ಯಮಕನಮರಡಿ : ಯುವ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿಗಳಾದ ರಾಹುಲ ಜಾರಕಿಹೊಳಿ ಅವರು ದಿ. ಹುಕ್ಕೇರಿ ಗ್ರಾಮೀಣ ವಿದ್ಯುತ್ ಸಹಕಾರಿ ಸಂಘದ ಚುನಾವಣೆಯ ಹಿನ್ನೆಲೆಯಲ್ಲಿ, ಹತ್ತರಗಿ ಯಮಕನಮರಡಿ ಪಂಚಾಯತ್ ವ್ಯಾಪ್ತಿಯ ಹುಣಸೆಕೂಳ ಮಠದಲ್ಲಿ ಹಮ್ಮಿಕೊಂಡಿದ್ದ ಪೂರ್ವಭಾವಿ ಸಭೆಯಲ್ಲಿ ಭಾಗವಹಿಸಿ, ಮಾತನಾಡಿದರು.
ಸಚಿವರಾದ ಸತೀಶ ಅಣ್ಣಾ ಜಾರಕಿಹೊಳಿ ಅವರ ಜನಸೇವೆಯ ನಿಲುವು ಎಲ್ಲರಿಗೂ ಮಾದರಿಯಾಗಿದೆ.
ಜನರು ಯಾವ ಪಕ್ಷದವರೇ ಆಗಿರಲಿ, ಯಾವ ಜಾತಿ–ಧರ್ಮದವರೇ ಆಗಿರಲಿ, ತಮ್ಮ ಸಮಸ್ಯೆಗಳನ್ನು ತಂದು ಹಂಚಿಕೊಂಡಾಗ, ಅದನ್ನು ಬಗೆಹರಿಸಲು ಅವರು ಸದಾ ಮುಂದಾಗುತ್ತಾರೆ ಎಂದರು.
ಅದರ ಫಲವಾಗಿ, ಎಲ್ಲಾ ಧರ್ಮ ಮತ್ತು ಜಾತಿಯ ಜನರು ಸತೀಶ ಜಾರಕಿಹೊಳಿ ಅವರನ್ನು ಭಾರಿ ಬಹುಮತದಿಂದ ವಿಧಾನಸಭೆಗೆ ಆಯ್ಕೆ ಮಾಡಿದರು. ಅದೇ ರೀತಿ ಪ್ರಿಯಾಂಕಾ ಜಾರಕಿಹೊಳಿ ಅವರಿಗೆ ಕೂಡಾ ಲೋಕಸಭೆಯಲ್ಲಿ ದೊಡ್ಡ ಅಂತರದ ಜಯವನ್ನು ಒದಗಿಸಿದರು.
ಈಗ ಇದೇ ವಿಶ್ವಾಸವನ್ನು ಮುಂದುವರಿಸಿಕೊಂಡು, ಸಚಿವರಾದ ಶ್ರೀ ಸತೀಶ ಅಣ್ಣಾ ಜಾರಕಿಹೊಳಿಯವರ ಬೆಂಬಲಿತ ದಿ. ಅಪ್ಪಣಗೌಡ ಪಾಟೀಲ ವಿದ್ಯುತ್ ಸಹಕಾರಿ ಪೆನಲ್ ಅಭ್ಯರ್ಥಿಗಳನ್ನು ಮುಂಬರುವ ಸಹಕಾರಿ ಚುನಾವಣೆಯಲ್ಲಿ ಗೆಲ್ಲಿಸುವುದು ನಮ್ಮೆಲ್ಲರ ಜವಾಬ್ದಾರಿಯಾಗಿದೆ. ಎಲ್ಲರೂ ಒಟ್ಟಾಗಿ ಹುಕ್ಕೇರಿ ಗ್ರಾಮೀಣ ವಿದ್ಯುತ್ ಸಹಕಾರಿ ಸಂಘವನ್ನು ಉಳಿಸಿ ಬೆಳೆಸೋಣ ಎಂದು ಮಾತನಾಡಿದರು
ಈ ಸಂದರ್ಭದಲ್ಲಿ ಕಿರಣ್ ರಜಪೂತ ಈರಣ್ಣ ಬಿಸಿರೋಟಿ ದೇವಪ್ಪ ಹೂಣ್ಣೂರ ಸೇರಿ ಪ್ರಮುಖ ಮುಖಂಡರು ಮತ್ತು ಕಾರ್ಯಕರ್ತರು ಉಪಸ್ಥಿತರಿದ್ದರು.
ವರದಿ : ಸದಾನಂದ ಎಂ