ಸಾಧಕರ ಪರಿಚಯ ಮಾಲೆ ಹೆಮ್ಮೆಯ ಕನ್ನಡಿಗ ವಿರೇಶರೆಡ್ಡಿ

ಬರಹಗಾರರು : ಓಂಕಾರ ಲಹರಿ

ಧರೆಯೋಳು ಪ್ರಾಚೀನ ಲಿಪಿ ಕನ್ನಡ
ನುಡಿದರೆ ಸವಿ ಬೆಲ್ಲದಂತೆ ನುಡಿ ಕನ್ನಡ ಮಜ್ಜಿಗೆಯೊಳಗಿನ ಬೆಣ್ಣೆಯಂತೆ ನುಡಿ ಕನ್ನಡ
ಘಮ ಘಮ ತುಪ್ಪದಂತೆ ನುಡಿ ಕನ್ನಡ
ಸಿಹಿ ಜೇನಿನ ಸವಿಯು ನುಡಿ ಕನ್ನಡ
ಹಲಸು ಮಾವಿನ ರುಚಿಯು ನುಡಿ ಕನ್ನಡ
ದಾಸ ಶರಣರ ಸಂತರ ಭಾಷೆ ನುಡಿ ಕನ್ನಡ
ಜ್ನ್ಯಾನ ಪೀಠ ಪ್ರಶಸ್ತಿಯ ಗರಿಗೆ ನುಡಿ ಕನ್ನಡ
ನಾವಾಡುವ ಭಾಷೆ ನುಡಿ ಕನ್ನಡ
ಅನ್ನದ ನೆಲ ಕನ್ನಡ,
ತನು ಕನ್ನಡ
ಮನ ಕನ್ನಡ,
ಉಸಿರು ಹಸಿರು ಕನ್ನಡ
ಭವ್ಯ ಪರಂಪರೆ ನಾಡು ನುಡಿ ಕನ್ನಡ
ಕನ್ನಡ ಭವನೇಶ್ವರಿ ಮಾತೇ
ನಿನ್ನ ಮಡಿಲಲ್ಲಿ ಜನಸಿದ ನಾವೇ ಧನ್ಯ.

*ಮೇಲಿನ ಕವಿವಾಣಿಯಂತೆ ತನ್ನ ಬದುಕಿನಲ್ಲಿ ಕನ್ನಡವನ್ನೇ ಉಸಿರಾಗಿಸಿಕೊಂಡು ನಿರಂತರ ಕನ್ನಡ, ಭಾಷೆ,ನೆಲ ಜಲ ಹಾಗು ಕನ್ನಡಿಗರಿಗಾಗಿ ಸದಾ ಸೇವೆ ಮಾಡುತ್ತಿರುವವರು ವಿರೇಶ ರೆಡ್ಡಿ*

ತಾಯಿ ಸರಸ್ವತಿ ತಂದೆ ಬಾಬುರಾವ ದಂಪತಿಯ ಮಗನಾದ ಶ್ರೀ ವೀರೇಶ ರೆಡ್ಡಿ (ವಿರಶೆಟ್ಟಿ )೧೫. ೫. ೧೯೮೭ರಲ್ಲಿ ಬೊತಗಿ ಮನೆತನದಲ್ಲಿ ಜನಸಿದರು. ಒಂದನೇ ತರಗತಿಯಿಂದ ತರಗತಿವರೆಗೆ ಹಳ್ಳಿಖೆಡ್ ಬಿ ಸರಕಾರಿ ಪ್ರೌಢಶಾಲೆಯಲ್ಲಿ ಅಭ್ಯಾಸ ಮಾಡಿದರು. ತಂದೆ ಕೃಷಿ ಕೂಲಿ ಕಾರ್ಮಿಕರಾಗಿ ಕೆಲಸ ಮಾಡುವವರು, ಆದರೆ ಮನೆ ಖರ್ಚು ವೆಚ್ಚಗಳನ್ನು ತಂದೆಯವರಿಗೆ ನಿಭಾಯಿಸಲು ಆಗದ ಕಾರಣ ವಿರೇಶರೆಡ್ಡಿಯವರು ತಮ್ಮ ಕುಟುಂಬದ ಸಹಾಯಕ್ಕಾಗಿ ತನ್ನ ವಿದ್ಯಾಭ್ಯಾಸವನ್ನು ಮದ್ಯದಲ್ಲಿಯೇ ಮೋಟಕು ಗೋಳಸಿ ಟಿವಿ ಮೆಕ್ಯಾನಿಕ್ ಆಗಿ ತಮ್ಮ ವೃತ್ತಿಯನ್ನು ಆರಂಭಿಸಿದರು.

