ಕಾಳಗಿ ಯಲ್ಲಿ ಬೆಳೆದ ಸಾಗವಾನಿ ಮರಗಳನ್ನ ಕದ್ದ ಖದಿಮರು

ಕಾಳಗಿ : ಕಾಳಗಿ ಪಟ್ಟಣದ ಸರ್ವೇ ನಂ.16 ರಲ್ಲಿ ಬೆಳೆದಿದ್ದ ಸಾಗುವಾನಿ ಗಿಡಗಳನ್ನು ಬುಧವಾರರಾತ್ರಿ ಕಳ್ಳರು ಕಡಿದು ಸಾಗಿಸಿದ್ದಾರೆ.

ಭಾರತೀಯ ಕಿಸಾನ ಸಂಘದ ಅಧ್ಯಕ್ಷ ಭೀಮರಾಯ ಮಲಘಾಣ ಅವರಿಗೆ ಸೇರಿದ ಜಮೀನಿನಲ್ಲಿ ಸಾವಿರ ರೂಪಾಯಿ ಬೆಲೆಬಾಳುವ ಐದಾರು ವರ್ಷ ಪ್ರಾಯದ 13 ಸಾಗುವಾನಿ ಮರಗಳನ್ನು ರಾತ್ರೋರಾತ್ರಿ ಕಳವು ಮಾಡಿರುವ ಘಟನೆ ನಡೆದಿದೆ.

ಸಾವಿರಾರು ರೂಪಾಯಿ ಮೌಲ್ಯದ ಸಾಗುವಾನಿ ಮರಗಳನ್ನು ಕಡಿದುಕೊಂಡು ಹೋಗಿರುವುದರಿಂದ ಈಗಾಗಲೇ ತುಂಬಾ ಕಷ್ಟದಲ್ಲಿರುವ ರೈತ ತೊಗರಿ ಇನ್ನಿತರ ಬೆಳೆಗೆ ಬೆಂಬಲ ಬೆಲೆ ಇಲ್ಲದೆ ಬಳಲುತ್ತಿರುವ ರೈತನಿಗೆ ಗಾಯದ ಮೇಲೆ ಬರೆಯಳದಂತಾಗಿದೆ. ತಾಲೂಕಿನ ಸಂಬಂಧಪಟ್ಟ ಅಧಿಕಾರಿಗಳ ಕೂಡಲೇ ರೈತನ ಹೊಲಕ್ಕೆ ಹೋಗಿ ಪರಿಶೀಲನೆ ಮಾಡಿ ಸರ್ಕಾರದಿಂದ ರೈತನಿಗೆ ಸೂಕ್ತ ಪರಿಹಾರ ಕೊಡಿಸಬೇಕು.ಮತ್ತು ಇನ್ನುಳಿದ ಮರಗಳಿಗೆ ರಕ್ಷಣೆ ನೀಡಬೇಕು. ಮತ್ತು ಅಂತಹ ಕಳ್ಳರಿಗೆ 24 ತಾಸಿನಲ್ಲಿ ಹಿಡಿದು ಶಿಕ್ಷೆ ಕೊಡಬೇಕು ಎಂದು ರೈತ ಸೇನೆ ಹಾಗೂ ರೈತ ಸಂಘ ತಾಲೂಕ ಅಧ್ಯಕ್ಷ ವೀರಣ್ಣ ಗಂಗಾಣಿ ಈ ಪತ್ರಿಕೆ ಮೂಲಕ ಆಗ್ರಹಿಸುತ್ತಾರೆ.

ವರದಿ : ರಮೇಶ್ ಎಸ್ ಕುಡಹಳ್ಳಿ

error: Content is protected !!