ಎಲ್ಲಾ ಸರ್ಕಾರಿ ಕಛೇರಿಗಳಲ್ಲಿ ಕಡ್ಡಾಯವಾಗಿ “ಬಸವೇಶ್ವರ ಜಯಂತಿ ಆಚರಣೆ ಆಗುವಂತೆ ಅಧಿಕಾರಿಗಳು ನೋಡಿಕೊಳ್ಳಬೇಕು : ಸಂಗಮೇಶ ಜವಾದಿ

ಬೀದರ : ಜಗಜ್ಯೋತಿ ಬಸವೇಶ್ವರ ಜಯಂತಿಯು ದಿನಾಂಕ 20.04.2026 ರಂದು ವಿಶ್ವದಾದ್ಯಂತ ಅತ್ಯಂತ ಗೌರವಪೂರ್ವಕವಾಗಿ ಆಚರಿಸಲಾಗುತ್ತದೆ.
ಜಗಜ್ಯೋತಿ ಬಸವಣ್ಣನವರು ತಮ್ಮ ವಚನಗಳ ಮೂಲಕ ಸಾಮಾಜಿಕ ಸಮಾನತೆ ಮತ್ತು ಕಾಯಕ ಸಂಸ್ಕೃತಿಯನ್ನು ಜಗತ್ತಿಗೆ ಸಾರಿದ ಮಹಾನ್ ಮಾನವತಾವಾದಿ. ಅವರ ತತ್ವಗಳು ಇಂದಿನ ಸಮಾಜಕ್ಕೆ ಅತ್ಯಂತ ಅವಶ್ಯಕವಾಗಿವೆ.
​ಆದರೆ, ಕಳೆದ ಕೆಲವು ವರ್ಷಗಳಿಂದ ತಾಲ್ಲೂಕಿನ ಹಲವು ಸರ್ಕಾರಿ ಕಚೇರಿಗಳಲ್ಲಿ ಬಸವೇಶ್ವರ ಜಯಂತಿಯನ್ನು ಕೇವಲ ಹೆಸರಿಗೆ ಮಾತ್ರ ಆಚರಿಸಲಾಗುತ್ತಿದೆ ಅಥವಾ ನಿರ್ಲಕ್ಷಿಸಲಾಗುತ್ತಿದೆ ಅಥವಾ ಎಲ್ಲಾ ಸಿಬ್ಬಂದಿಗಳು ಜಯಂತಿ ಕಾರ್ಯಕ್ರಮದಲ್ಲಿ ಹಾಜರಾಗದೆ ಕಛೇರಿ ಮುಖ್ಯಸ್ಥರು ಮಾತ್ರ ಹಾಜರಾಗುತ್ತಿದ್ದಾರೆ ಎಂಬ ದೂರುಗಳು ಕೇಳಿಬರುತ್ತಿವೆ. ಇದು ಬಸವ ಅನುಯಾಯಿಗಳಿಗೆ ಮತ್ತು ಅವರ ತತ್ವಗಳನ್ನು ಗೌರವಿಸುವ ಸಾರ್ವಜನಿಕರಿಗೆ ಮಾಡಿದ ಅವಮಾನವಾಗಿದೆ.
ಕಾರಣ ಈ ಕೂಡಲೇ ಆಯಾ ಇಲಾಖೆಯ ಸಂಬಂಧ ಪಟ್ಟಂತ ಅಧಿಕಾರಿಗಳಿಗೆ ಸೂಚನೆ ನೀಡುವ ಮುಖಾಂತರ ಬಸವ ಜಯಂತಿ ಅರ್ಥಪೂರ್ಣವಾಗಿ ಆಚರಣೆ ಮಾಡುವಂತೆ ತಾವು ಲಿಖಿತ ರೂಪದಲ್ಲಿ ತಿಳಿಸಬೇಕೆಂದು ಜಿಲ್ಲಾ ಶರಣ ಸಾಹಿತ್ಯ ಪರಿಷತ್ತಿನ ಗೌರವ ಕಾರ್ಯದರ್ಶಿ ಅಧ್ಯಕ್ಷ ಸಂಗಮೇಶ ಜವಾದಿ ಜಿಲ್ಲೆಯ ಎಲ್ಲ ಅಧಿಕಾರಿಗಳಿಗೆ ಮನವಿ ಮಾಡಿದ್ದಾರೆ.

​ನಮ್ಮ ಬೇಡಿಕೆಗಳು ಹೀಗಿವೆ:
​ಜಿಲ್ಲೆಯ ಪ್ರತಿಯೊಂದು ಸರ್ಕಾರಿ ಹಾಗೂ ಅರೆ-ಸರ್ಕಾರಿ ಕಚೇರಿಗಳಲ್ಲಿ ಅಂದು ಕಡ್ಡಾಯವಾಗಿ ಬಸವಣ್ಣನವರ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿ, ಗೌರವಪೂರ್ವಕವಾಗಿ ಜಯಂತಿ ಆಚರಿಸಬೇಕು ಹಾಗೂ ಫೋಟೋ‌ ಸಹಿತ ಆಚರಿಸಿದ ಬಗ್ಗೆ ವರದಿ ಪಡೆಯಬೇಕು. ವರದಿಯನ್ನು ಇಲಾಖೆಯ ಜಿಲ್ಲಾ ಮುಖ್ಯಸ್ಥರಿಗೆ ಸಲ್ಲಿಸಲು ಕೋರಿದೆ.
​ಈ ಕುರಿತು ಕೂಡಲೇ ಎಲ್ಲಾ ಇಲಾಖಾ ಮುಖ್ಯಸ್ಥರು. ತಮ್ಮಷ್ಟಕ್ಕೆ ಬರುವ ಕಛೇರಿಗೆ ಕಟ್ಟುನಿಟ್ಟಿನ ಆದೇಶ ಹೊರಡಿಸಬೇಕು.
​ಒಂದು ವೇಳೆ ಈ ಬಾರಿ ಜಯಂತಿ ಆಚರಣೆಯಲ್ಲಿ ಯಾವುದೇ ರೀತಿಯ ನಿರ್ಲಕ್ಷ್ಯ ಕಂಡುಬಂದಲ್ಲಿ ಅಥವಾ ನಮ್ಮ ಈ ಮನವಿಯನ್ನು ಗಂಭೀರವಾಗಿ ಪರಿಗಣಿಸಬೇಕು ಬಸವಜಯಂತಿ ಆಚರಿಸದ ಅಧಿಕಾರಿಗಳ. ವಿರುದ್ಧ ಸಮಸ್ತ ಬಸವ ಅಭಿಮಾನಿಗಳ ವತಿಯಿಂದ ಉಗ್ರ ಹೋರಾಟ ಮಾಡುವುದಾಗಿ ಪತ್ರಿಕೆ ಹೇಳಿಕೆಯಲ್ಲಿ ತಿಳಿಸಿದ್ದಾರೆ.

error: Content is protected !!