ಹುಮನಾಬಾದ್ : ಮಲ್ಲಿಕಾರ್ಜುನ್ ಜಾತ್ರಾ ಮಹೋತ್ಸವ ನಿಮಿತ್ತ ತಾಲೂಕಿನ ಮುಸ್ತಾಪೂರ ಗ್ರಾಮದಲ್ಲಿ ಮಂಗಳವಾರ ನಡೆದ ಪಲ್ಲಕ್ಕಿ ಉತ್ಸವಕ್ಕೆ ವಿಧಾನ ಪರಿಷತ್ ಸದಸ್ಯ ಡಾ. ಚಂದ್ರಶೇಖರ ಪಾಟೀಲ್ ಚಾಲನೆ ನೀಡಿದರು.
ಬೆಳಗ್ಗೆ ದೇವಸ್ಥಾನದಲ್ಲಿ ಧಾರ್ಮಿಕ ವಿಧಿ ವಿಧಾನದಂತೆ ವಿಶೇಷ ಪೂಜೆ ಸಲ್ಲಿಸಿ, ಪಲ್ಲಕ್ಕಿ ಉತ್ಸವಕ್ಕೆ ಚಾಲನೆ ನೀಡಲಾಯಿತು. ಮೆರವಣಿಗೆ ದಾರಿಯುದ್ದಕ್ಕೂ ಭಕ್ತಾಧಿಗಳು ಸರತಿ ಸಾಲಿನಲ್ಲಿ ನಿಂತು ಕಾಯಿ, ಕರ್ಪೂರ್, ಹಣ್ಣು ಹಂಪಲು ಅರ್ಪಿಸಿ ದರ್ಶನ ಪಡೆದರು.
ಮೆರವಣಿಗೆಯಲ್ಲಿ ಡೊಳ್ಳ ಕುಣಿತ, ತಮಟೆ ಕುಣಿತ, ಭಜನೆ, ಕೀರ್ತನೆ ಸೇರಿ ಮಕ್ಕಳಿಂದ ಜರುಗಿದ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳು ನೋಡುಗರರ ಗಮನ ಸೆಳೆದವು. ದಾರಿಯುದ್ದಕ್ಕೂ ಭಕ್ತಾಧಿಗಳಿಗಾಗಿ ವಿವಿಧ ಸಂಘ ಸಂಸ್ಥೆಗಳಿಂದ ಪ್ರಸಾದ ವ್ಯವಸ್ಥೆ ಕಲ್ಪಿಸಲಾಗಿತ್ತು.
ಈ ಸಂದರ್ಭದಲ್ಲಿ ಗ್ರಾಪಂ. ಅಧ್ಯಕ್ಷ ಶಿವಕುಮಾರ ಪಾಟೀಲ್, ಹುಲೇಪ್ಪ ರಟಕಲ್, ಸತೀಷ ಪಾಟೀಲ್, ಲಕ್ಷ್ಮಣ ಮೈಸಣ್ಣ, ಜಗನಾಥ ಕಟಕಲ್, ನಾಗಣ್ಣ ಭರಶಟ್ಟಿ, ಯಲ್ಲಾಲಿಂಗ ಕೊಂಡಲವಾಡಿ, ಪಾಂಡುರಂಗ ಪಂಡರಗೇರಾ ಇದ್ದರು.