ಕಲ್ಯಾಣ ಮಂಟಪಗಳಲ್ಲಿ ಕಳವು ಮಾಡುತ್ತಿದ್ದ ಓರ್ವ ವ್ಯಕ್ತಿಯ ಬಂಧನ 400 ಗ್ರಾಂ ಚಿನ್ನಾಭರಣ ಮತ್ತು ₹91,000/- ನಗದು ಒಟ್ಟು 36.91 ಲಕ್ಷ ವಶ

ಬೆಂಗಳೂರು : ಮಾಗಡಿ ರಸ್ತೆ ಪೊಲೀಸ್ ಠಾಣಾ ಸರಹದ್ದಿನಲ್ಲಿರುವ ಇಂಡಸ್ಟ್ರೀಯಲ್ ಟೌನ್‌ನಲ್ಲಿ ಕಮ್ಯೂನಿಟಿ ಸೆಂಟರ್‌ವೊಂದರ ಮಾಲೀಕರಾದ ಪಿಯಾದುದಾರರು. ದಿನಾಂಕ:14/05/2025 ರಂದು ಮಾಗಡಿ ರಸ್ತೆ ಪೊಲೀಸ್ ಠಾಣೆಯಲ್ಲಿ ದೂರನ್ನು ಸಲ್ಲಿಸಿರುತ್ತಾರೆ. ದೂರಿನಲ್ಲಿ ಪಿರ್ಯಾದುದಾರರು ದಿನಾಂಕ:05/05/2025 ರಂದು ಕಮ್ಯೂನಿಟಿ ಸೆಂಟರ್‌ನಲ್ಲಿರುವ ರೂಮ್‌ ವೊಂದರಲ್ಲಿ 31,000/- ನಗದನ್ನು ಇಟ್ಟಿದ್ದು. ಯಾರೋ ಅಪರಿಚಿತರು ಕಳವು ಮಾಡಿಕೊಂಡು ಹೋಗಿರುವುದಾಗಿ ತಿಳಿಸಿರುತ್ತಾರೆ. ಈ ಕುರಿತು ಮಾಗಡಿ ರಸ್ತೆ ಪೊಲೀಸ್ ಠಾಣೆಯಲ್ಲಿ ಕಳವು ಪ್ರಕರಣ ದಾಖಲಾಗಿರುತ್ತದೆ.

ಪ್ರಕರಣದ ತನಿಖೆಯನ್ನು ಮುಂದುವರೆಸಿದ ಪೊಲೀಸರು, ವಿವಿಧ ಆಯಾಮಗಳಲ್ಲಿ ತನಿಖೆಯನ್ನು ಕೈಗೊಂಡು, ಬಾತ್ಮೀಧಾರರಿಂದ ಖಚಿತ ಮಾಹಿತಿಯನ್ನು ಕಲೆಹಾಕಿ, ದಿನಾಂಕ:02/08/2025 ರಂದು ತುಮಕೂರಿನ ಗುಬ್ಬಿ ರೈಲ್ವೆ ನಿಲ್ದಾಣದ ಬಳಿ ಓರ್ವ ವ್ಯಕ್ತಿಯನ್ನು ವಶಕ್ಕೆ ಪಡೆದುಕೊಳ್ಳಲಾಯಿತು. ವಶಕ್ಕೆ ಪಡೆದ ವ್ಯಕ್ತಿಯನ್ನು ವಿಚಾರಣೆಗೊಳಪಡಿಸಲಾಗಿ, ಈ ಪ್ರಕರಣದಲ್ಲಿ ನಗದನ್ನು ಕಳವು ಮಾಡಿರುವುದಾಗಿ ತಪ್ರೊಪ್ಪಿಕೊಂಡಿರುತ್ತಾನೆ. ಹಾಗೂ ಮಾಗಡಿ ರಸ್ತೆ ಪೊಲೀಸ್ ಠಾಣಾ ಸರಹದ್ದಿನಲ್ಲಿ ಮತ್ತೆರಡು ಪ್ರಕರಣವು ಸೇರಿದಂತೆ, ಕಾಮಾಕ್ಷಿಪಾಳ್ಯ, ಕೆಂಗೇರಿ ಮತ್ತು ಬಸವನಗುಡಿಯ ಕನ್ನೆಕ್ಷನ್ ಹಾಲ್‌ಗಳಲ್ಲಿ ಚಿನ್ನಾಭರಣ ಮತ್ತು ನಗದನ್ನು ಕಳವು ಮಾಡಿರುವುದಾಗಿ ತಿಳಿಸಿರುತ್ತಾನೆ.

ದಿನಾಂಕ:02/08/2025 ರಂದು ಆರೋಪಿಯನ್ನು ಮಾನ್ಯ ನ್ಯಾಯಾಲಯಕ್ಕೆ ಹಾಜರುಪಡಿಸಿ, 13 ದಿನಗಳ ಕಾಲ ಪೊಲೀಸ್ ಅಭಿರಕ್ಷೆಗೆ ಪಡೆದುಕೊಳ್ಳಲಾಯಿತು.

