ಖಾಲಿ ಹುದ್ದೆಗಳು ಭರ್ತಿ ಮಾಡಿ ನ್ಯಾಯಾಧೀಶರ ಮೇಲಿನ ಒತ್ತಡ ಕಡಿಮೆ ಮಾಡಬೇಕು: ವಕೀಲ ಶರಣು ಪಾಟೀಲ ಮೋತಕಪಳ್ಳಿ

ಇತ್ತೀಚೆಗೆ ಸರಕಾರ ಪ್ರಕರಣಗಳ ತ್ವರಿತ ವಿಲೇವಾರಿ ಮಾಡಬೇಕೆಂದು ಒಂದು ಕಡೆ ಕಾನೂನು ತರುತ್ತಿದೆ, ಉಚ್ಚ ನ್ಯಾಯಾಲಯ ತಿಂಗಳಿಗೆ ಇಂತಿಷ್ಟು ಪ್ರಕರಣಗಳ ಇತ್ಯರ್ಥ ಮಾಡಬೇಕು ಎನ್ನುವ ಕಟ್ಟಪ್ಪಣೆ ಒಂದು ಕಡೆ. ಆದರೆ ಕೆಳಗಿನ ತಾಲೂಕ ಹಂತದ ನ್ಯಾಲಯಗಳ ವಾಸ್ತವತೆ ಬೇರೇನೆ ಇದೆ, ಒಂದೊಂದು ನ್ಯಾಯಾಧೀಶರಿಗೆ ಎರಡು ಮೂರು ನ್ಯಾಯಾಲಯಗಳ ಜವಾಬ್ದಾರಿ ಇದೆ, ಪ್ರತಿದಿನ ಕನಿಷ್ಠ ನೂರು ಇನ್ನೂರು ಪ್ರಕರಣಗಳು ಕರೆಯುವಲ್ಲೇ ಅರ್ಧ ದಿನ ಕಳೆದು ಹೋಗುತ್ತಿದೆ, ಒಂದೋ ಎರಡೋ ಪ್ರಕರಣಗಳಲ್ಲಿ ಸಾಕ್ಷಿ ಪಡೆದು, ವಾದವನ್ನು ಆಲಿಸುವಲ್ಲಿ ಸಂಜೆ ಆಗುತ್ತಿದೆ, ನ್ಯಾಯಾಧೀಶರು ಎಷ್ಟೇ ವೇಗವಾಗಿ ಕೆಲಸ ಮಾಡಿದರು ತ್ವರಿತ ವಿಲೇವಾರಿ ಕಷ್ಟ, ಇನ್ನು ಕಕ್ಷಿದಾರರು ಹಾಗೂ ವಕೀಲರ ಸಹಕಾರ ಬೇಕೇಬೇಕು ಆದರೆ ಅದರ ಕೊರತೆ ಇದೆ, ಮತ್ತೊಂದು ಕಡೆ ಇಂತಿಷ್ಟು ಪ್ರಕರಣಗಳು ರಾಜಿ ಸಂಧಾನದ ಮೂಲಕವೇ ಮುಗಿಸಬೇಕು ಎನ್ನುವ ಸೂಚನೆ ಕೂಡ ಮೇಲಿಂದ ಇದೆ, ವಕೀಲರಿಗೆ, ಕಕ್ಷಿದಾರರಿಗೆ ಮನವಲಿಸಿ ಪ್ರಕರಣಗಳನ್ನು ರಾಜಿ ಸಂಧಾನ ಮಾಡಿದವು ಒಂದು ಹೆಚ್ಚಿನ ಕೆಲಸವಾಗಿದೆ.
ವಾಸ್ತವತೆಯಲ್ಲಿ ಇದನ್ನೆಲ್ಲ ನಿಭಾಯಿಸುವ ಹೊಣೆಗಾರಿಕೆ ಕೆಲವ ಕೆಳ ಹಂತದ ನ್ಯಾಯಾಧೀಶರ ಮೇಲಿದೆ ಎಲ್ಲದಕ್ಕೂ ಅವರೇ ಉತ್ತರ ಕೊಡಬೇಕು. ಇಂತಹ ಪರಿಸ್ಥಿಯಲ್ಲಿ ಎಲ್ಲ ನ್ಯಾಯಾಧೀಶರು ಏಕ ರೀತಿಯಲ್ಲಿ ಕೆಲಸ ನಿಭಾಯಿಸುವ ಮಾನಸಿಕತೆ ಇರುವದು ಕಷ್ಟ, ಎಲ್ಲರ ಮಾನಸಿಕತೆ, ತಾಳ್ಮೆ ಒಂದೇ ತೆರನಾಗಿರುವದಿಲ್ಲ.
ತಮ್ಮ ಕುಟುಂಬಕ್ಕೂ ಸಮಯ ಕೊಡುವದು ಕಷ್ಟ ಸಾಧ್ಯ, ಕುಟುಂಬಸ್ಥರ ಒಂದು ಕಾರ್ಯಕ್ರಮಕ್ಕೆ ನಾಲ್ಕು ದಿನ ರಜೆ ಪಡೆದು ಹೋಗಬೇಕಾದರೆ ಅವರು ಹರಸಾಹಸ ಪಡುವಂತೆ ಇದೆ.
