ಸಿಆರ್‌ಪಿಎಫ್ ಶಾಲೆ ಬಳಿ ಭಾರೀ ಸ್ಪೋಟ; ಸ್ಥಳಕ್ಕೆ ಪೊಲೀಸರ ದೌಡು

ಹೊಸದಿಲ್ಲಿ: ದೆಹಲಿಯ ರೋಹಿಣಿಯಲ್ಲಿರುವ ಸಿಆರ್‌ಪಿಎಫ್ ಶಾಲೆಯಲ್ಲಿ ರವಿವಾರ (ಅ.20) ಬೆಳಗ್ಗೆ ಭಾರೀ ಸ್ಫೋಟ ಸಂಭವಿಸಿದೆ. ಶಾಲೆಯ ಗೋಡೆಗೆ ಹಾನಿಯಾಗಿದೆ, ಆದರೆ ಯಾವುದೇ ಪ್ರಾಣಹಾನಿ ಸಂಭವಿಸಿಲ್ಲ.

 

ಫೋರೆನ್ಸಿಕ್ ತಂಡಗಳು ಮತ್ತು ದೆಹಲಿ ಪೊಲೀಸ್ ವಿಶೇಷ ಘಟಕದ ಅಧಿಕಾರಿಗಳು ಸ್ಥಳಕ್ಕೆ ಧಾವಿಸಿದ್ದು, ಸ್ಫೋಟಕ್ಕೆ ಕಾರಣವೇನು ಎಂಬುದನ್ನು ಗುರುತಿಸಲು ಪ್ರಯತ್ನಿಸುತ್ತಿದ್ದಾರೆ.

 

ಸ್ಥಳೀಯ ನಿವಾಸಿಯೊಬ್ಬರು ರೆಕಾರ್ಡ್ ಮಾಡಿದ ವೀಡಿಯೊವು ಸ್ಫೋಟದ ಸ್ಥಳದ ಸಮೀಪದಿಂದ ಹೊಗೆಯ ಮೋಡವನ್ನು ತೋರಿಸುತ್ತದೆ. “ನಾನು ಮನೆಯಲ್ಲಿದ್ದೆ, ನಾನು ದೊಡ್ಡ ಶಬ್ದವನ್ನು ಕೇಳಿದೆ, ಹೊಗೆಯನ್ನು ನೋಡಿದೆ ಬಳಿಕ ವೀಡಿಯೊವನ್ನು ರೆಕಾರ್ಡ್ ಮಾಡಿದೆ, ನನಗೆ ಏನೂ ತಿಳಿದಿಲ್ಲ, ಪೊಲೀಸ್ ತಂಡ ಮತ್ತು ಆಂಬ್ಯುಲೆನ್ಸ್ ಸ್ಥಳಕ್ಕೆ ತಲುಪಿದೆ” ಎಂದು ಪ್ರತ್ಯಕ್ಷದರ್ಶಿಯೊಬ್ಬರು ಹೇಳಿದ್ದಾರೆ.

 

ಪ್ರಶಾಂತ್ ವಿಹಾರ್‌ನಲ್ಲಿರುವ ಸಿಆರ್‌ಪಿಎಫ್ ಶಾಲೆಯ ಬಳಿ ಬೆಳಗ್ಗೆ 7.47ಕ್ಕೆ ಸ್ಫೋಟ ಸಂಭವಿಸಿದೆ. ಸ್ಫೋಟಕ್ಕೆ ಕಾರಣವೇನು ಎಂಬುದರ ಕುರಿತು ತನಿಖೆ ನಡೆಸಲು ತಜ್ಞರನ್ನು ಕರೆಸಿದ್ದೇವೆ ಎಂದು ಹಿರಿಯ ಪೊಲೀಸ್ ಅಧಿಕಾರಿ ಅಮಿತ್ ಗೋಯೆಲ್ ಹೇಳಿದ್ದಾರೆ. ಪೊಲೀಸರು ಇನ್ನೂ ಅನುಮಾನಾಸ್ಪದವಾಗಿ ಏನನ್ನೂ ಕಂಡುಕೊಂಡಿಲ್ಲ. ತನಿಖೆಯ ಭಾಗವಾಗಿ ಒಳಚರಂಡಿ ಮಾರ್ಗವನ್ನು ಪರಿಶೀಲಿಸಲಾಗುತ್ತಿದೆ ಎಂದು ಹೇಳಿದರು.

error: Content is protected !!