ಪೊಲೀಸ್ ಅಭಿರಕ್ಷೆಗೆ ಪಡೆದ ಆರೋಪಿಯನ್ನು ಸುದೀರ್ಘವಾಗಿ ವಿಚಾರಣೆಗೊಳಪಡಿಸಲಾಗಿ, ಈ ಪ್ರಕರಣದಲ್ಲಿ ಕಳವು ಮಾಡಿದ ನಗದು ಹಾಗೂ ಮತ್ತೆರಡು ಪ್ರಕರಣಗಳಲ್ಲಿ ಕಳವು ಮಾಡಿದ ನಗದನ್ನು ಗುಬ್ಬಿಯಲ್ಲಿರುವ ಆತನ ವಾಸದ ಮನೆಯಲ್ಲಿಟ್ಟಿರುವುದಾಗಿ ಹಾಗೂ ಕಳವು ಮಾಡಿದ ಚಿನ್ನಾಭರಣಗಳನ್ನು ನಗರತ್ ಪೇಟೆಯ ಜ್ಯೂವೆಲರಿ ಅಂಗಡಿಯಲ್ಲಿ ಮಾರಾಟ ಮಾಡಿರುವುದಾಗಿ ತಿಳಿಸಿರುತ್ತಾನೆ.

ತನಿಖೆಯನ್ನು ಮುಂದುವರೆಸಿ, ನಗರತ್ ಪೇಟೆಯ ಜ್ಯೂವೆಲರಿ ಅಂಗಡಿಯಲ್ಲಿ ಕಳವು ಮಾಡಿದ ಚಿನ್ನಾಭರಣಗಳನ್ನು ಮಾರಾಟ ಮಾಡಿದ್ದನ್ನು ಅಂಗಡಿಯ ಮಾಲೀಕನು ಚಿನ್ನಾಭರಣಗಳನ್ನು ಮಾರ್ಪಡಿಸಿ, ಚಿನ್ನದ ಗಟ್ಟಿಯಾಗಿಸಿದ್ದ 400 ಗ್ರಾಂನ್ನು ದಿನಾಂಕ:08/08/2025 ರಂದು ವಶಪಡಿಸಿಕೊಳ್ಳಲಾಯಿತು.

ಈ ಪ್ರಕರಣದ ಆರೋಪಿಯ ಬಂಧನದಿಂದ, 400 ಗ್ರಾಂ ಚಿನ್ನದ ಗಟ್ಟಿ ಮತ್ತು ₹ 91,000/- ನಗದನ್ನು ವಶಪಡಿಸಿಕೊಳ್ಳಲಾಯಿತು. ಇವುಗಳ ಒಟ್ಟು ಮೌಲ್ಯ ₹ 36.91.000/-(ಮೂವತ್ತಾರು ಲಕ್ಷದ ತೊಂಬತ್ತೊಂದು ಸಾವಿರ ರೂಪಾಯಿ), ದಿನಾಂಕ:14/08/2025 ರಂದು ಆರೋಪಿಯು ವಾಸವಿರುವ ಗುಬ್ಬಿಯಲ್ಲಿರುವ ಆತನ ವಾಸದ ಮನೆಯಿಂದ ₹91,000/- ನಗದನ್ನು ವಶಪಡಿಸಿಕೊಳ್ಳಲಾಯಿತು.

ದಿನಾಂಕ:14/08/2025 ರಂದು ಆರೋಪಿಯನ್ನು ಮಾನ್ಯ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದು, ಮಾನ್ಯ ನ್ಯಾಯಾಲಯವು ಆರೋಪಿಯನ್ನು ನ್ಯಾಯಾಂಗ ಬಂಧನಕ್ಕೆ ಒಳಪಡಿಸಿರುತ್ತೆ.

ಈ ಆರೋಪಿಯ ಬಂಧನದಿಂದ 1) ಮಾಗಡಿ ರಸ್ತೆ ಪೊಲೀಸ್ ಠಾಣೆಯ-03 ಪ್ರಕರಣಗಳು, 2) ಬಸವನಗುಡಿ ಪೊಲೀಸ್ ಠಾಣೆಯ-03 ಪ್ರಕರಣಗಳು, 3) ಕಾಮಾಕ್ಷಿಪಾಳ್ಯ ಪೊಲೀಸ್ ಠಾಣೆಯ-01 ಪ್ರಕರಣ, 4) ಕೆಂಗೇರಿ ಪೊಲೀಸ್ ಠಾಣೆಯ-01 ಪ್ರಕರಣ, ಸೇರಿದಂತೆ, ಒಟ್ಟು 8 ಪ್ರಕರಣಗಳು ಪತ್ತೆಯಾಗಿರುತ್ತವೆ.

ಈ ಕಾರ್ಯಾಚರಣೆಯನ್ನು ಪಶ್ಚಿಮ ವಿಭಾಗದ ಉಪ ಪೊಲೀಸ್ ಆಯುಕ್ತರು ಶ್ರೀ, ಗಿರಿಶ್.ಎಸ್ ಐ.ಪಿ.ಎಸ್ ರವರ ಮಾರ್ಗದರ್ಶನದಲ್ಲಿ, ವಿಜಯನಗರ ಉಪ ವಿಭಾಗದ ಸಹಾಯಕ ಪೊಲೀಸ್ ಆಯುಕ್ತರು ಶ್ರೀ ಚಂದನ್ ಕುಮಾ‌ರ್.ಎನ್ ರವರ ನೇತೃತ್ವದಲ್ಲಿ, ಮಾಗಡಿ ರಸ್ತೆ ಪೊಲೀಸ್ ಠಾಣೆಯ ಪೊಲೀಸ್ ಇನ್ಸಪೆಕ್ಟರ್ ಶ್ರೀ. ರಾಜು ಜಿ.ಪಿ. ಹಾಗೂ ಇತರೆ ಅಧಿಕಾರಿ ಮತ್ತು ಸಿಬ್ಬಂದಿಗಳ ತಂಡ ಪ್ರಕರಣವನ್ನು ಪತ್ತೆಮಾಡುವಲ್ಲಿ ಯಶಸ್ವಿಯಾಗಿರುತ್ತಾರೆ.

error: Content is protected !!