ವೈದ್ಯಕೀಯ ವಿದ್ಯಾರ್ಥಿಗಳ ವಿದ್ಯಾಭ್ಯಾಸಕ್ಕಾಗಿ ದೇಹ ದಾನಕ್ಕೆ ವಾಗ್ದಾನ ಮಾಡಿದ ಅಣ್ಣಿಗೇರಿ ಕುಟುಂಬ

ವಿಜಯಪುರ : ನಗರದ ರಾಘವ್ ಅಣ್ಣಿಗೇರಿ, ಅವರ ತಾಯಿ ಕಮಲಾ ಅಣ್ಣಿಗೇರಿ, ಧರ್ಮಪತ್ನಿ ರಚನಾ ಅಣ್ಣಿಗೇರಿ ಯವರು ಸ್ವಯಂ ಪ್ರೇರಣೆಯಿಂದ, ವೈದ್ಯಕೀಯ ವಿದ್ಯಾರ್ಥಿಗಳ ಅನುಕೂಲಕ್ಕಾಗಿ ವಿಜಯಪುರದ
ಬಿ ಎಲ್ ಡಿ ಇ ವೈದ್ಯಕೀಯ ಕಾಲೇಜ ಗೆ ದೇಹ ದಾನಕ್ಕೆ ವಾಗ್ದಾನ ಮಾಡುವುದರೊಂದಿಗೆ ಮಾದರಿಯಾಗಿದ್ದಾರೆ.. ದಾನಗಳಲ್ಲಿಯೇ ಶ್ರೇಷ್ಠವಾದ ರಕ್ತದಾನ, ಅಂಗಾಂಗ ದಾನ, ದೇಹ ದಾನ ಎನ್ನುವ ಸಂಕಲ್ಪದೊಂದಿಗೆ, ಜಾಗೃತಿ ಮೂಡಿಸುವ ಕಾರ್ಯವನ್ನು ಕೂಡ ಮಾಡಿದ್ದಾರೆ,
ರಕ್ತದಾನ, ಅಂಗಾಂಗ ದಾನಗಳು ಅನೇಕ ಜೀವಗಳನ್ನೆ ಉಳಿಸಬಲ್ಲವು, ಮರಣದ ನಂತರ ಮನುಷ್ಯನು ದೇಹ ದಾನ ಮಾಡುವಂತ ಪ್ರವೃತ್ತಿಯನ್ನು ಅಳವಡಿಸಿಕೊಂಡರೆ , ಭವಿಷ್ಯದ ವೈದ್ಯರುಗಳಿಗೆ ಅತ್ಯಂತ ಸಹಕಾರಿಯಾಗಲಿದೆ, ಅನೇಕರು ತಮ್ಮ ಮಕ್ಕಳನ್ನು ಉತ್ತಮ ವೈದ್ಯರನ್ನಾಗಿ ನೋಡಲು ಬಯಸುತ್ತಾರೆ, ಆದರೆ ಕಾರಣಾಂತರಗಳಿಂದ ದೇಹ ದಾನದಂತಹ ವಾಗ್ದಾನಕ್ಕೆ ಮುಂದಾಗುವುದಿಲ್ಲ, ಇದರಿಂದ ವೈದ್ಯಕೀಯ ವಿದ್ಯಾರ್ಥಿಗಳ ಅಧ್ಯಯನಕ್ಕೆ ಮನುಷ್ಯನ ಮೃತ ದೇಹಗಳು ಸಿಗವುದೇ ಸವಾಲಾಗಿ ಪರಿಣಮಿಸಿ, ಪರದಾಡುವ ಸ್ಥಿತಿ ನಿರ್ಮಾಣವಾಗಿವೆ, ದೇಶದಲ್ಲಿರುವ ಅನೇಕ ವೈದ್ಯಕೀಯ ಕಾಲೇಜುಗಳು, ಮೃತದೇಹಗಳು ಸಿಗದೇ ಇರುವುದರಿಂದ ವಿವಿಧ ಸಮಸ್ಯೆಗಳನ್ನು ಎದುರಿಸಬೇಕಾಗುತ್ತದೆ, ಮರಣದ ನಂತರ ಮನುಷ್ಯನು ತನ್ನ ದೇಹದ ದಾನಕ್ಕೆ ಮುಂದಾದರೆ, ವೈದ್ಯಕೀಯ ವಿದ್ಯಾರ್ಥಿಗಳ ಅಭ್ಯಾಸಕ್ಕೆ ಸಹಕಾರಿಯಾಗಲಿದೆ ಎಂದು ರಾಘವ ಅಣ್ಣಿಗೇರಿ ತಿಳಿಸಿದರು..
ಕೇವಲ ಪ್ರಚಾರಕ್ಕಾಗಿ ಮಾಡುವುದು ಮುಖ್ಯವಲ್ಲ, ಇದರಿಂದ ಸಮಾಜದಲ್ಲಿ ಜಾಗೃತಿ ಮೂಡಿ, ವೈದ್ಯಕೀಯ ಕ್ಷೇತ್ರದಲ್ಲಿ ಸಾಧನೆ ಮಾಡಲು ಹೊರಟಿರುವ ವಿದ್ಯಾರ್ಥಿಗಳಿಗೆ ಅನುಕೂಲವಾಗಲಿ ಎನ್ನುವ ಏಕೈಕ ಉದ್ದೇಶದಿಂದ ಮಾಹಿತಿಯನ್ನು ಮಾಧ್ಯಮಗಳ ಮುಖಾಂತರ ಹಂಚಿಕೊಂಡಾಗ, ಇನ್ನಷ್ಟು ಜನತೆ ಈ ಮಹತ್ತರ ಕಾರ್ಯಕ್ಕೆ ಮುಂದೆ ಬರಬೇಕು ಎನ್ನುವ ಬಯಕೆ..

ವರದಿ : ಅಜೀಜ ಪಠಾಣ.

error: Content is protected !!