ಸುರಪುರ : ಇಂದು ಮಧ್ಯಾಹ್ನ 12ಗಂಟೆಗೆ ನಡೆದ ಅಪಘಾತ ಇದು
ಯಾದಗಿರಿ ಜಿಲ್ಲೆಯ ಸುರಪುರ ತಾಲೂಕಿನ ಮಂಗಳೂರು ಗ್ರಾಮದಲ್ಲಿ ನಡೆದಂತ ಘಟನೆ
ಮೃತ ದುರ್ದೈವಿ ಲಕ್ಷ್ಮಿ ತಂದೆ ಪರಶುರಾಮ್ ಪೂಜಾರಿ ವಯಸ್ಸು 2 ವರ್ಷಗಳು ಎಂದು ಗುರುತಿಸಿದ್ದಾರೆ
ಸಂಬಂಧಿಕರ ಆಕ್ರಂದನ ಮುಗಿಲು ಮುಟ್ಟಿದೆ
ಬಾಲಕೀಯ ತಂದೆ ತಾಯಿ ಬೆಂಗಳೂರಿನಲ್ಲಿ ದುಡಿಯಲು ಹೋಗಿದ್ದು ಬಾಲಕಿ ಅಜ್ಜಿ ಜೊತೆಯಲಿ ಮಂಗಳೂರು ಗ್ರಾಮದಲ್ಲಿ ವಾಸವಿದ್ದಳು
ಸುರಪುರ ಕೂಡ್ಲಿಗಿ ಸುರಪುರ ಮಾರ್ಗವಾಗಿ ದಿನನಿತ್ಯ ಚಲಿಸುವ ಬಸ್ಸು
ಬಸ್ಸಿನ ಮುಂದಿನ ಎಡ ಭಾಗದ ಚಕ್ರಕ್ಕೆ ಸಿಲುಕಿ ಬಾಲಕಿ ಮೃತಪಟ್ಟಿರುವ ಘಟನೆ ನಡೆದಿದೆ
ಬಸ್ಸಿನ ಚಾಲಕ ಸ್ಥಳದಿಂದ ಪರಾರಿಯಾಗಿದ್ದು
ಪ್ರಕರಣಕ್ಕೆ ಸಂಬಂಧಿಸಿದಂತೆ ಸ್ಥಳೀಯ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ
ವರದಿ : ಸಿಎಂ ಮಕಾಂದಾರ
