ಚಿತ್ತಾಪುರ: ಪಟ್ಟಣದಲ್ಲಿ ನ. ೧ ರಂದು ಕರ್ನಾಟಕ ರಾಜ್ಯೋತ್ಸವ ಕಾರ್ಯಕ್ರಮ ಅದ್ದೂರಿಯಾಗಿ ವಿಜೃಂಬಣೆಯಿಂದ ಆಚರಿಸೋಣ ಎಂದು ತಹಸೀಲ್ದಾರ್ ನಾಗಯ್ಯ ಹೀರೆಮಠ ಹೇಳಿದರು.
ಪಟ್ಟಣದ ತಾಲೂಕು ಪಂಚಾಯಿತಿ ಸಭಾಂಗಣದಲ್ಲಿ ಕರ್ನಾಟಕ ರಾಜ್ಯೋತ್ಸವ ಕಾರ್ಯಕ್ರಮ ನಿಮಿತ್ತ ಮಂಗಳವಾರ ಹಮ್ಮಿಕೊಂಡ ಪೂರ್ವಭಾವಿ ಸಭೆಯ ಅಧ್ಯಕ್ಷತೆವಹಿಸಿ ಮಾತನಾಡಿದ ಅವರು, ತಾಲೂಕಿನ ಎಲ್ಲ ಸರ್ಕಾರಿ ಕಚೇರಿ, ಗ್ರಾಪಂ ಕಚೇರಿಗಳಲ್ಲಿ ಹಾಗೂ ಅಂಗನವಾಡಿ ಕೇಂದ್ರಗಳಲ್ಲಿ ಕಡ್ಡಾಯವಾಗಿ ನ.೧ ರಂದು ಬೆಳಗ್ಗೆ ೮ ಗಂಟೆ ಒಳಗೆ ಧ್ವಜಾರೋಹಣ ನೇರವೇರಿಸಿ ಕರ್ನಾಟಕ ರಾಜ್ಯೋತ್ಸವ ಆಚರಿಸಬೇಕು. ಬೆಳಗ್ಗೆ ೮.೩೦ ಗಂಟೆಗೆ ತಹಸೀಲ್ ಕಚೇರಿಯಲ್ಲಿ ಧ್ವಜಾರೋಹಣ ಮಾಡಿ, ಭುವನೇಶ್ವರಿ ದೇವಿಯ ಭಾವಚಿತ್ರದ ಮೆರವಣಿಗೆಯು ಪಟ್ಟಣದ ಪ್ರಮುಖ ಬೀದಿಗಳ ಮೂಲಕ ಸಂಚರಿಸಿ, ಭುವನೇಶ್ವರಿ ಚೌಕ್ ಬಳಿ ದ್ವಜಾರೋಹಣ ನೇರವೇರಿಸಿ ತಹಸೀಲ್ ಕಚೇರಿಗೆ ತಲುಪಿ ಸಮಾರಂಭ ಹಾಗೂ ಸಾಂಸ್ಕೃತೀಕ ಕಾರ್ಯಕ್ರಮ ಮಾಡಲಾಗುವುದು. ತಾಲೂಕಿನಲ್ಲಿ ಕನ್ನಡದ ಬಗ್ಗೆ ಆಸಕ್ತಿಯಿರುವ ಹಾಗೂ ಹಲವು ಕ್ಷೇತ್ರಗಳಲ್ಲಿ ಸಾಧನೆ ಗೈದಿರುವರನ್ನು ಗುರುತಿಸಿ ಸನ್ಮಾನಿಸಲಾಗುವುದು. ಭಾಷಣ, ಪ್ರಭಂದ ಸ್ಪರ್ಧೇಯಲ್ಲಿ ವಿಜೇತರಾದ ಮಕ್ಕಳಿಗೆ ಪ್ರಮಾಣ ಪತ್ರ ನೀಡಿ ಗೌರವಿಸಲಾಗುವುದು. ಶಾಲಾ ವಿದ್ಯಾರ್ಥಿಗಳಿಂದ ಸಂಸ್ಕೃತಿಕ ಕಾರ್ಯಕ್ರಮ ನಡೆಸಲಾಗುವದು. ತಾಲೂಕಿನ ಅಧಿಕಾರಿಗಳು, ಸಿಬ್ಬಂದಿಗಳು, ಕನ್ನಡ ಪರ ಸಂಘಟನೆಗಳು ಹಾಗೂ ಸಾರ್ವಜನಿಕರು ಭಾಗವಹಿಸಬೇಕೆಂದು ಹೇಳಿದರು.
ಪಟ್ಟಣದ ಎಲ್ಲ ರಸ್ತೆಗಳಲ್ಲಿ ಸ್ವಚ್ಛತೆ ಕಾರ್ಯ ಕೈಗೊಳ್ಳಬೇಕೆಂದು ಪುರಸಭೆಗೆ ಸೂಚಿಸಿದರು. ಎಲ್ಲ ಎಲಾಖೆಗಳ ಕಟ್ಟಡಗಳ ಮೇಲೆ ವೃತ್ತದಲ್ಲಿ ದೀಪಾಲಂಕಾರ ಮಾಡಬೇಕು. ಮೆರವಣಿಗೆಯಲ್ಲಿ ಸ್ತಬ್ದ ಚಿತ್ರಗಳೊಂದಿಗೆ ಭಾಗವಹಿಸಬೇಕೆಂದು ಅಧಿಕಾರಿಗಳಿಗೆ ಸೂಚಿಸಿದರು.
