ಚಿಕ್ಕೋಡಿ : ಆಯುರ್ವೇದಿಕ್ ನಾಟಿ ಔಷಧ ಮಾರಾಟ ಮಾಡುತ್ತಿದ್ದ ವಾಹನದಲ್ಲಿ ಗ್ಯಾಸ್ ಸ್ಫೋಟಗೊಂಡು ಔಷಧಿ ಸಮೇತ ವಾಹನ ಸುಟ್ಟು ಕರಕಲಾದ ಘಟನೆ ಚಿಕ್ಕೋಡಿ ಪಟ್ಟಣದ ಬಾಣಂತಿಕೋಡಿ ರಸ್ತೆಯಲ್ಲಿ ನಡೆದಿದೆ.
ಇದರ ಬಗ್ಗೆ ಹೆಚ್ಚಿನ ಮಾಹಿತಿ ಏನೆಂದರೆ, ಕೊಲ್ಹಾಪುರ ಜಿಲ್ಲೆಯ ಶಿರೋಳದ ಅಜಯ್ ಜ್ಞಾನಸಿಂಗ್ ಚಿಕ್ಕೋಡಿಗೆ ಆಯುರ್ವೇದ ಗಿಡಮೂಲಿಕೆ ಔಷಧ ಮಾರಾಟ ಮಾಡಲು ಬಂದಿದ್ದರು.
ಚಿಕ್ಕೋಡಿ ನಗರದ ಹೊರಗೆ ಬಾಣಂತಿಕೋಡಿ ರಸ್ತೆಯಲ್ಲಿ ಪಕ್ಕದಲ್ಲಿ ಗೂಡ್ಸ್ ವಾಹನ ನಿಲ್ಲಿಸಿ ಪಕ್ಕದಲ್ಲೇ ಟೆಂಟ್ ಹಾಕಿಕೊಂಡು ವಾಸವಾಗಿದ್ದರು.
ಈ ವೇಳೆ ಗುಡಸ ವಾಹನದಲ್ಲಿ ಆಕಸಿಮಿಕ ಬೆಂಕಿ ಆಗಿರುವುದರಿಂದ
ಅಡುಗೆಗಾಗಿ ಇಟ್ಟಿದ್ದ ಗ್ಯಾಸ್ ಸಿಲಿಂಡರ್ ಸ್ಫೋಟಗೊಂಡ ಪರಿಣಾಮ ವಾಹನ ಸಂಪೂರ್ಣ ಸುಟ್ಟು ಕರಕಲಾಗಿದ್ದು, ಗಿಡಮೂಲಿಕೆ ಔಷಧಿಗಳೂ ಸಂಪೂರ್ಣ ಸುಟ್ಟು ಕರಕಲಾಗಿದೆ.
ಈ ಸಮಯದಲ್ಲಿ ಎಲ್ಲರೂ ಅಕ್ಕಪಕ್ಕದ ಟೆಂಟ್‌ನಲ್ಲಿದ್ದರು ಹೀಗಾಗಿ ಯಾರಿಗೂ ಗಾಯ ಅಥವಾ ಜೀವ ಹಾನಿಯಾಗಿಲ್ಲ. ಘಟನೆ ಕುರಿತು ಮಾಹಿತಿ ತಿಳಿದ ನಂತರ ಚಿಕ್ಕೋಡಿ ಅಗ್ನಿಶಾಮಕ ದಳದ ಸಿಬ್ಬಂದಿ ಸ್ಥಳಕ್ಕೆ ಧಾವಿಸಿ ಬೆಂಕಿಯನ್ನು ನಂದಿಸಿದ್ದಾರೆ.
ಈ ಘಟನೆಯಿಂದ ಸ್ಥಳದಲ್ಲಿ ಭಯದ ವಾತಾವರಣ ನಿರ್ಮಾಣವಾಗಿತ್ತು.
ಬೆಂಕಿ ನಂದಿಸುವ ಕಾರ್ಯ ಸಹಾಯಕ ಅಗ್ನಿಶಾಮಕ ಅಧಿಕಾರಿ ಎಸ್. ಏನ್ ನಾಗನೂರೆ ಅಗ್ನಿಶಮಕ ಸಿಬ್ಬಂದಿಯಾವರಾದ ಟಿ. ಬಿ. ಪರಿಟ್
ಮಲ್ಲಿಕಾರ್ಜುನ ಕುಂಬಾರ ಅಕ್ಷಯ ಅರಗೆ, ಈರಯ್ಯ ಹಿರೇಮಠ, ಅಣ್ಣಾಸಾಬ್ ಜೈನಪುರ್, ವಿನೋದ ನಿಕಮ ಉಪಸ್ಥಿತರಿದ್ದರು.