ಕಾಳಗಿ ತಾಲೂಕಿನ ಹಿಂದೂ ಧಾರ್ಮಿಕ ದತ್ತಿ ಇಲಾಖೆಯ ಸುಕ್ಷೇತ್ರ ರೇವಗ್ಗಿ ರಟಕಲ ರೇವಣಸಿದ್ದೇಶ್ವರ ದೇವಸ್ಥಾನದಲ್ಲಿ .ಶುಕ್ರವಾರ ಸೇಡಂ ಸಹಾಯಕ ಆಯುಕ್ತರ ಮತ್ತು ದೇವಸ್ಥಾನ ಸಮಿತಿ ಅಧ್ಯಕ್ಷರು ಪ್ರಭುರಡ್ಡಿ ತಾಲೂಕ್ ಕಂದಾಯ ಇಲಾಖೆ ಸಿಬ್ಬಂದಿ ಹುಂಡಿ ಹಣ ಎಣಿಕೆ ಮಾಡಿದರು ಮಾಡಿದ್ದೂ ಹಣ 37.67.621ರೂ 2025 ಮಾರ್ಚ್ 21ರಿಂದ ಎಲ್ಲಿವರೆಗೂ ಸುಮಾರು 6 ತಿಂಗಳ ಅವಧಿಯಲ್ಲಿ ಭಕ್ತರಿಂದ ಹುಂಡಿ ಯಲ್ಲಿ ಹಣವನ್ನು ಸಂಗ್ರಹಣೆ ಮಾಡಲಾಗಿದೆ. ಭಕ್ತರು ಹರಕೆ ರೂಪದಲ್ಲಿ ಸಲ್ಲಿಸಿದ ಕಣಿಕೆ ಹಣವನ್ನು 37.67.621ರೂ ನಗದು ಹಣವನ್ನು ಹಾಗೂ ತೊಟ್ಟಲು, ಉಂಗುರ ಬಾಸಿಂಗ್ ಹೇಗೆ ಭಕ್ತರೂ ಕಾಣಿಕೆ ರೂಪದಲ್ಲಿ ಒಂದು ಕೆಜಿ (1000ಗ್ರಾಂ)ಬೆಳ್ಳಿ ಹಾಗೂ 35ಗ್ರಾಂ ಬಂಗಾರ ಸಂಗ್ರಹವಾಗಿದೆ.ನಗದು ಹಣವನ್ನು ರೇವಗ್ಗಿ ಕರ್ನಾಟಕ ಗ್ರಾಮೀಣ ಬ್ಯಾಂಕ್ ದೇವಸ್ಥಾನ ಖಾತೆಗೆ ಜಾಮ ಮಾಡಲಾಗಿದೆ ಬಂಗಾರ ಮತ್ತು ಬೆಳ್ಳಿ ಯನ್ನು ದೇವಸ್ಥಾನ ಟಿಜರಿಯಲ್ಲಿ ಇಡಲಾಗಿದೆ ಎಂದು ಸೇಡಂ ಸಹಾಯಕ ಆಯುಕ್ತ ಕಚೇರಿ ತಹಸೀಲ್ದಾರ್ ನಾಗನಾಥ್ ತೆರಿಗೆ ತಿಳಿಸಿದ್ದಾರೆ ಈ ಸಂಧರ್ಭದಲ್ಲಿ ದೇವಸ್ಥಾನ ಸಮಿತಿ ಅಧ್ಯಕ್ಷರು ಪ್ರಭು ರಡ್ಡಿ ಹಾಗೂ ಸೇಡಂ ಸಹಾಯಕ ಆಯುಕ್ತ ತಹಸೀಲ್ದಾರ್ ನಾಗನಾಥ್ ತೆರಿಗೆ ಹಾಗೂ ಅಧಿಕಾರಿಗಳು ದೇವಸ್ಥಾನ ಅರ್ಚಕರು ಸಿಬ್ಬಂದಿ ಉಪ ಸ್ಥಿತರಿದ್ದರು.
ವರದಿ : ರಮೇಶ್ ಎಸ್ ಕುಡಹಳ್ಳಿ jk ಕನ್ನಡ ನ್ಯೂಸ್ ಕಾಳಗಿ