ಆ 15ರ ಒಳಗೆ ಒಳಮೀಸಲಾತಿ ಜಾರಿಗೆ ಒತ್ತಾಯಿಸಿ ಮುಖ್ಯಮಂತ್ರಿಗಳಿಗೆ ಮನವಿ

ನಿವೃತ್ತ ನ್ಯಾಯಮೂರ್ತಿ ಎ.ಜೆ. ಸದಾಶಿವ ಆಯೋಗ ಹಾಗೂ ಜೆ.ಸಿ.ಮಾಧುಸ್ವಾಮಿ ವರದಿಯಂತೆ ಪರಿಗಣಿಸಿ ಆಗಸ್ಟ್ 15 ರ ಒಳಗೆ ಪರಿಶಿಷ್ಟ ಜಾತಿಯಲಿ ಒಳಮೀಸಲಾತಿ ಜಾರಿಗೋಳಿಸಬೇಕು ಇಲ್ಲದಿದ್ದರೆ ರಾಜ್ಯವ್ಯಾಪ್ತಿ ಗಂಭೀರ ಸ್ವರೂಪದ ಹೊರಾಟ ನಡೆಸಲಾಗುವುದು, ಒಳ ಮೀಸಲಾತಿ ಜಾರಿಯಾಗುವಂತೆ ಸುಪ್ರೀಂ ಕೋರ್ಟಿ ಸಹ ನಿರ್ದೇಶನ ನೀಡಿ ವರ್ಷ ಗತಿಸಿದರೂ, ಈ ರಾಜ್ಯದ ಮುಖ್ಯಂಮಂತ್ರಿಗಳಾದ ಸಿದ್ದರಾಮಯ್ಯ ನೇತೃತ್ವದ ರಾಜ್ಯ ಸರ್ಕಾರ ಒಳ ಮೀಸಲಾತಿ ಜಾರಿಗೊಳಿಸುತ್ತಿಲ್ಲ ಎಂದು ಆಕ್ರೋಶ ಹೊರಹಾಕಿದ್ದರು

