ತಿಲಕವಾಡಿ ಯಲ್ಲಿ ಹೀರಾಯಿನ್ ಡ್ರಗ್ಸ ಜಾಲ ಪತ್ತೆ ಐವರ ಬಂಧನ

ತಿಲಕವಾಡಿ : ಬೆಳಗಾವಿ ಹಿರಾಯಿನ್ ಡ್ರಗ್ಸ ಮಾರಾಟ ಪತ್ತೆ ಐವರ ಬಂಧನ, ೫ ಗ್ರಾಂ ೫೦ ಮಿಲಿ ಹಿರಾಯಿನ್ ವಶಪಡಿಸಿಕೊಂಡ ತಿಳಕವಾಡಿ ಪೋಲಿಸರು ಬೆಳಗಾವಿ-ಕುಂದಾನಗರಿ

ಬೆಳಗಾವಿಯಲ್ಲಿ ಗಾಂಜಾ, ಪಿನ್ನಿ ಸೇರಿದಂತೆ ಹಲವಾರು ಮಾದಕವಸ್ತುಗಳ ಮಾರಾಟ ಮತ್ತು ಸೇವನೆ ವ್ಯಾಪಕವಾಗಿ ನಡೆಯುತ್ತಿರುವ ಬೆನ್ನಲ್ಲಿಯೇ ಬೆಳಗಾವಿಯಲ್ಲಿ ಈಗ ಹೇರಾಯಿನ್ ಡ್ರಗ್ಸ್ ಮಾರಾಟ ಜಾಲವನ್ನು ಬೆಳಗಾವಿ ಪೋಲೀಸರು ಪತ್ತೆ ಮಾಡಿದ್ದಾರೆ.

 

ಬೆಳಗಾವಿಯಲ್ಲಿ ಗಾಂಜಾ ಸೇರಿದಂತೆ ಇನ್ನಿತರ ಮಾದಕ ವಸ್ತುಗಳ ಮಾರಾಟದ ವಿಚಾರವನ್ನು ಗಂಭೀರವಾಗಿ ಪರಿಗಣಿಸಿರುವ ಬೆಳಗಾವಿ ನಗರ ಪೋಲೀಸ್ ಆಯುಕ್ತ ಮಾರ್ಟಿನ್ ಅವರು ನಗರದಲ್ಲಿ ವಿಶೇಷ ಕಾರ್ಯಾಚರಣೆ ನಡೆಸಿದ್ದಾರೆ.

ಹಲವಾರು ದಿನಗಳಿಂದ ಡ್ರಗ್ಸ್ ಮಾಫಿಯಾ ವಿರುದ್ಧ ಸಮರ ಸಾರಿರುವ ಬೆಳಗಾವಿ ಪೋಲೀಸರು ಇಂದು ಹೇರಾಯಿನ್ ಡ್ರಗ್ಸ್ ಮಾರಾಟದ ಜಾಲವನ್ನು ಪತ್ತೆ ಮಾಡಿರುವ ಬೆಳಗಾವಿಯ ತಿಲಕವಾಡಿ ಠಾಣೆಯ ಪೋಲೀಸರು 5 ಗ್ರಾಂ 50 ಮೀ ಹೇರಾಯಿನ್ ಪತ್ತೆ ಮಾಡಿ,ಇದನ್ನು ಮಾರಾಟ ಮಾಡುತ್ತಿದ್ದ ಐದು ಜನ ಆರೋಪಿಗಳನ್ನು ಬಂಧಿಸಿದ್ದಾರೆ.

ಆರೋಪಿಗಳಾದ,ಪ್ರಫುಲ್ ಗಜಾನನ ಪಾಟೀಲ,ಸುಶಾಂತ ಗೋವೀಂದ್ ಕಂಗ್ರಾಳಕರ್‌,ನಾರಾಯಣ ಬಾಬುರಾವ್‌ ಪಾಟೀಲ,ಸುನೀಲ ಬೈರು ಅಸಲ್ಕರ್, ಸಲ್ಮಾನ್ ಬಬ್ಬ‌ರ್ ಮೊಕಾಶಿ ಇವರನ್ನು ಬಂಧಿಸಲಾಗಿದ್ದು,ಬಂಧಿತ ಐದು ಜನ ಆರೋಪಿಗಳು ಬೆಳಗಾವಿಯ ಅನಗೋಳ ಪ್ರದೇಶದ ನಿವಾಸಿಗಳಾಗಿದ್ದಾರೆ.ಎಸಿಪಿ ಎಚ್ ಶೇಖರಪ್ಪ ನೆತ್ರದ್ವಲ್ಲಿ

ತಿಲಕವಾಡಿ ಠಾಣೆಯ ಇನೆಸ್ಪೆಕ್ಟರ್ ಪರುಶರಾಮ ಪೂಜೇರಿ, ಹಾಗೂ ಪಿಎಸ್ಐ ಸಂತೋಷ ದಳವಾಯಿ,ಹಾಗೂ ಪೊಲಿಸ್ ಸಿಬ್ಬಂದಿಗಳ ನೇತ್ರತ್ವದ ತಂಡ ಕಾರ್ಯಾಚರಣೆ ನಡೆಸಿ ಡ್ರಗ್ಸ್ ಮಾರಾಟ ಜಾಲವನ್ನು ಪತ್ತೆ ಮಾಡುವಲ್ಲಿ ಯಶಸ್ವಿಯಾಗಿದೆ.

 

ವರದಿ : ಸದಾನಂದ