ಹುಕ್ಕೇರಿ : ತಾಲೂಕಿನಲ್ಲಿ ಬರುವ ಗ್ರಾಮಗಳಲ್ಲಿ ಬರುವ ಪರಿಶಿಷ್ಟ ಜಾತಿ ಹಾಗೂ ಅಲ್ಫಾಸಂಖ್ಯಾತರ ಬಡ ರೈತರು ಕಳೆದ 20ರಿಂದ 25 ವರ್ಷ್ಗಳಿಂದ ಅಧಿಕೃತವಾಗಿ ಸಾಗುವಳಿ ಮಾಡುತ್ತಾ ತಮ್ಮ ಉಪಜೀವನವನ್ನು ನಡೆಸುತ್ತಾ ಬಂದಿರುತಾರೆ ಅದರ ಸಂಬಂಧಿಸಿದಂತೆ ಸರ್ಕಾರ ಕಾಲ ಕಾಲಕ್ಕೆ ಕರೆದ ಅರ್ಜಿ 51.53. ಹಾಗೂ 57. ಅರ್ಜಿಗಳನ್ನು ಸಲ್ಲಿಸಿರುತ್ತದೆ ಇದಕ್ಕೆ ಸಂಬಂಧಿಸಿದಂತೆ ನಾವು ಹಲವಾರು ಬಾರಿ ತಮ್ಮ ಕಚೇರಿಗೆ ಬಂದು ಮನವಿಗಳನ್ನು ಸಲ್ಲಿಸಿರುತ್ತವೆ. ಅಷ್ಟೇ ಅಲ್ಲದೆ ಜಿಲ್ಲಾಧಿಕಾರಿಗಳು. ಉಪವಿಬಾಗ ಅಧಿಕಾರಿಗಳು ಬೆಳಗಾವಿ ಹಾಗೂ ಸರ್ಕಾರಕ್ಕೆ ಸಹ ಸಾಕಷ್ಟು ಬಾರಿ ಹೋರಾಟ ಮಾಡಿ ಮನವಿ ಸಲ್ಲಿಸಿರುತ್ತೇವೆ ಆದರೆ
ಇಲ್ಲಿಯವರೆಗೆ ಯಾವದೇ ಯಾವ ಬೇಡಿಕೆ ಈಡೇರಿವುದಿಲ್ಲ ಅದಕ್ಕಾಗಿ ಹುಕ್ಕೇರಿ ತಾಲೂಕಿನಲ್ಲಿ ಬರುವ ಹಳ್ಳಿಗಳ ಬಡ ರೈತರು ನಾವು ಯಾವದೇ ಮಧ್ಯ ವರ್ಥಿಗಳಿಲದೇ ನಾವು 20 ರಿಂದ 25 ವರ್ಷಗಳ ವರೆಗೆ ಸಾಗುವಳಿ ಮಾಡುತ್ತಾ ಬಂದಿದ್ದೇವೆ ಅದರಿಂದ ಸಾಗುವಳಿ ಮಾಡಿರುವ ಸ್ಥಳಕ್ಕೆ ಬಂದು ಪರಿಶೀಲನೆ ಮಾಡಿ ಬಡ ರೈತರಿಗೆ ಸಕ್ರಮ ಮಾಡಿ ಜಮೀನು ಪತ್ರವನ್ನು ನೀಡಬೇಕೆಂದು ತಾಲೂಕಿನ ದಂಡಧಿಕಾರಿಗಳಿಗೆ ಮರಳಿ ಪರಿಶೀಲನೆ ಮಾಡಿ ಜಮೀನು ಪತ್ರವನ್ನು ನೀಡಬೇಕೆಂದು ಮನವಿ ಪತ್ರ ವನ್ನು ಸಲ್ಲಿಸಲಾಯಿತು.
ವರದಿ : ಸದಾನಂದ.ಎಚ್