ಹುಮನಾಬಾದ : ತಾಲೂಕಿನ ವರವಟ್ಟಿ.ಕೆ ಗ್ರಾಮದ ಸರ್ಕಾರಿ ಶಾಲೆಯಲ್ಲಿ ಬಿಸಿ ಊಟದ ಅಡುಗೆ ಮಾಡುವಾಗ ಬೆಳೆ ಬೇಯಿಸುವ ಕುಕ್ಕರ್ ಬ್ಲಾಸ್ಟ್ ಆಗಿದ್ದು ಅಡುಗೆ ಸಿಬ್ಬಂದಿ ಸರಸ್ವತಿ (45) ಮತ್ತು ಅಡುಗೆ ಸಹಾಯಕಿ ಚಿನ್ನಮ್ಮ (40) ಅವರಿಗೆ ಗಾಯ ಗಳಾಗಿದ್ದು ಅವರನ್ನ ತಕ್ಷಣ ದುಬಲಗುಂಡಿ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಕರೆ ತಂದು ಚಿಕಿತ್ಸೆ ನೀಡಲಾಗುತ್ತಿದೆ,
ಅದೃಷ್ಟವಶಾತ್ ಯಾವುದೇ ಪ್ರಾಣ ಹಾನಿ ಸಂಭವಿಸಿಲ್ಲ ವಿದ್ಯಾರ್ಥಿಗಳು ಕೂಡ ಅಡುಗೆ ಕೊಣೆ ಕಡೆ ಹೋಗದೆ ಇರುವುದರಿಂದ ಮಕ್ಕಳಿಗೂ ಯಾವುದೇ ನಷ್ಟವಾಗಿಲ್ಲ.