ವಿಜಯಪುರ ನಗರವು ಗಣೇಶ ಚತುರ್ಥಿ ಹಬ್ಬದ ಸಂಭ್ರಮದಲ್ಲಿ ತೇಲುತ್ತಿದೆ. ಬೀದಿ ಬೀದಿಗಳಲ್ಲಿ ಅಲಂಕೃತ ಪಾಂಡಲ್‌ಗಳು, ಮನೆಮನೆಗಳಲ್ಲಿ ಭಕ್ತಿ ಗೀತೆಗಳ ಧ್ವನಿಗಳು, ಮಾರುಕಟ್ಟೆಗಳಲ್ಲಿ ಖರೀದಿ ಜೋರು – ಎಲ್ಲೆಡೆ ಗಣಪತಿ ಬಪ್ಪನ ಹೆಸರು ಮೊಳಗುತ್ತಿದೆ.
ಗಣೇಶ ಚೌತಿ ಶ್ರೀ ವಾರಸಿದ್ಧ ವಿನಾಯಕ ವ್ರತವನ್ನು ಆಚರಿಸುವ ದಿನ. ಭದ್ರಾಪದ ಮಾಸದ ಶುಕ್ಲ ಚತುರ್ಥಿ ಯು ಶ್ರೀ ಗಣೇಶ ನ ಜನ್ಮ ದಿನ ಎನ್ನಲಾಗುತ್ತದೆ.
ಗಣಪತಿ ಎಂದ ತಕ್ಷಣ ನಮ್ಮ ಕಣ್ಣ ಮುಂದೆ ಬರುವ ಮೂರ್ತಿಯಂದರೆ, ಆನೆ ಸೊಂಡಿಲಿನ, ಡೊಳ್ಳು ಹೊಟ್ಟೆಯ ಮುದ್ದಾದ, ದೈವಿಕ ವಾದ ರೂಪ.
ಮೂರ್ತಿಗಳ ವೈವಿಧ್ಯ
ಈ ಬಾರಿ ಮಾರುಕಟ್ಟೆಯಲ್ಲಿ ಹಲವು ರೀತಿಯ ಗಣೇಶ ಮೂರ್ತಿಗಳು ಭಕ್ತರನ್ನು ಸೆಳೆಯುತ್ತಿವೆ.
ಸಂಪ್ರದಾಯಿಕ ವಿನ್ಯಾಸಗಳೊಂದಿಗೆ ಆಧುನಿಕ ಶೈಲಿಯ ಮೂರ್ತಿಗಳು, ಮಣ್ಣಿನ ಮೂರ್ತಿಗಳು, ಪ್ಲಾಸ್ಟರ್ ಆಫ್ ಪ್ಯಾರಿಸನ ವಿಗ್ರಹಗಳು
ಬಾಲಗಣಪತಿ – ಪುಟ್ಟ ಮಕ್ಕಳ ರೂಪದಲ್ಲಿ ತಯಾರಿಸಿದ ಆಕರ್ಷಕ ಮೂರ್ತಿಗಳು.
ಸಿದ್ಧಿವಿನಾಯಕ – ಕಮಲಾಸನದಲ್ಲಿ ಕುಳಿತ ಭವ್ಯ ಗಣಪತಿ. ಏಕದಂತ – ಒಂದೇ ದಂತ ಹೊಂದಿರುವ ಪರಮ ಜ್ಞಾನಿ ರೂಪ.
ಮಹಾಗಣಪತಿ – ಹತ್ತು ಕೈಗಳ ಆಭರಣ ಧಾರಿಯ ಭವ್ಯ ಮೂರ್ತಿ.
ಮಯೂರ ಗಣಪತಿ – ನವಿಲಿನ ಮೇಲೆ ಕುಳಿತ ಗಣೇಶ. 2 ಅಡಿ ಎತ್ತರ ಹಿಡಿದು 35 ಅಡಿ ಎತ್ತರದ ಭವ್ಯ ಮೂರ್ತಿ ಗಳು ಕೂಡ ಭಕ್ತರನ್ನು ಆಕರ್ಷಸುತ್ತಿದ್ದಾವೆ.
ಈ ವರ್ಷ ಪರಿಸರ ಸ್ನೇಹಿ ಗಣೇಶ ಮೂರ್ತಿಗಳಿಗೆ ಆದ್ಯತೆ ಸಿಕ್ಕಿದೆ. ಮಣ್ಣಿನಿಂದ ತಯಾರಿಸಲಾದ ಮೂರ್ತಿಗಳು ನೀರಿನಲ್ಲಿ ಸುಲಭವಾಗಿ ಕರಗುವ ಮೂಲಕ ಪರಿಸರಕ್ಕೆ ಹಾನಿ ಮಾಡದೇ ಭಕ್ತರ ಭಾವನೆಗಳನ್ನು ತೃಪ್ತಿ ಪಡಿಸುತ್ತವೆ.