ಬಾಲ್ಯದಿಂದಲೇ ಕಾಲಿನ ಅಂಗವೈಕಲ್ಯದಿಂದ ಕೂಡಿರುವ ಅವರು ಒಬ್ಬ ಭಾವುಕ ಜೀವಿ, ಬಡವರ, ನೊಂದವರ ಪರ ದ್ವನಿ ಎತ್ತುವ ನಿಷ್ಕಲ್ಮಶ ಮನಸಿನವಾರದ ಅವರು ತಮ್ಮ ವೃತ್ತಿಯ ಜೊತೆಗೆ ಪೃರ್ವತ್ತಿಯಲ್ಲಿ ಸಮಾಜ ಸೇವೆಯಲ್ಲಿ ತೊಡಗಿಸಿಕೊಂಡರು.

ಸಮಾಜ ಸೇವೆ :

ಮೊಟ್ಟ ಮೊದಲಿಗೆ ಅಖಿಲ ಕರ್ನಾಟಕ ಅಂಗವಿಕಲರ ಹೋರಾಟ ಸಮಿತಿಯ ಅಧ್ಯಕ್ಷರಾಗಿ ಅಂಗವಿಕಲರ ಸಮಸ್ಯೆ ಮತ್ತು ಪರಿಹಾರ ವದಗಿಸುವ ನಿಟ್ಟಿನಲ್ಲಿ ನಿರಂತರವಾಗಿ ಹೋರಾಟದಲ್ಲಿ ತೊಡಗಿಸಿಕೊಂಡರು.

