವ್ಯಾಧ್ಯಕ್ಷ ಶ್ರೀಕಾಂತ ಚೌಗಲಾ ಎಂದರು
ಕಾರ್ಯಕ್ರಮದಲ್ಲಿ ದಿವ್ಯ ಸಾನಿಧ್ಯ ಶ್ರೀ ಅಭಿನವ ದೇವರು ಮಹಾಸ್ವಾಮಿಗಳು, ಶ್ರೀ ಸುರೇಶ ತಳವಾರ (ಮಾಜಿ ವಾಯುಮಾಲಿನ್ಯ ನಿಯಂತ್ರಣ ಮಂಡಳಿ ನಿರ್ದೇಶಕರು) ಹಾಗೂ ಶ್ರೀ ಮಹಾವೀರ ನಿಲಜಗಿ (ಮಹಾವೀರ ಶಿಕ್ಷಣ ಮತ್ತು ಉದ್ಯೋಗ ಸಮೂಹ ಸಂಸ್ಥೆಗಳ ಅಧ್ಯಕ್ಷರು) ಉಪಸ್ಥಿತರಿದ್ದರು. ಬಿ ಇ ಓ ಪ್ರತಿಭಾ ಪಾಟೀಲ. ಶಶಿಧರ್ ಬೊಸಗೋಳ ಶ್ರೀಕಾಂತ ತಳವಾರ. ಸಂಜು ಹಾವನ್ನವರ. ಗೋಪಾಲ ಮರಬಸನ್ನವರ. ಸದಾಸಿವ ಕಾಂಬಳೆ ಬಹುಸಾಹೇಬ ಪಾಂಡ್ರೆ. ಸುರೇಶ ತಳವಾರ. ಶಂಕರ ಗುಡಸಿ. ವಿಜಯ ಮಡಿವಾಳ ರವರ ಮುಖಂಡತ್ವದಲ್ಲಿ ಕಾರ್ಯಕ್ರಮ ಜರಗಿತು
ಈ ಸಂದರ್ಭದಲ್ಲಿ ರವಿ ಬಿ ಕಾಂಬಳೆ ಶ್ರೀಕಾಂತ ಚೌಗಲಾ ಜಿಲ್ಲಾ ಗೌರವಾಧ್ಯಕ್ಷರು. ಗಂಗಾಧರ್ ಶಿರಗಾಂವಿ ಜಿಲ್ಲಾ ಉಪಾಧ್ಯಕ್ಷರು , ತಾಲೂಕ ಗೌರವ್ಯಾಧ್ಯಕ್ಷರು ರಮೇಶ ತಳವಾರ, ತಾಲೂಕ ಅಧ್ಯಕ್ಷರು ಸುನಿಲ ಲಾಳಗೆ, ತಾಲೂಕ ಉಪಾಧ್ಯಕ್ಷರು ಸಂತೋಷ ಪಾಟೀಲ, ಕಾರ್ಯದರ್ಶಿ ಶಾಂತಿನಾಥ ಮಗದುಮ್ಮ, ಖಜಾಂಚಿ ಮಹಾಂತೇಶ ಬೇವಿನಕಟ್ಟಿ, ಮಹಮ್ಮದ್ ಅರಿಪ್ ಪಠಾಣ, ಶಿವಾನಂದ ಮಾಳಕರಿ, ವಿನಾಯಕ ಚೌಗಲ, ಸದಾನಂದ ಎಂ.ಎಚ್. ಅಣೇಶ ಯರನಾಳ ಹಾಗೂ ಜಿಲ್ಲಾ ಕಾರ್ಯದರ್ಶಿ ಶ ಶಿವಾಜಿ ಬಾಳೇಶಗೋಳ ಹಾಗೂ ಹಳ್ಳಿಗಳಿಂದ ಬಂದಂತ ವಿದ್ಯಾರ್ಥಿಗಳು ಮತ್ತು ಶಿಕ್ಷಕರು ಸೇರಿದಂತೆ ಅನೇಕ ರೈತ ಮುಖಂಡರು ಗಣ್ಯರು ಉಪಸ್ಥಿತರಿದ್ದರು.
