ಧಾರವಾಡ : ಜಿಲ್ಲೆಯ ಹಲವಾರು ಗ್ರಾಮಗಳ ಗ್ರಾಮ ಪಂಚಾಯತ್ ಅಧಿಕಾರಿಗಳು ಮತ್ತು ಆಡಳಿತ ವರ್ಗದವರು ಸೇರಿಕೊಂಡು ತಮ್ಮ ತಮ್ಮ ಗ್ರಾಮಗಳ ಅಭಿವೃದ್ಧಿಗೆ ಒತ್ತು ನೀಡಿ, ಜನ ಸೇವೆಯೇ ಜನಾರ್ಧನ ಸೇವೆ ಎಂಬ ಗಾದೆ ಮಾತಿನಂತೆ ಕೆಲಸ ಮಾಡದೇ ತಮ್ಮ ತಮ್ಮ ವೈಯಕ್ತಿಕ ಲಾಭಕ್ಕಾಗಿ ಸರ್ಕಾರದಿಂದ ಬರುವ ಹಲವಾರು ಯೋಜನೆಗಳ ಅನುದಾನವನ್ನು ಗ್ರಾಮ ಪಂಚಾಯತ್ ಮಟ್ಟದಲ್ಲಿ ದುರ್ಬಳಕೆ ಮಾಡಿಕೊಂಡು, ಬೋಗಸ್ ಬಿಲ್ ಗಳನ್ನು ತಗೆದು ಮೋಜು ಮಸ್ತಿ ಮಾಡುವುದು ಎಲ್ಲಾ ಕಡೇ ಸಾಮಾನ್ಯವಾಗಿದೆ, ಇವೆಲ್ಲದರ ಜೊತೆಗೆ ಪರಿಶಿಷ್ಟ ಜಾತಿ/ ಪರಿಶಿಷ್ಟ ಪಂಗಡದ ಅಭಿವೃದ್ಧಿಗಾಗಿ ಮೀಸಲಿಡುವ SCP/ TSP ಯೋಜನೆಯ ಅನುದಾನವನ್ನು ಆ ಜನಾಂಗದ ಅಭಿವೃದ್ಧಿಗೆ ಬಳಕೆ ಮಾಡದೇ ಇನ್ನಿತರೇ ಜನಾಂಗ ವಾಸಿಸುವ ಜಾಗದಲ್ಲಿ ಕಾಮಗಾರಿಗಳನ್ನು ಮಾಡಿಸಿ ದುರ್ಬಳಕೆ ಮಾಡಿಕೊಂಡು ಭ್ರಷ್ಟಾಚಾರ ಮಾಡಿರುವ ಘಟನೆ ಧಾರವಾಡ ಜಿಲ್ಲೆಯ ಅಮ್ಮಿನಬಾವಿ ಗ್ರಾಮ ಹಾಗೂ ಹಲವಾರು ಗ್ರಾಮಗಳಲ್ಲಿ ಮಾಡಿರುವ ಅಧಿಕಾರಿ ಹಾಗೂ ಆಡಳಿತ ವರ್ಗದವರ ವಿರುದ್ದ ಡಾ!! ಬಿ ಆರ್ ಅಂಬೇಡ್ಕರ್ ದಲಿತ ಸಂಘರ್ಷ ಸಮಿತಿಯ ಧಾರವಾಡ ತಾಲೂಕು ಘಟಕದ ವತಿಯಿಂದ ಧಾರವಾಡದ ಕಲಾ ಭವನದ ಹತ್ತಿರ ಇರುವ ಅಂಬೇಡ್ಕರ್ ಪ್ರತಿಮೆಗೆ ಮಾಲಾರ್ಪಣೆ ಮಾಡಿ ಪಾದಯಾತ್ರೆಯ ಮುಖಾಂತರ ಜಿಲ್ಲಾಧಿಕಾರಿಗಳ ಕಚೇರಿಯವರೆಗೆ ತೆರಳಿ, ಭ್ರಷ್ಟಾಚಾರಿಗಳ ವಿರುದ್ಧ ತನಿಖೆ ನಡೆಸಿ ಸೂಕ್ತ ಕಠಿಣ ಕಾನೂನು ಕ್ರಮ ಜರುಗಿಸುವುದು ಅಷ್ಟೇ ಅಲ್ಲದೇ ಪ್ರಕರಣದಲ್ಲಿ ಭಾಗಿಯಾಗಿರುವ ಅಧಿಕಾರಿಗಳನ್ನು ಅಮಾನತ್ತು ಮಾಡಲು ಬ್ರಹತ್ ಪ್ರತಿಭಟನೆ ಮಾಡಿ ಧಾರವಾಡ ಜಿಲ್ಲಾಧಿಕಾರಿಗಳಿಗೆ ಮನವಿಯನ್ನು ಸಲ್ಲಿಸಲಾಯಿತು.
ಪ್ರತಿಭಟನೆಯಲ್ಲಿ ಡಾ!! ಬಿ ಆರ್ ಅಂಬೇಡ್ಕರ್ ದಲಿತ ಸಂಘರ್ಷ ಸಮಿತಿಯ ಶಂಕರ್ ಪಾತ್ರದ, ಲಕ್ಷ್ಮಣ ಚಲವಾದಿ, ಧಾರವಾಡ ತಾಲೂಕ ಘಟಕದ ಅಧ್ಯಕ್ಷ ವಿನೋದ ಕಾಳೆ, ಅರುಣ ಅಮ್ಮಿನಭಾವಿ, ರವಿ ಬಂಗ್ಯಾಣ್ಣವರ, ರಾಜು ಜುನ್ನಾಯ್ಕರ್, ದುರ್ಗಪ್ಪ ಕಡೆಮನಿ, ವರುಣ್ ಕೊಂಡ್ಲಿ , ರಾಕೇಶ್ ಜುನ್ನಾಯ್ಕರ್, ಸುರೇಶ್ ಕಡೆಮನಿ, ಹನುಮಂತ್ ಭಜಂತ್ರಿ, ಆನಂದ್ ಜುನ್ನಾಯ್ಕರ್, ರವಿ ದೊಡ್ಡಮನಿ, ನಾಗರಾಜ್ ಕಡೆಮನಿ, ಶಿವು ಛಲವಾದಿ, ಸಂಗಮೇಶ ದೊಡ್ಡಮನಿ ಹಾಗೂ ಹಲವಾರು ಮುಖಂಡರು ಪಾಲ್ಗೊಂಡಿದ್ದರು.