ಇವರ ನಿರಂತರ ಸಮಾಜ ಸೇವೆಯನ್ನು ಕಂಡ ಜನರು ಇವರನ್ನು ೨೦೧೧ ರ ಅವಧಿಯಲ್ಲಿ ಹಳ್ಳಿಖೆಡ್ ಬಿ ಗ್ರಾಮ ಪಂಚಾಯತಿಯ ಸದಸ್ಯನನ್ನಾಗಿ ಆಯ್ಕೆಮಾಡಿದರು. ಇವರ ಕಾಲವಧಿಯಲ್ಲಿ ಗ್ರಾಮಪಂಚಾಯತ ಯೋಜನೆಗಳನ್ನು ಸದುಪಯೋಗ ಮಾಡಿಕೊಂಡು, ಮೊಟ್ಟಮೊದಲು ತನ್ನ ವಾರ್ಡಿನ ಜನರಿಗೆ ಸಿ ಸಿ ರಸ್ತೆ, ಚರಂಡಿ ಮಾಡಿಸಿಕೊಟ್ಟರು, ನೀರಿನ ತೊಟ್ಟಿಯನ್ನು (ಟಾಕಿ)ಕಟ್ಟಿ ಕುಡಿಯುವ ನೀರಿನ ಸಮಸ್ಯೆಯನ್ನು ಬಗೆಹರಿಸುವ ನಿಟ್ಟಿನಲ್ಲಿ ಕಾರ್ಯಪ್ರವೃತ್ತರಾದರು.ಸುಮಾರು ೨೫೦ಕ್ಕಿಂತ ಹೆಚ್ಚು ಜನ ಬಡವರಿಗೆ ಬಿಪಿಎಲ್ ಕಾರ್ಡ್ ವಿಧವಾ ವೇತನ, ವೃದ್ದರಿಗೆ ಮಾಷಾಸನ, ಅಂಗವಿಕಲರಿಗೆ ತ್ರಿಚಕ್ರ ವಾಹನ ಅಂಗವಿಕಲರಿಗೆ ಮಾಷಸನ ಹೆಚ್ಚಳಕ್ಕೆ ಸರ್ಕಾರದ ಮೇಲೆ ಒತ್ತಡ ನಿರಂತರ ಹೋರಾಟ, ಧರಣಿ ಸತ್ಯಗ್ರಹ ಮುಂತಾದ ಹೋರಾಟಗಳಿಂದ ನೊಂದವರಿಗೆ ಪರಿಹಾರ ವದಗಿಸಿಕೊಡುವ ಪ್ರಾಮಾಣಿಕ ಪ್ರಯತ್ನದಲ್ಲಿ ತೊಡಗಿಸಿಕೊಂಡವರು ವಿರೇಶರೆಡ್ಡಿ. ತದನಂತರ ಹುಮನಾಬಾದ ತಾಲೂಕು ಜೈ ಕರ್ನಾಟಕ ರಕ್ಷಣಾ ವೇದಿಕೆ ಅಧ್ಯಕ್ಷರಾಗಿ ಕಳಪೆ ಡಾಂಬಿಕರಣ ರಸ್ತೆ ನಿರ್ಮಾಣ ವಿರೋಧಿಸಿ ಹೋರಾಟ,ಬೇಕಾ ಬಿಟ್ಟಿ ಶಾಲೆ ಶುಲ್ಕವನ್ನು ವಸೂಲು ಮಾಡುತ್ತಿರುವ ಖಾಸಗಿ ಶಿಕ್ಷಣ ಸಂಸ್ಥೆಗಳ ವಿರುದ್ಧ ಹೋರಾಟ, ಯಿಂಡಷ್ಟ್ರೀಯಲಗಳು ಹೊರಸೂಸುವ ಹೊಗೆ ಯಿಂದ ಪರಿಸರ ಮಾಲಿನ್ಯ ಪರಿಣಾಮ ಜನರು ಪರದಾಡುವದನ್ನು ಕಂಡು ಹೋರಾಟ, ಅಂಗವಿಕಲರಿಗೆ ಉದ್ಯೋಗದಲ್ಲಿ ಮೀಸಲಾತಿ ಒಂದೇ ಎರಡೇ ಹೀಗೆ ಮುಂಚೂಣಿಯಲ್ಲಿ ನಿಂತು ಅನೇಕ ಹೊರಾಟಗಳನ್ನು ಸಾಕಾರಗೋಳಸಿದವರು ಶ್ರೀ ವಿರೇಶ ರೆಡ್ಡಿಯವರು.
ಸದ್ಯ ಕರ್ನಾಟಕ ರಕ್ಷಣಾ ವೇದಿಕೆ ರಾಜ್ಯಾಧ್ಯಕ್ಷರಾದ ಟಿ ಎ ನಾರಾಯಣಗೌಡರ ಸಂಘಟನೆಯಲ್ಲಿ ಹುಮ್ನಾಬಾದ ತಾಲೂಕಿನ ಅಧ್ಯಕ್ಷರಾಗಿ ಸೇವೆ ಸಲ್ಲಿಸುತ್ತಿರುವ ಇವರು ರಾಜಕೀಯವಾಗಿ ಕಾಂಗ್ರೆಸ್ ಪಕ್ಷದ ಮುಖಂಡರಾಗಿಯೂ ಕೂಡ ಸೇವೆ ಸಲ್ಲಿಸುತ್ತಿದ್ದಾರೆ.

