ಶಾಲಾ/ಕಾಲೇಜು ಮತ್ತು ಬಸ್ಸ್ ನಿಲ್ದಾಣಗಳಲ್ಲಿ ಓಡಾಡುವ ಪುಂಡರ ಮೇಲೆ ಜಿಲ್ಲಾ ಪೊಲೀಸರ ಹದ್ದಿನ ಕಣ್ಣು

ಬೀದರ್ :  ಜಿಲ್ಲೆಯ ಶಾಲಾ/ಕಾಲೇಜು, ಬಸ್ಸ್ ನಿಲ್ದಾಣಗಳಲ್ಲಿ ಪುಂಡರ ಉಪಟಳದಿಂದ ಗೊತ್ತಿಲ್ಲದೇ ಅದೆಷ್ಟೋ ವಿದ್ಯಾರ್ಥಿ ವಿಶೇಷವಾಗಿ ಹಳ್ಳಿಗಳಿಂದ ಬರುವ ವಿದ್ಯಾರ್ಥಿ/ವಿದ್ಯಾರ್ಥಿನಿಯರು ಶಾಲಾ/ಕಾಲೇಜಗಳನ್ನು ಬಿಡುವ ಮತ್ತು ಶಿಕ್ಷಣದಿಂದ ವಂಚಿತರಾಗುವ ಸಂಗತಿ ಉಂಟಾಗುತ್ತಿದ್ದು, ಅವುಗಳನ್ನು ತಡೆಯಲು ಮತ್ತು ಪುಂಡರ ಹೆಡೆ ಮುರಿಯುವ ನಿಟ್ಟಿನಲ್ಲಿ ಜಿಲ್ಲೆಯ ಎಲ್ಲಾ ಬಸ್ಸ್ ನಿಲ್ದಾಣ, ಶಾಲಾ ಕಾಲೇಜ ಹತ್ತಿರ ಪುಂಡರ ಮೇಲೆ ಜಿಲ್ಲಾ ಪೊಲೀಸ್ ಹದ್ದಿನ ಕಣ್ಣು ಇಟ್ಟು ಅಂತವರ ವಿರುದ್ದ ನಿರ್ದಾಕ್ಷಣವಾಗಿ ಕಾನೂನು ಕ್ರಮ ಕೈಕೊಳ್ಳಲು ಬೀದರ ಜಿಲ್ಲಾ ಪೊಲೀಸ್ ರಿಂದ ಒಂದು ವಿಶೇಷ ಮಹಿಳಾ ತಂಡವನ್ನು ರಚಿಸಿದ್ದು, ಈ ಸಂದೇಶದ ಮೂಲಕ ಪುಂಡರಿಗೆ ಕಟ್ಟೆಚ್ಚರಿಸಲಾಗಿದೆ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಪ್ರದೀಪ್ ಗುಂಟಿ ಐ.ಪೀ.ಎಸ್ ಅವರು ಸಾಮಾಜಿಕ ಜಾಲತಾಣದ ಮುಖಾಂತರ ವಿದ್ಯಾರ್ಥಿ/ವಿದ್ಯಾರ್ಥಿನಿಯರ ಸುರಕ್ಷತೆ, ರಕ್ಷಣೆಯ ಭರವಸೆ ನೀಡಿದರು ಮತ್ತು ಬೀದರ ಜಿಲ್ಲಾ ಪೊಲೀಸ್ ಸದಾ ಸಿದ್ಧ ಮತ್ತು ಸದಾ ನಿಮ್ಮ ಸೇವೆಯಲ್ಲಿ ಎಂದು ಹೇಳಿದರು.

ವರದಿ : ಪ್ರದೀಪ್ ಕುಮಾರ್ ದಾದನೂರ್