ಸಿಪಿಐ ಚಂದ್ರಶೇಖರ ತಿಗಡಿ ಮಾತನಾಡಿ, ರಾಜ್ಯೋತ್ಸವ ಕಾರ್ಯಕ್ರಮದಲ್ಲಿ ಕೇವಲ ಅಧಿಕಾರಿಗಳ ಭಾಗವಹಿಸುವ ಜತೆಗೆ ಪಟ್ಟಣದ ವ್ಯಾಪಾರಸ್ಥರು ಹಾಗೂ ಸಾರ್ವಜನಿಕರು ಭಾಗವಹಿಸಬೇಕೆಂದರು.
ಕಸಾಪ ತಾಲೂಕು ಸಂಘ ಸಂಸ್ಥೆ ಪ್ರತಿನಿಧಿ ಮಹ್ಮದ್ ಇಬ್ರಾಹಿಂ ಮಾತನಾಡಿ, ತಾಲೂಕು ಮಟ್ಟದ ಯಾವ ಅಧಿಕಾರಿಗಳು, ಸಿಬ್ಬಂದಿಗಳು ಗೈರಾಗಬಾರದು. ಎಲ್ಲರೂ ಸೇರಿ ಕೈಜೋಡಿಸಿದಾಗ ಮಾತ್ರ ರಾಜ್ಯೋತ್ಸವ ಯಶಸ್ವಿ ಆಗಲಿದೆ ಎಂದು ಹೇಳಿದರು.
ತಾಲೂಕು ಕನ್ನಡ ಸೇನೆ ಅಧ್ಯಕ್ಷ ರವೀಂದ್ರ ಇವಣಿ, ತಾಲೂಕು ಕಸಾಪ ಮಾಜಿ ಅಧ್ಯಕ್ಷ ಕಾಶಿನಾಥ ಗುತ್ತೇದಾರ, ಕಸಾಪ ತಾಲೂಕು ಗೌರವ ಕಾರ್ಯದರ್ಶಿ ಜಗದೇವ ದಿಗ್ಗಾಂವಕರ್, ಚಂದ್ರಶೇಖರ ಬಳ್ಳಾ, ಕರವೇ ತಾಲೂಕು ಅಧ್ಯಕ್ಷ ನರಹರಿ ಕುಲಕರ್ಣಿ, ಪ್ರಲ್ಲಾದ ವಿಶ್ವಕರ್ಮ ಮಾತನಾಡಿ, ಪಟ್ಟಣದ ಎಲ್ಲ ಅಂಗಡಿಗಳ ನಾಮಫಲಕ ಕನ್ನಡದಲ್ಲಿ ಇರುವಂತೆ ಮಾಡಬೇಕು, ಭುವನೇಶ್ವರಿ ವೃತ್ತ ಅಭಿವೃದ್ಧಿಗೊಳಿಸಿ ಆಲ್ಲಿ ತಾಯಿ ಭುವನೇಶ್ವರಿ ಪ್ರತಿಮೆ ಸ್ಥಾಪಿಸಬೇಕು. ಪಟ್ಟಣದ ಎಲ್ಲ ಅಂಗಡಿಗಳ ಮೇಲೆ ಕನ್ನಡ ಧ್ವಜ ಅಳವಡಿಸುವಂತೆ ಸೂಚಿಸಬೇಕು, ಮೆರವಣಿಗೆಯಲ್ಲಿ ಸ್ತಬ್ಧ ಚಿತ್ರಗಳ ವ್ಯವಸ್ಥೆ ಮಾಡಬೇಕು. ಮೆರವಣಿಗೆ ಅಚ್ಚುಕಟ್ಟಾಗಿ ನಡೆಯಬೇಕು. ಇಲ್ಲಿನ ಸಿಮೆಂಟ್ ಕಂಪನಿಗಳಲ್ಲಿ ರಾಜ್ಯೋತ್ಸವ ಆಚರಣೆ ಮಾಡಲು ತಾಕೀತು ಮಾಡಬೇಕೆಂದು ಹೇಳಿದರು.
ತಾಲೂಕು ಕಸಾಪ ಅಧ್ಯಕ್ಷ ವೀರೇಂದ್ರಕುಮಾರ ಕೊಲ್ಲೂರ, ಕೋಶಾಧ್ಯಕ್ಷ ವೀರಣ್ಣ ಸುಲ್ತಾನಪುರ ಮಾತನಾಡಿದರು.
ಗ್ರೇಡ್ -೨ ತಹಸೀಲ್ದಾರ್ ರಾಜಕುಮಾರ ಮರತೂರಕರ್, ತಾಲೂಕು ಕಸಾಪ ಪದಾಧಿಕಾರಿಗಳಾದ ಚಂದ್ರಶೇಖರ ಉಟಗೂರ, ವೆಂಕಟೇಶ ಬಳಿಚಕ್ರ, ಲಕ್ಷ್ಮೀಕಾಂತ ತಾಂಡೂರಕರ್, ತಾಲೂಕು ಅಧಿಕಾರಿಗಳಾದ ಡಾ. ಶಂಕರ ಕಣ್ಣಿ, ಆರತಿ ತುಪ್ಪದ್, ಕರಣಕುಮಾರ, ಸವಿತಾ ಗೋಣಿ, ಚೇತನ್ ಗುರಿಕಾರ, ಅಮೃತ್ ಕ್ಷೀರಸಾಗರ, ಬಾಲಕೃಷ್ಣ, ಡಾ.ಸೈಯದ್ ರಜೀವುಲ್ಲಾ, ಶಿವಶರಣಪ್ಪ ಮಂಠಾಳೆ, ಬಸವರಾಜ ಜೆಇ ವಾಡಿ, ಲೋಹಿತ್ ಕಟ್ಟಿಮನಿ, ಶರಣು ದಂಡೋತಿ ಸೇರಿದಂತೆ ಇತರರಿದ್ದರು.
ವರದಿ : ಸಂತೋಷ ಕುಮಾರ್ ಕಟ್ಟಿಮನಿ