ರಕ್ಷಾ ಬಂಧನ! ರಾಖಿ ಮಾರಾಟ ಜೋರು

ಚಿತ್ತಾಪುರ; ಪಟ್ಟಣ ಸೇರಿದಂತೆ ತಾಲೂಕಿನಾದ್ಯಾಂತ ರಕ್ಷಾ ಬಂಧನದ ಪ್ರಯುಕ್ತ ರಾಖಿಗಳ ಮಾರಾಟ ಜೋರಾಗಿ ನಡೆಯಿತು.
ಪಟ್ಟಣದ ಲಾಡ್ಜಿಂಗ್ ಕ್ರಾಸ್, ಬಸ್ ನಿಲ್ದಾಣ ವೃತ್ತ, ಜನತಾ ಚೌಕ್, ಕಪಡಾ ಬಜಾರ್ ಸೇರಿದಂತೆ ಇತರ ಕಡೆಗಳಲ್ಲಿ ರಾಖಿ ಮಾರಾಟಗಾರರ ಹತ್ತಿರ ಪಟ್ಟಣದ ನಿವಾಸಿಗಳು ನಿನ್ನೆ ಸಾಯಾಂಕಾಲದ ಸಮಯದಲ್ಲಿ ರಾಖಿ ಖರೀದಿಯಲ್ಲಿ ತೊಡಗಿರುವುದು ಕಂಡು ಬಂತು.
ಇಂದು ಬೆಳಗ್ಗೆ ದೂರ ದೂರದ ಜಿಲ್ಲೆ, ಹೊರ ರಾಜ್ಯಗಳಿಗೆ ಹೋಗಿದ್ದ ಅಣ್ಣ ತಮ್ಮಂದಿರು ಒಡ ಹುಟ್ಟಿದ ತಂಗಿಯರು ಮತ್ತು ಅಕ್ಕಂದಿರ ಮನೆಗಳಿಗೆ ಬರುವ ಮೂಲಕ ಅವರ ಕೈಯಿಂದ ರಾಖಿ ಕಟ್ಟಿಸಿಕೊಳ್ಳುವುದರ ಮೂಲಕ ರಕ್ಷಾ ಬಂಧನವನ್ನು ಸಂಭ್ರಮದಿಂದ ಆಚರಿಸಿದರು

ವರದಿ : ಮೊಹಮ್ಮದ್ ಅಲಿ ಚಿತ್ತಾಪುರ

error: Content is protected !!