ಬೀದರ್ : ಐ.ಪಿ.ಎಸ್. ಪೊಲೀಸ್ ವರಿಷ್ಠಾಧಿಕಾರಿ ಬೀದರ ನಾ ಪ್ರದೀಪ್ ರವರ ನೇರ ನಿರ್ದೇಶನ ಮತ್ತು ಮಾರ್ಗದರ್ಶನದಂತೆ, ಗಾಂಧಿಗಂಜ ಪೊಲೀಸ್ ಠಾಣಾ ವ್ಯಾಪ್ತಿಯ ಸಂಗಮೇಶ್ವರ ಕಾಲೋನಿ ಚಿದ್ರಿ ರೋಡ್ ಬೀದರದ ಮನೆಯಲ್ಲಿ ಅಕ್ರಮವಾಗಿ ಗಾಂಜಾವನ್ನು ಸಂಗ್ರಹಿಸಿಟ್ಟಿರುವ ಮಾಹಿತಿಯಂತೆ ಗಾಂಧಿಗಂಜ ಪೊಲೀಸ್ ಠಾಣೆಯ ಪಿ.ಐ ಆನಂದರಾವ, ಎಸ್.ಎನ್ ರವರು ತಮ್ಮ ಠಾಣೆಯ ಸಿಬ್ಬಂದಿ ರವರೊಂದಿಗೆ ಪತ್ರಾಂಕಿತ ಅಧಿಕಾರಿ ಮಹ್ಮದ ಜಿಯಾದ್ದಿನ್, ತಹಶಿಲ್ದಾರರು ಗ್ರೇಡ್-2 ಬೀದರ ರವರ ಸಮಕ್ಷಮ ಮನೆಯಲ್ಲಿ ಸಂಗ್ರಹಿಸಿಟ್ಟ 38 ಕೆ.ಜಿ 150 ಗ್ರಾಂ ಗಾಂಜಾ ಅ:ಕಿ: 38,15,000=00 ರೂಪಾಯಿ ಮೌಲ್ಯದವುಗಳನ್ನು ವಶ ಪಡಿಸಿಕೊಂಡು ಆರೋಪಿತರ ವಿರುದ್ದ ಪ್ರಕರಣ ದಾಖಲಿಸಿಕೊಂಡು ಕಾನೂನು ರೀತ್ಯ ಕ್ರಮ ಕೈಕೊಳ್ಳಲಾಗಿದೆ.
ತಮ್ಮ ಠಾಣಾ ವ್ಯಾಪ್ತಿಯನ್ನು ನಶಾ ಮುಕ್ತ ಮಾಡುವ ಸಂಕಲ್ಪ ಇಟ್ಟುಕೊಂಡು ಗಾಂಜಾ ದಾಳಿಯಲ್ಲಿ ಶ್ರಮಿಸಿದ ಪೊಲೀಸ್ ಅಧಿಕಾರಿ ಮತ್ತು ಸಿಬ್ಬಂದಿಯವರ ಕಾರ್ಯಕ್ಕೆ ಎಸ್ಪಿ ಪ್ರದೀಪ್ ಗುಂಟಿ ಶ್ಲಾಘಿಸಿದ್ದಾರೆ.
ಬೀದರ ಜಿಲ್ಲೆಯನ್ನು ಗಾಂಜಾ ಮುಕ್ತ ಜಿಲ್ಲೆಯನ್ನಾಗಿಸಲು ಜಿಲ್ಲೆಯ ಪೊಲೀಸರ ಕಾರ್ಯಾಚರಣೆಯು ಸದಾ ಮುಂದುವರೆಯುತ್ತದೆ ಎಂದು ವರಿಷ್ಟಾಧಿಕಾರಿಗಳು ತಿಳಿಸಿದ್ದಾರೆ.
