ವಿಜಯಪುರ: ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ ವಿಜಯಪುರ ವತಿಯಿಂದ ಡಿಸೆಂಬರ್ 6 ರಂದು ಡಾ// ಬಿ. ಆರ್. ಅಂಬೇಡ್ಕರ್ ಅವರ 68ನೇ ಮಹಾಪರಿನಿರ್ವಾಣ ದಿನದ ಅಂಗವಾಗಿ, ಸ್ವಯಂ ಪ್ರೇರಿತ ರಕ್ತದಾನ ಶಿಬಿರವನ್ನು ನಗರದ ಎಬಿವಿಪಿ ಪ್ರೇರಣಾ ಕಾರ್ಯಾಲಯದಲ್ಲಿ ಹಮ್ಮಿಕೊಂಡಿದರು ಹಲವಾರು ವಿದ್ಯಾರ್ಥಿಗಳು ಕಾರ್ಯಕರ್ತರು ಸ್ವಯಂ ಪ್ರೇರಿತ ರಕ್ತದಾನವನ್ನು ಮಾಡಿದರು.
ಈ ಸಂದರ್ಭದಲ್ಲಿ ಎಬಿವಿಪಿ ವಿಭಾಗ ಸಹ ಪ್ರಮುಖರಾದ ಡಾ// ಅಮಿತಕುಮಾರ ಬಿರಾದಾರ ಅವರು ಮಾತನಾಡಿ, ಪ್ರತಿ ವರ್ಷದಂತೆ ಈ ವರ್ಷವೂ ಅಂಬೇಡ್ಕರ್ ಅವರ ಮಹಾಪರಿನಿರ್ವಾಣ ದಿನದ ಅಂಗವಾಗಿ ಅನೇಕ ಕಾರ್ಯಕ್ರಮಗಳನ್ನು ವಿದ್ಯಾರ್ಥಿ ಪರಿಷತ್ ಮಾಡಿಕೊಂಡು ಬರುತ್ತಿದೆ. ಆಧುನಿಕ ಭಾರತ ನಿರ್ಮಾತೃ ಹಾಗೂ ಸಂವಿಧಾನ ಶಿಲ್ಪಿ ಡಾ//ಬಾಬಾ ಸಾಹೇಬ್ ಅಂಬೇಡ್ಕರ್ ಅವರ ತ್ಯಾಗ ಮತ್ತು ಸಮಾಜ ಸೇವೆಂದು ಮರೆಯಲು ಸಾಧ್ಯವಿಲ್ಲ. ಅಂಬೇಡ್ಕರ್ ಅವರು ಭಾರತದ ಆರ್ಥಿಕ ಪ್ರಗತಿಗೆ ಮಹತ್ವ ಪೂರ್ಣ ಕೊಡುಗೆಯನ್ನು ನೀಡಿದ ಮಹಾನ ವ್ಯಕ್ತಿ. ಆರ್ಥಿಕ ಸಮಾನತೆ ಮತ್ತು ನ್ಯಾಯವನ್ನು ಸ್ಥಾಪಿಸಲು ತತ್ವಗಳನ್ನು ರೂಪಿಸಿ ದಲಿತರ ಹಾಗೂ ಹಿಂದುಳಿದ ವರ್ಗಗಳ ಆರ್ಥಿಕ ಮತ್ತು ಸಾಮಾಜಿಕ ಹಕ್ಕುಗಳನ್ನು ರಕ್ಷಿಸಲು ಹಲವು ಕ್ರಮಗಳು ಜಾರಿಗೆ ತಂದರು. ಅಂತಹ ಮಹಾನ್ ವ್ಯಕ್ತಿಗಳ ಮಹಾಪರಿನಿರ್ವಾಣ ದಿನದ ಅಂಗವಾಗಿ ಇಂದು ಸ್ವಯಂ ಪ್ರೇರಿತ ರಕ್ತದಾನ ಶಿಬಿರವನ್ನು ಎಬಿವಿಪಿ ಹಮ್ಮಿಕೊಂಡಿದೆ ಎಂದು ಮಾತನಾಡಿದರು.
ನಂತರ ನಗರ ಅಧ್ಯಕ್ಷರಾದ ಸುಮಾ ಬೋಳರೆಡ್ಡಿ ಮೇಡಂ ಅವರು ಮಾತನಾಡಿದರು. ನಂತರ ರಕ್ತದಾನ ಮಾಡಿದ ಎಲ್ಲ ವಿದ್ಯಾರ್ಥಿಗಳಿಗೆ ಹಾಗೂ ರಕ್ತದಾನಿಗಳಿಗೆ ಅವರಿಗೇ ಪ್ರಸಂಶನ ಪತ್ರಗಳನ್ನು ನೀಡಿದರು.
ಈ ಸಂದರ್ಭದಲ್ಲಿ ಜಿಲ್ಲಾ ಪ್ರಮುಖರಾದ ಎಮ್ ಎಸ್ ಬಿರಾದಾರ ಸರ್,ವಿಭಾಗ ಸಂಘಟನಾ ಕಾರ್ಯದರ್ಶಿ ಹರ್ಷಾ ನಾಯಕ, ಮಂಜುನಾಥ ಹಳ್ಳಿ, ಮಲ್ಲಿಕಾರ್ಜುನ ಮಾಳಿ, ಪ್ರವೀಣ ಬಿರಾದಾರ, ಸಂದೀಪ ಅರಳಗುಂಡಿ,ಬಾಲಾಜಿ ಬಿರಾದರ, ಅಭಿಷೇಕ್ ಬಿರಾದಾರ, ದುಂಡಪ್ಪ, ರಮೇಶ,ಐಶ್ವರ್ಯ, ಆರತಿ, ಶಿಲ್ಪಾ, ದಾನಮ್ಮ,ಚೇತನ್ ಹಾಗೂ ಇನ್ನು ಅನೇಕ ಕಾರ್ಯಕರ್ತರು ಹಾಗೂ ಹಲವಾರು ವಿದ್ಯಾರ್ಥಿಗಳು ಉಪಸ್ಥಿತರಿದ್ದರು.
ವರದಿ : ದೌಲಪ್ಪ ಮನಗೋಳಿ