ಇನ್ನು ವರ್ಗಾವಣೆ ವಿಷಯದಲ್ಲಿ ಉಚ್ಚ ನ್ಯಾಯಾಲಯವೇ ಅಂತಿಮವಾಗಿದ್ದು ಇದರಲ್ಲಿ ಬದಲಾವಣೆ ತಂದು ಕೌನ್ಸೆಲಿಂಗ್ ಮೂಲಕ ಸ್ಥಳ ಆಯ್ಕೆಯ ಪ್ರಕ್ರಿಯೆ ತರುವ ನಿಟ್ಟಿನಲ್ಲಿ ಉಚ್ಚ ನ್ಯಾಯಾಲಯ ಪರಾಮರ್ಶಿಸಿ ನಿರ್ಧಾರ ಕೈಗೊಳ್ಳುವದು ಉತ್ತಮ. ಇನ್ನು ಕೂಡಲೇ ಖಾಲಿ ನ್ಯಾಯಾಧೀಶರುಗಳ ಹುದ್ದೆಗಳನ್ನು ಭರ್ತಿ ಮಾಡಲೇ ಬೇಕು, ಇಲ್ಲಾಂದ್ರೆ ನ್ಯಾಯಾಧೀಶರ ಮಾನಸಿಕ ಒತ್ತಡ ಕಡಿಮೆ ಮಾಡುವದು ಅಸಾಧ್ಯ. ತಾಲೂಕ ಮಟ್ಟದಲ್ಲಿ ರಾಜ್ಯದ ಹಲವು ಕಡೆ ಸುಗಮವಾಗಿ ಕೆಲಸ ಮಾಡುವ ಕಟ್ಟಡಗಳ ಕೊರತೆ ಇದೆ, ನ್ಯಾಯಾಧೀಶರು ವಾಸಿಸಲು ಸುಸಜ್ಜಿತ ಸರಕಾರಿ ಗೃಹಗಳ ಕೊರತೆ ಇದೆ. ಸರಕಾರ ನ್ಯಾಯಾಂಗ ಇಲಾಖೆಗೆ ಪ್ರಥಮ ಪ್ರಾಶಸ್ತ್ಯ ಕೊಟ್ಟು ಕೂಡಲೇ ಸಕಲ ಸೌಲಭ್ಯ ಒಳಗೊಂಡ ಸುಜಜ್ಜಿತ ನ್ಯಾಯಾಂಗ ಸಂಕೀರ್ಣಗಳು ಹಾಗೂ ನ್ಯಾಯಾಧೀಶರ ವಾಸ ಗ್ರಹಗಳ ನಿರ್ಮಾಣ ಮಾಡಬೇಕು ಎಂದು ಆಗ್ರಹ. ರಾಜ್ಯ ವಕೀಲರ ಪರಿಷತ್ತು ಸಹ ಈ ನಿಟ್ಟಿನಲ್ಲಿ ನ್ಯಾಯಾಂಗ ಇಲಾಖೆಗೆ ಹಾಗೂ ನ್ಯಾಯಾಧೀಶರ ಕಾರ್ಯಕ್ಕೆ ಸಪೂರ್ಣ ಸಹಕಾರ ನೀಡುವಲ್ಲಿ ಕಟ್ಟು ನಿಟ್ಟಿನ ಆದೇಶ ತರಬೇಕು. ಸರಕಾರ, ವಕೀಲರು ಮತ್ತು ಉಚ್ಚ ನ್ಯಾಯಾಲಯಗಳು ವಾಸ್ತವತೆಯಲ್ಲಿ ಬದಲಾವಣೆ ತಂದು ಕೆಳ ನ್ಯಾಯಾಲಗಳಲ್ಲಿ ಸುಲಭ ಹಾಗು ಸರಳ ನ್ಯಾಯಾಂಗ ಪ್ರಕ್ರಿಯೆಗೆ ಸಹಕಾರ ನೀಡದಲ್ಲಿ ಮಾತ್ರ ಎಲ್ಲವೂ ಸರಳವಾಗಿ ಜರುಗುವದು. ಸರಕಾರ ಇದರ ಮುಂದಾಳತ್ವ ವಹಿಸಿ ಮೊದಲು ವಾಸ್ತವತೆಯ ಪರಿಸ್ಥಿತಿಯ ಅವಲೋಕನ ಮಾಡಿ ಎಲ್ಲರನ್ನೂ ವಿಶ್ವಾಸಕ್ಕೆ ತೆಗೆದುಕೊಂಡು ಕೆಳ ನ್ಯಾಯಲಯಗಳ ಪರಿಸ್ಥಿಯಲ್ಲಿ ಸುಧಾರಣೆ ತರಬೇಕು ಅಂದಾಗ ಮಾತ್ರ ಯಾವುದೇ ಒತ್ತಡ ಇಲ್ಲದೆ ನ್ಯಾಯಾಲಯ ಮ್ಗಳಿಂದ ತ್ವರಿತ ವಿಲೇವಾರಿ ಸಾಧ್ಯ.
ಶರಣು ಪಾಟೀಲ ಮೋತಕಪಳ್ಳಿ ವಕೀಲರು ಚಿಂಚೋಳಿ.

ವರದಿ : ರಾಜೇಂದ್ರ ಪ್ರಸಾದ್

error: Content is protected !!