ವ್ಯಕ್ತಿಯೊಬ್ಬರನ್ನು ಲಾಂಗ್ ನಿಂದ ತಲೆಗೆ ಹಾಕಿ ಕೊಚ್ಚಿ ಕೊಲೆ ಮಾಡಿರುವ ಘಟನೆ ಚಿಂತಾಮಣಿ ನಗರದ ಡೆಕ್ಕನ್ ಆಸ್ಪತ್ರೆ ಹಿಂಭಾಗದ ಆಶ್ವಿನಿ ಬಡಾವಣೆಯಲ್ಲಿ ಗುರುವಾರ ರಾತ್ರಿ 9-30 ರ ಸಮಯದಲ್ಲಿ ನಡೆದಿದ್ದೆ.
ಕೊಲೆಯಾದ ವ್ಯಕ್ತಿಯನ್ನು ಚಿಂತಾಮಣಿ ತಾಲೂಕು ನಾಗದೇನಹಳ್ಖಿ ಗ್ರಾಮದ ನಿವಾಸಿ ಹಾಲಿ ಆಶ್ವಿನಿ ಬಡಾವಣೆಯಲ್ಲಿ ವಾಸವಾಗಿರುವ ಟಿಪ್ಪರ್ ಮತ್ತು ಜೆಸಿಬಿ ಮಾಲಿಕ 48 ವರ್ಷದ ರಾಮಸ್ವಾಮಿ ಉರುಪ್ ಜೆಸಿಬಿರಾಮಸ್ವಾಮಿರವರಾಗಿದ್ದಾರೆ.
ಗುರುವಾರ ರಾತ್ರಿ 9-30 ರ ಸಮಯದಲ್ಲಿ ಸ್ಕೂಟಿಯಲ್ಲಿ ಮನೆಗೆ ತೇರಳುತ್ತಿದ್ದ ವೇಳೆ ಯಾರೋ ಅಪರಿಚಿತ ವ್ಯಕ್ತಿಯೊಬ್ಬ ಜೆಸಿಬಿ ರಾಮಸ್ವಾಮಿರವರನ್ನು ಅಡ್ಡಗಟ್ಟಿ ಲಾಂಗ್ ನಿಂದ ಕೊಚ್ಚಿ ಕೊಲೆ ಮಾಡಿ ಪರಾರಿಯಾಗಿದ್ದಾರೆ ಎಂದು ಬಲ ಮೂಲಗಳಿಂದ ತಿಳಿದು ಬಂದಿದ್ದು,
ಇನ್ನೂ ವಿಷಯ ತಿಳಿದ ಕೂಡಲೇ ಸ್ಥಳಕ್ಕೆ ಚಿಕ್ಕಬಳ್ಳಾಪುರ ಜಿಲ್ಲಾ ಪೊಲೀಸ್ ವರಿಷ್ಟಾಧಿಕಾರಿ ಕುಶಾಲ್ ಚೌಕ್ಸಿ, ಎ.ಎಸ್ಪಿ ಇಮಾಮ್ ಖಾಸಿಂ ಸಾಬ್, ಡಿವೈಎಸ್ಪಿ ಮುರಳಿಧರ್ ಹಾಗೂ ಚಿಂತಾಮಣಿ ನಗರಠಾಣೆಯ ಪೋಲಿಸರು ಸ್ಥಳಕ್ಕೆ ಬೇಟಿ ನೀಡಿ, ಕೊಲೆಗಾರನ ಪತ್ತೆಗಾಗಿ ಬಲೆ ಬಿಸಿದ್ದಾರೆ.
ವರದಿ : ಸುನಿಲ್ ಎಂ