ಬೆಂಗಳೂರು : ದಿನಾಂಕ:10/10/2025 ರ ಮಧ್ಯರಾತ್ರಿ 1 ಗಂಟೆ 23 ನಿಮಿಷದ ಸಮಯದಲ್ಲಿ ಪಾದರಾಯನಪುರದ ರಸ್ತೆಯಲ್ಲಿ, ನಾಲೈದು ವ್ಯಕ್ತಿಗಳು ಕಾರೊಂದನ್ನು ನಿಲ್ಲಿಸಿಕೊಂಡು. ಅನುಮಾಸ್ಪದವಾಗಿ ವರ್ತಿಸುತ್ತಿದ್ದರು. ಇದನ್ನು ಗಮನಿಸಿದ ಸಾರ್ವಜನಕ ವ್ಯಕ್ತಿಯೋರ್ವನು ಕೂಡಲೇ “ನಮ್ಮ-112” ಕರೆ ಮಾಡಿ ತಿಳಿಸಿರುತ್ತಾನೆ. ಕೂಡಲೇ ಹೆಲ್ಸ್ ಲೈನ್ ನಂಬರ್ ಆದ “ನಮ್ಮ-112” ಕಂಟ್ರೋಲ್ ರೂಮ್ ನಿಂದ ಸಂಬಂಧಪಟ್ಟ ಹೊಯ್ಸಳ-57ರ ವಾಹನಕ್ಕೆ ವಿಷಯವನ್ನು ತಿಳಿಸಿರುತ್ತಾರೆ.
ಹೊಯ್ಸಳ-57ರ ವಾಹನದ ಸಿಬ್ಬಂದಿಗಳು ಕೂಡಲೇ ಕಾರ್ಯಪ್ರವೃತ್ತರಾಗಿ, ಕೇವಲ 7 ನಿಮಿಷದಲ್ಲಿ ಆ ಸ್ಥಳಕ್ಕೆ ಧಾವಿಸಿ, ಸ್ಥಳದಲ್ಲಿದ್ದ ವ್ಯಕ್ತಿಗಳನ್ನು ಪ್ರಶ್ನಿಸಿ ಹಾಗೂ ಕಾರನ್ನು ಪರಿಶೀಲಿಸಿದಾಗ, ನಿಷೇದಿತ ಮಾದಕ ವಸ್ತುವಾದ 1.5 ಕೆ.ಜಿ ಗಾಂಜಾವನ್ನು ಪತ್ತೆ ಮಾಡಿರುತ್ತಾರೆ. ನಂತರ ಆ ವ್ಯಕ್ತಿಗಳನ್ನು, ಕಾರು ಮತ್ತು ವಶಪಡಿಸಿಕೊಂಡ ಗಾಂಜಾ ಸಮೇತ ಜೆ.ಜೆ.ನಗರ ಪೊಲೀಸ್ ಠಾಣಾಧಿಕಾರಿಯವರಿಗೆ ವರದಿಯೊಂದಿಗೆ ಮುಂದಿನ ಕಾನೂನು ಕ್ರಮಕ್ಕಾಗಿ ನೀಡಿರುತ್ತಾರೆ.
ಬೆಂಗಳೂರು ನಗರ ಪೊಲೀಸ್ ಸೇಫ್ ಸಿಟಿ ಪ್ರಾಜೆಕ್ಟ್‌ನ ಅಡಿಯಲ್ಲಿ ನಿರ್ಮಿಸಿರುವ ಕಾಮಾಂಡ್ ಸೆಂಟರ್ ದಿನದ 24 ಗಂಟೆಯೂ ಬೆಂಗಳೂರು ನಗರದ ಜನತೆಯ ಭದ್ರತೆಯ ಬಗ್ಗೆ ಕಾರ್ಯ ನಿರ್ವಹಿಸುತ್ತಿದ್ದು, ಯಾವುದೇ ದೂರು “ನಮ್ಮ-112” ಸಲ್ಲಿಸಿದಲ್ಲಿ ಅದಕ್ಕೆ ಕೂಡಲೇ ಪ್ರತಿಕ್ರಯಿಸಿ, ಸಾರ್ವಜನಿಕರ ಕುಂದು ಕೊರತೆಯನ್ನು ಆಲಿಸಿ ಪರಿಹಾರವನ್ನು ಬೆಂಗಳೂರು ನಗರ ಪೊಲೀಸ್ ನೀಡುತ್ತದೆ. ಅಲ್ಲದೆ ಪೊಲೀಸ್ ಸಿಬ್ಬಂದಿಗಳು ಹಾಗೂ ಹೊಯ್ಸಳ ವಾಹನಗಳು ಸಹ ಸದಾ ಸೇವೆಯಲ್ಲಿ ತೊಡಗಿಸಿಕೊಂಡಿರುವುದು ಸಹ ಕಂಡುಬಂದಿರುತ್ತದೆ.