ಮಾದಿಗ ಜನಾಂಗಕ್ಕೆ ಘೋರ ಅನ್ಯಾಯ ಮಾಡುತ್ತಿದ್ದಾರೆ. ರಾಜ್ಯದಲಿ ಪರಿಶಿಷ್ಟ ಜಾತಿಗೆ ಇರುವ ಶೇ. 15 ರಿಂದ 17 ಶೇ. ರಷ್ಟು ಹೆಚ್ಚಿಸಿ ಮೀಸಲಾತಿಯಲಿ.. ಮಾದರ, ಸಮಗಾರ, ಡೋಹರ, ಮಚಗಾರ ಸಮುದಾಯದವರಿಗೆ ಶೇ% 6 ರಷ್ಟು ಒಳ ಮೀಸಲಾತಿ ನೀಡುವಂತೆ ಆಯೋಗ ಶಿಫಾರಸು ಮಾಡಿದೆ ಆದರೆ ಸದ್ಯದ ಸರ್ಕಾರದಲ್ಲಿ ಇರುವು ಕೆಲವರು ಒಳಮೀಸಲಾತಿ ಜಾರಿಯಾಗಲು ಅಡ್ಡಿಪಡಿಸುತ್ತಿದ್ದಾರೆ ಹಿಂತವರ ಮಾತಿಗೆ ಮುಖ್ಯಮಂತ್ರಿಗಳು ಕಿವಿ ಕೊಡಬಾರದು. ಒಳ ಮೀಸಲಾತಿಗಾಗಿ ಸುಮಾರಿ ಮೂರು ದಶಕಗಳಿಂದ ಹೋರಾಟ ನಡೆಸಲಾಗುತ್ತಿದೆ ಕಳೆದ ಬಾರಿ ಮುಖ್ಯಮಂತ್ರಿಗಳಾಗಿದ್ದ ಬಸವರಾಜ ಬೊಮ್ಮಾಯಿಯವರು ಒಳಮೀಸಲಾತಿ ಜಾರಿಗಾಗಿ ದಿಟ್ಟ ನಿರ್ಧಾರ ತೆಗೆದುಕೊಂಡಿದ್ದರು ಆದರೆ ಇಂದಿನ ಸರ್ಕಾರ ಸಮೀಕ್ಷೆ ಹೆಸರಿನಲಿ.. ಕಾಲಹರಣ ಮಾಡುತ್ತಿದಾರೆ, ಒಳ ಮೀಸಲಾತಿ ಜಾರಿಮಾಡುವುದಾಗಿ ಹೇಳಿದೆ ಸಿದ್ದರಾಮಯ್ಯನವರು ಈ ಸಮಾಜಕ್ಕೆ ಘೋರ ಅನ್ಯಾಯ ಮಾಡುತ್ತಿದ್ದಾರೆ ಇಂದಿನ ಸರ್ಕಾರದಿಂದ ನಮ್ಮ ಸಮಾಜಕ್ಕೆ ನ್ಯಾಯ ಸಿಗುತ್ತಿಲ್ಲ.. ಎಂಬುದು ನಮಗೆ ಅಸಮಧಾನ ಇದೆ ಪ್ರತಿ ವಿಧಾನ ಸಭಾ ಕ್ಷೇತ್ರದರೆ.. 20 ಸಾವಿರದಿಂದ 45 ಸಾವಿರವರೆಗೆ ಮತದಾರರು ಇದ್ದಾರೆ, ಆಗಸ್ಟ್ 15 ರ ಒಳಗೆ ಬೇಡಿಕೆ ಇಡೇರಿಸಬೇಕ.. ಇಲ್ಲವಾದರೆ ಮುಂಬರುವ ತಾಲೂಕ ಪಂಚಾಯತ, ಜಿಲಾ.. ಪಂಚಾಯತ ಹಾಗೂ ಮುಂದಿನ ಚುಣಾವಣೆಯಲಿ ತಕ್ಕ ಪಾಠ ಕಲಿಸಲಾಗುವುದು, ಅಷ್ಟೇ ಅಲ್ಲದೆ ಈ ಸರ್ಕಾರದ ಸಚಿವರ ಕಾರ್ಯಕ್ರಮದಲಿ.. ಭಾಗಿಯಾಗಿ ಅವರ ವಿರುದ್ಧ ಹೋರಾಟದಲ್ಲಿ ಕೋಲ್ಹರ್ ತಾಲೂಕ ತಹಸೀಲ್ದಾರ್ ಕಚೇರಿ ಮುಂದೆ ಕರ್ನಾಟಕ ರಾಜ್ಯ ಆದಿಜಂಭವ ಸಂಘದ ವತಿಯಿಂದ ಮನವಿಯನ್ನು ಕೊಟ್ಟು ಪದಾಧಿಕಾರಿಗಳು ಮಾತನಾಡಿದರು ಜಿಲ್ಲಾ ಉಪಾಧ್ಯಕ್ಷ ಲಚ್ಚಪ್ಪ ಮಾದರ ಮತ್ತು ಗ್ರಾಮೀಣ ವಿದ್ಯಾ ವರ್ಧಕ ಸಂಸ್ಥೆಯ ಕಾರ್ಯದರ್ಶಿ ಎಲ್ ಎಮ್ ಬೆಳ್ಳುಬ್ಬಿ ಮಾತನಾಡಿದರು ಸಭೆಯಲ್ಲಿ ಜಿಲ್ಲಾ ಕಾರ್ಯದರ್ಶಿ ವಿಠ್ಠಲ್ ಕವಲಗಿ ಮತ್ತು ಕೋಲ್ಹರ ತಾಲೂಕ ಅಧ್ಯಕ್ಷರು ರವಿ ಸಿದ್ದನಾಥ್ ಮತ್ತು ಶಿವಾನಂದ್ ನಿಡಗುಂದಿ ಸಾಬು ಗುಣದಾಲ ಮತ್ತು ಸಮಾಜದ ಹಿರಿಯರು ಭಾಗವಹಿದ್ದರು.

ವರದಿ : ದೌಲಪ್ಪ ಮನಗೋಳಿ

error: Content is protected !!