ಹೂವಿನ ಮಾಲೆಗಳ ಜೋಡಣೆ
ಎಲ್‌ಇಡಿ ಲೈಟಿಂಗ್ ಸರಪಳಿ
ಪ್ಲಾಸ್ಟಿಕ್ ಮುಕ್ತ ಬಾಳೆ ಎಲೆ, ಬಂಬು ಅಲಂಕಾರ
ರಾಷ್ಟ್ರೀಯ ಏಕತೆಯ ಸಂದೇಶ ಬಿಂಬಿಸುವ ಕಲಾ ಕೃತಿಗಳು
ಇವು ಪಾಂಡಲ್‌ಗಳ ಸೊಬಗು ಹೆಚ್ಚಿಸಿವೆ.
—
ಮಹಿಳೆಯರ ತಯಾರಿ
ಮನೆಮನೆಗಳಲ್ಲಿ ಮಹಿಳೆಯರು ಗಣಪತಿಗೆ ಪ್ರಿಯವಾದ ಮೋದಕ, ಉಂಡೆ, ಕರಿದ ಕಾಯಿ-ಕಡಲೆ ಮಿಠಾಯಿ, ಪುಲಿಯೋಗರೆ, ಲಾಡುಗಳನ್ನು ಸಿದ್ಧಪಡಿಸಿದ್ದಾರೆ. “ಗಣೇಶನ ಪ್ರಿಯ ಭಕ್ಷ್ಯವನ್ನು ತಯಾರಿಸುವುದೇ ನಮ್ಮ ಭಕ್ತಿ” ಎಂದು ಗೃಹಿಣಿಯರು ಸಂತೋಷ ಹಂಚಿಕೊಂಡರು.
—
ಮಕ್ಕಳ ಹರ್ಷ
ಮಕ್ಕಳು ಈ ಹಬ್ಬವನ್ನು ಅತ್ಯಂತ ಆನಂದದಿಂದ ಎದುರು ನೋಡುತ್ತಾರೆ. ಬಣ್ಣ ಬಣ್ಣದ ಗಾಳಿಪಟ, ಡೋರೆಮನ್ ಮತ್ತು ಚೋಟಾ ಭೀಮ್ ಮಾದರಿಯ ಕಾರ್ಟೂನ್ ಗಣಪತಿ ಮೂರ್ತಿಗಳು, ಬಲೂನು ಹಾಗೂ ಆಟಿಕೆಗಳು ಪುಟ್ಟವರ ಮನ ಸೆಳೆಯುತ್ತಿವೆ.
—
ಸಾಂಸ್ಕೃತಿಕ ಚಟುವಟಿಕೆಗಳು
ಸಾರ್ವಜನಿಕ ಗಣೇಶೋತ್ಸವ ಸಮಿತಿಗಳು ವಿವಿಧ ಕಾರ್ಯಕ್ರಮಗಳನ್ನು ಆಯೋಜಿಸಿದ್ದವೆ:
ಭಜನೆ ಹಾಗೂ ಹರಿಕಥೆ ಸ್ಪರ್ಧೆಗಳು
ಮಕ್ಕಳ ನೃತ್ಯ–ಗೀತೆಗಳು
ಯೋಗ ಹಾಗೂ ಆರೋಗ್ಯ ಶಿಬಿರಗಳು
ಸಂಗೀತ, ರಂಗೋಲಿ, ಮ್ಯೂಸಿಕ್ ಚೇರ್ ಗಳಂತೆ ಹಲವಾರು ಮನೋರಂಜನೆ ಸ್ಪರ್ಧೆ ಗಳ ಆಯೋಜನೆ ಮಾಡಲಾಗುವುದು.
ಭಕ್ತರಿಗೆ ಅನ್ನ ಪ್ರಸಾದ್ ವನ್ನು ನೀಡಲಾಗುವುದು.
—
ವಿಸರ್ಜನೆಗೆ ಸಿದ್ಧತೆ
ಅಂತಿಮ ದಿನ ಭವ್ಯ ಮೆರವಣಿಗೆ ಮೂಲಕ ಮೂರ್ತಿಗಳನ್ನು ವಿಸರ್ಜಿಸಲಾಗುತ್ತದೆ. ಈ ಸಲ ನಗರಪಾಲಿಕೆ ವಿಶೇಷ ವಿಸರ್ಜನೆ ಟ್ಯಾಂಕ್‌ಗಳು ನಿರ್ಮಿಸಿದೆ. ದೊಡ್ಡ ಗಾತ್ರದ ಮೂರ್ತಿಗಳನ್ನು ಕ್ರೇನ್‌ಗಳ ಸಹಾಯದಿಂದ ಸುರಕ್ಷಿತವಾಗಿ ಜಲಾಶಯದಲ್ಲಿ ವಿಸರ್ಜಿಸುವ ವ್ಯವಸ್ಥೆ ಮಾಡಲಾಗಿದೆ.
