ಚಿಕೋಡಿ : ಲೋಕೋಪಯೋಗಿ ಸಚಿವರು ಹಾಗೂ ಬೆಳಗಾವಿ ಜಿಲ್ಲಾ ಉಸ್ತುವಾರಿ ಸಚಿವರಾದ ಸನ್ಮಾನ್ಯ ಶ್ರೀ ಸತೀಶ ಅಣ್ಣಾ ಜಾರಕಿಹೊಳಿ ಅವರು ಚಿಕ್ಕೋಡಿ ನಗರದಲ್ಲಿ ಕರ್ನಾಟಕ ರಾಜ್ಯ ಮಾಳಿ – ಮಾಲಗಾರ ಮಹಾಸಭಾ ವತಿಯಿಂದ ಹಮ್ಮಿಕೊಂಡಿದ್ದ ಮಹಾತ್ಮಾ ಜ್ಯೋತಿಬಾ ಫುಲೆಯವರ 198 ಜಯಂತೋತ್ಸವ ಮತ್ತು ಪ್ರಾದೇಶಿಕ ಕಚೇರಿಯ ಉದ್ಘಾಟನಾ ಸಮಾರಂಭದಲ್ಲಿ ಭಾಗವಹಿಸಿ ಮಾತನಾಡಿದರು
ಈ ವೇಳೆ ತುಮಕೂರಿನ ಶಿವಗಂಗೆಯ ಶ್ರೀ ಮಹಾಲಕ್ಷ್ಮೀ ಮಹಾ ಸಂಸ್ಥಾನ ಪೀಠದ ಜಗದ್ಗುರು ಶ್ರೀ ಜ್ಞಾನನಂದಪುರಿ ಮಹಾಸ್ವಾಮಿಜಿ, ಬಬಲೇಶ್ವರ ತಾಲೂಕಿನ ನಾಗರಾಳ ಗ್ರಾಮದ ಪರಮಾನಂದ ಯೋಗಾಶ್ರಮದ ಶ್ರೀ ಸಿದ್ಧಾರೂಢ ಮಠದ ಪೂಜ್ಯ ಶ್ರೀ ಪ್ರೋ ಭ್ಯ. ಜ್ಞಾನೇಶ್ವರ ಮಹಾಸ್ವಾಮಿಗಳು, ನಿಪಣಾಳ ಗ್ರಾಮದ ವಿಶ್ವಲ-ರುಕ್ಷೀಣಿ ಸೇವಾ ಆಶ್ರಮದ ಪೂಜ್ಯ ಶ್ರೀ ಪ್ರಭುಮಹಾರಾಜರು , ಗೋಕಾಕ ತಾಲೂಕಿನ ವಡೇರಟ್ಟಿಯ ಅಂಬಾ ದರ್ಶನ ಪೀಠದ
ಪೂಜ್ಯ ಶ್ರೀ ನಾರಾಯಣ ಶರಣರು, ಕಮತೇನಟ್ಟಿಯ ವೇದಮೂರ್ತಿ ಹನುಮಂತ ಶಾಸ್ತ್ರೀಗಳು (ಹಳ್ಳೂರೆ),ಮಾಜಿ ಶಾಸಕರಾದ ನೇ. ಲ. ನರೇಂದ್ರಬಾಬು, ವಿ.ಪರಿಷತ್ ಸದಸ್ಯ ನಾಗರಾಜ್ ಯಾದವ, ಕೆಪಿಸಿಸಿ ರಾಜ ಪ್ರಧಾನ ಕಾರ್ಯದರ್ಶಿ ಮಹಾವೀರ ಮೋಹಿತೆ ಅವರು ಸೇರಿ ಪ್ರಮುಖರು ಉಪಸ್ಥಿತರಿದ್ದರು.
ವರದಿ : ಸದಾನಂದ ಎಂ