ಚಿಂಚೋಳಿ : ಚಂದಾಪುರ ಪಟ್ಟಣದ ನೂತನ ಎಸ್ ಬಿ ಐ ಬ್ಯಾಂಕ್ ಹತ್ತಿರ ಸಫಾ ಬೈತುಲ ಮಾಲ ತಾಲೂಕು ಘಟಕದ ಅಧ್ಯಕ್ಷ ಹಫೀಜ್ ಇಸ್ಮಾಯಿಲ್ ರವರ ನೇತೃತ್ವದಲ್ಲಿ ಬಿಸಿಲ ಬೇಗೆಗೆ ದಾಹವನ್ನು ತೀರಿಸಿಕೊಳ್ಳಲು ಸಾರ್ವಜನಿಕರಿಗೆ ಅನುಕೂಲಕ್ಕಾಗಿ ತಂಪಾದ ಕೂಡಿಯುವ ನೀರಿನ ಅರವಟಗೆಯನ್ನು ಚಿಂಚೋಳಿ ಸಿ.ಪಿ.ಐ. ಕಪಿಲ ದೇವ ಅವರು ಉದ್ಘಾಟನೆಯನ್ನು ಮಾಡಿದರು.
ಈ ಸಂದರ್ಭದಲ್ಲಿ ಎಸ್ ಬಿ ಐ ಬ್ಯಾಂಕ್ ಮ್ಯಾನೇಜರ, ತಾಲೂಕು ಆರೋಗ್ಯ ಅಧಿಕಾರಿ ಡಾ. ಗಫಾರ , ರಾಜಕೀಯ ಮುಖಂಡರುಗಳಾದ ಕೆ.ಎಂ. ಬಾರಿ, ಅಬ್ದುಲ ಬಾಸಿದ, ಹಣಮಂತ ಪೂಜಾರಿ, ಗೋಪಾಲ ಗಾರಂಪಳ್ಳಿ, ಅಹಮದ್ ಬಾಗವಾನ್, ಖಲೀಲ ಪಟೇಲ, ಇತರರು ಉಪಸ್ಥಿತರಿದ್ದರು.
ವರದಿ : ರಾಜೇಂದ್ರ ಪ್ರಸಾದ್