ಇದೇ ತಿಂಗಳು ಏಪ್ರಿಲ್ 30 ರಂದು ವಿಶ್ವ ಗುರು “ಬಸವ ಜಯಂತಿ”ಯನ್ನು ಅದ್ದೂರಿಯಾಗಿ, ಅಥ೯ ಪೂಣ೯ವಾಗಿ ಹಾಗೂ ಸಡಗರ ಸಂಭ್ರಮದಿಂದ ಆಚರಿಸಲು ಇಂದು ಜರುಗಿದ ವಿಜಯಪುರ ದೇವಸ್ಥಾನ ಪ್ರಮುಖರ ಸಭೆಯಲ್ಲಿ ನಿದ೯ರಿಸಲಾಯಿತು.
ಇಂದು ಜ್ಞಾನ ಯೋಗಾಶ್ರಮದಲ್ಲಿ ಪೂಜ್ಯ ಶ್ರೀ ಬಸವಲಿಂಗ ಸ್ವಾಮೀಜಿ ಗಳವರ ನೇತೃತ್ವದಲ್ಲಿ ವಿಜಯಪುರ ನಗರದ ಪ್ರಮುಖ ದೇವಸ್ಥಾನಗಳ ಪದಾಧಿಕಾರಿಗಳ ಹಲವು ಸಂಘ ಸಂಸ್ಥೆಗಳ ಪ್ರಮುಖರು ಸಭೆಯಲ್ಲಿ ಬಾಗವಹಿಸಿ ಮಾತನಾಡಿದರು. ವೀರಶೈವ ಮಹಾಸಭಾದ ಅಧ್ಯಕ್ಷರಾದ ವಿ ಸಿ ನಾಗಠಾಣ ಸರ್,ಶರಣ ಸಾಹಿತ್ಯ ಪರಿಷತ್ತಿನ ಜಂಬುನಾಥ ಕಂಚಾಣಿ, ದಾನಮ್ಮದೇವಿ ದೇವಸ್ಥಾನ ಟ್ರಸ್ಟ್ ಅಧ್ಯಕ್ಷ ಅಪ್ಪುಇಟ್ಟಂಗಿ,ಪಾರೇಖ ನಗರದ ಅಧ್ಯಕ್ಷ ರಾಜು ಹಿರೇಮಠ,ಶ್ರೀ ಅರಕೇರಿ, ರಮೇಶ ಅಂಜೀಖಾನೆ ಮರನೂರ,ರವಿ ಸಿಂಹಾಸನ ಕಾಶೀನಾಥ ಅಣೆಪ್ಪನವರ, ಸಾಲಕ್ಕಿ, ಕುಮಾರಗೌಡ,ಓಂಕಾರ,ಹಾಗೂ ಹಲವು ಸಂಘಗಳ ಸದಸ್ಯರು ಉಪಸ್ತಿತರಿದ್ದರು
ವರದಿ : ಅಜೀಜ ಪಠಾಣ.