ಆರ್ಯ ಸಮಾಜ ಸಾರ್ವದೇಶಿಕ ಮಹಾಸಭಾ ದೆಹಲಿ ರಾಷ್ಟ್ರೀಯ ಕಾರ್ಯಕಾರಣಿ ಸುಭಾಷ್ ಅಸ್ಟಿಕರ್ ನಿಧನ

ವಯೋ ಸಹಜ ಕಾಯಿಲೆಯಿಂದ ಬಳಲುತ್ತಿದ್ದ ತಾಲೂಕಿನ ಹಳ್ಳಿಖೇಡ (ಬಿ) ನಿವಾಸಿ ಆರ್ಯ ಸಮಾಜ ಸಾರ್ವದೇಶಿಕ ಮಹಾಸಭಾ ದೆಹಲಿಯ ರಾಷ್ಟ್ರೀಯ ಕಾರ್ಯಕಾರಿ ಆಗಿದ್ದ ಪಂಡಿತ ಸುಭಾಷ್ ಮಾರುತಿರಾವ್ ಅಸ್ಟಿಕರ್ (78) ಅವರು ಬುಧವಾರ ಸಂಜೆ 4:51 ಕ್ಕೆ ನಿಧನರಾದರು. ಮೃತರು ಪತ್ನಿ, ಇಬ್ಬರು ಗಂಡು ಮತ್ತು ಇಬ್ಬರು ಹೆಣ್ಣು ಮಕ್ಕಳು ಸೇರಿದಂತೆ ಅಪಾರ ಬಂಧು ಬಳಗ ಅಗಲಿದ್ದಾರೆ.

ಅವರ ಅಂತ್ಯಕ್ರಿಯೆ ಹಳ್ಳಿಖೇಡ (ಬಿ) ದಲ್ಲಿ ಗುರುವಾರ ಮದ್ಯಾಹ್ನ 2ಕ್ಕೆ ನಡೆಯಲಿದೆ ಎಂದು ತಿಳಿದುಬಂದಿದೆ.

ಇವರು 1947ರ ಅಗಷ್ಟ 15 ರಂದು ಸ್ವತಂತ್ರ ದಿನಾಚರಣೆ ಸಂಧರ್ಭದಲ್ಲಿ ಹುಟ್ಟಿದ್ದು, ದಿವಂಗತ ಲೋಕಸಭಾ ಸದಸ್ಯ ರಾಮಚಂದ್ರ ವೀರಪ್ಪ ಆರ್ಯ ಅವರ ಅತ್ಯಂತ ಆತ್ಮಿಯರು ಆಗಿದ್ದರು.

ಖಾದಿ ಬಂಡಾರ ದಿಂದ ಅವರು ಪ್ರಾರಂಭಿಸಿದ ಜೀವನ ಆರ್ಯ ಸಮಾಜದಲ್ಲಿ ಸಕ್ರೀಯ ಕಾರ್ಯಕರ್ತರಾಗಿ ಬೆಳೆಯುವ ಮೂಲಕ ಆರ್ಯ ಸಮಾಜದ ಉನ್ನತ ಸ್ಥಾನ ತಮ್ಮದಾಗಿಸಿಕೊಂಡಿದ್ದರು.

ದಿವAಗತ ಸುಧಕರರಾವ ಕುಲ್ಕರ್ಣಿ ಹಾಗೂ ಸುಭಾಷ ಅಷ್ಟಿಕರ ಅವರು ಜಿಲ್ಲೆಯಲ್ಲಿ ಬಿಜೆಪಿಯ ಬೀಜ ಬಿತ್ತಿದ್ದ ಕಿರ್ತಿಯು ಅವರಿಗೆ ಸಲ್ಲುತ್ತದೆ. ಒಬ್ಬ ದೊಡ್ಡ ವಾಗ್ಮಿಯಾಗಿದ್ದು, ಸ್ವತಂತ್ರ ದಿನಾಚರಣೆ ಕುರಿತು ಹಾಗೂ ಆರ್ಯ ಸಮಾಜದ ಬಲಿದಾನಗಳ ಕುರಿತು ಸೇರಿದಂತೆ ವಿವಿಧ ಕ್ಷೇತ್ರಗಳ ಅಪಾರ ಜ್ಞಾನ ಬಂಡಾರ ಅವರಲ್ಲಿತ್ತು.

ಅಲ್ಲದೆ ಶ್ರಾವಣ ಮಾಸದಲ್ಲಿ ಒಂದು ತಿಂಗಳ ಕಾಲ ಮನೆ ಮನೆಯಲ್ಲಿ ಹವನ. ಪ್ರತಿ ರವಿವಾರ ಸೇರಿದಂತೆ ದಸರಾ, ರಕ್ಷಾಬಂಧನ, ದೀಪಾವಳಿ, ಸಂಕ್ರಮಣ, ಯುಗಾದಿ ಹಬ್ಬ ಹರಿದಿನಗಳಲ್ಲಿ ಪಟ್ಟಣದ ಆರ್ಯಸಮಾಜದಲ್ಲಿ ಹೋಮ ಹವನ ತಮ್ಮ ದಿನದ ಮೋದಲ ಕೆಲಸವನ್ನಾಗಿ ಜೀವನದಲ್ಲಿ ಅಳವಡಿಸಿಕೊಂಡಿದ್ದರು.

error: Content is protected !!