*ಪ್ರಶಸ್ತಿ ಪುರಸ್ಕಾರ*

ಕನ್ನಡ ರಾಜ್ಯೋತ್ಸವದ ನಿಮಿತ್ಯ ನಿರಂತರ ಕಾರ್ಯಕ್ರಮ ಮಾಡುವ ಮೂಲಕ ಅನೇಕ ಮಹನೀಯರನ್ನು ವೇದಿಕೆಗೆ ಕರೆಯಿಸಿ ಸಾಧಕರಿಗೆ, ಸನ್ಮಾನ ಮಾಡುವ ಮೂಲಕ ಕನ್ನಡದ ಹಿರಿಮೆ ಗರಿಮೆಯನ್ನು ಮೆರೆದಿದ್ದಾರೆ.
ಅದೇ ರೀತಿ ಮೊಟ್ಟಮೊದಲಿಗೆ ಹಳ್ಳಿಖೇಡ ಗ್ರಾಮದಲ್ಲಿ ಕನ್ನಡ ರಾಜ್ಯೋತ್ಸವ ನಿಮಿತ್ಯ ಭವ್ಯ ಮೆರವಣಿಗೆ ಮತ್ತು ವೇದಿಕೆ ಕಾರ್ಯಕ್ರಮ ಮಾಡಿರುವುದು ಒಂದು ಐತಿಹಾಸಿಕ ದಾಖಲೆ ಅನ್ನಬಹುದು.
ಇವರ ಅವಿರತ ಸಮಾಜ ಸೇವೆ ಮತ್ತು ನಾಡು ನುಡಿಗಾಗಿ ದುಡಿಯುತ್ತಿರುವದನ್ನು ಮನಗಂಡು ಕೇತಕಿ ಸಂಗಮೇಶ್ವರ ಶಿಕ್ಷಣ ಸಂಸ್ಥೆ ಮತ್ತು ಹಂಣ್ಣ್ಮು ಪಾಜಿ ಗೆಳೆಯರ ಬಳಗದವರು ರಾಜ್ಯಮಟ್ಟದ ಕನ್ನಡ ಸೇವಾರತ್ನ ಪ್ರಶಸ್ತಿ ನೀಡಿ ಗೌರವಿಸಿದ್ದಾರೆ, ಹಾಗೆಯೇ ಅನೇಕ ಕನ್ನಡ ಪರ ಸಂಘಟನೆಗಳ ಗೌರವ ಪುರಸ್ಕಾರಕ್ಕೆ ವೀರೇಶರೆಡ್ಡಿಯವರು ಪಾತ್ರರಾಗಿದ್ದು, ಒಂದು ರಾಜಕೀಯ ಮುಖಂಡರಾಗಿದ್ದರೂ ಕೂಡ ಪಕ್ಷಾತೀತವಾಗಿ ಎಲ್ಲರನ್ನು ಒಪ್ಪಿಕೊಂಡು ಅಪ್ಪಿಕೊಂಡ ಇವರು ಇಡೀ ಹುಮನಾಬಾದ ತಾಲೂಕಿನ ಆದಿಯಾಗಿ ದೊಡ್ಡ ಗೆಳೆಯರ ಬಳಗವನ್ನೇ ಹೊಂದಿರುವುದು ಇವರ ನಾಡು, ನುಡಿ, ಸಮಾಜ ಸೇವೆಗೆ ಹಿಡಿದ ಕೈಗನ್ನಡಿ. ಇವರ ಸೇವೆ ಹೀಗೆ ಮುಂದುವರಿಯಲಿ ಇಂತಹ ಯುವಕರು ಸಮಾಜಕ್ಕೆ ಮಾದರಿಯಾಗಲೆಂದು ಹಾರೈಸುವೆ.

ಓಂಕಾರ ಪಾಟೀಲ
ಕಾರ್ಯದರ್ಶಿ:-ಜಿಲ್ಲಾ ಮಕ್ಕಳ ಸಾಹಿತ್ಯ ಪರಿಷತ್ ಬೀದರ.

error: Content is protected !!