—
ಭದ್ರತಾ ವ್ಯವಸ್ಥೆ
ಸಮಾರಂಭಗಳು ಶಾಂತಿಯುತವಾಗಿ ನಡೆಯಲು ಜಿಲ್ಲಾಡಳಿತ ಹಾಗೂ ಪೊಲೀಸ ಇಲಾಖೆ ಕಟ್ಟುನಿಟ್ಟಾಗಿ ಭಧ್ರತಾ ಕ್ರಮಗಳನ್ನು ಕೈ ಗೊಂಡಿವೆ. ಟ್ರಾಫಿಕ್ ನಿಯಂತ್ರಣಕ್ಕಾಗಿ ವಿಶೇಷ ಪಡೆ ಕಾರ್ಯನಿರ್ವಹಿಸುತ್ತಿದ್ದು, ಸಿಸಿಟಿವಿ ಕ್ಯಾಮರಾ ಅಳವಡಿಸಲಾಗಿದೆ.
ಪುರಾತನ ದಂಥ ಕಥೆಯ ಪ್ರಕಾರ
ಗಣೇಶನು ಪಾರ್ವತಿ ದೇವಿಯ ಸೃಷ್ಟಿ ಎಂದು ನಂಬಲಾಗುತ್ತದೆ ಭಗವಾನ ಶಿವನ ಅನುಪಸ್ಥಿತಿಯಲ್ಲಿ, ಪಾರ್ವತಿ ದೇವಿಯ ಮೈಯ ಶ್ರೀಗಂಧದಿಂದ್ ಗಣೇಶ್ ನನ್ನು ಸೃಷ್ಟಿಸಿ,ಶಿವನ ಅನುಪಸ್ಥಿತಿ ಯಲ್ಲಿ ಸ್ನಾನಕೆ ತೆರಳಿದಳು,ಶಿವ ಬಂದು ತಡೆಯಲ್ಲೂ ಮುಂದಾದ್ದಾಗ, ಶಿವನಿಂದ ಗಣೇಶನ ತಲೆ ಕತ್ತರಿಸಲುಪಟ್ಟಿತು, ಇದರ ಫಲವಾಗಿ ಆನೆಯ ತಲೆ ಯನ್ನು ಅಳವಡಿಸಲಾಯಿತು.
ಆಧುನಿಕ ಆಚರಣೆ ಯಲ್ಲಿ ಮಹಾತ್ಮಾ ಲೋಕಮಾನ್ಯ ತಿಲಕರು1893 ರಲ್ಲಿ ಗಣೇಶ ಚತುರ್ಥಿ ಯನ್ನು ಸಾರ್ವಜನಿಕ ಉತ್ಸವ ವಾಗಿ ಆಚರಿಸಲುಪಟ್ಟಿತು. ಇದು ಬ್ರಿಟಿಷ್ರರ ವಿರುದ್ಧ ದೇಶ ಭಕ್ತಿ ಯನ್ನು ಬಳಪಡಿಸಲು ಮತ್ತು ಜನರನ್ನು ಒಗ್ಗೂಡಿಸಲು ಸಹಾಯಕವಾಗಿತ್ತು.
ಭಕ್ತರ ಭಾವನೆ
“ಗಣೇಶ ಹಬ್ಬ ಎಂದರೆ ಭಕ್ತಿ ಮಾತ್ರವಲ್ಲ, ಅದು ಪ್ರೀತಿ, ಐಕ್ಯತೆ, ಸಮಾಜ ಸೇವೆ ಹಾಗೂ ಪರಿಸರ ಜಾಗೃತಿಗೂ ಪ್ರತೀಕ” ಎಂದು ಸ್ಥಳೀಯರು ಹರ್ಷೋದ್ಗಾರ .
ಗಣೇಶನನ್ನು ಎಲ್ಲ ದೇವರು ಗಳಲ್ಲಿ ಮೊದಲು ಪೂಜಿಸ ಲಾಗುತ್ತದೆ ಮತ್ತು ಯಾವುದೇ ಆಚರಣೆ ಸಮಾರಂಭ ಅಥವಾ ಪೂಜೆಯ ಪ್ರಾರಂಭದ ಮೊದಲು ಪೂಜಿಸಲಾಗುತ್ತದೆ.
ವರದಿ : ದೌಲಪ್ಪ ಮನಗೂಳಿ