ಶುಕ್ರವಾರ ನಮಾಝಿಗೆ ಹೋಗಲು ಮುಸ್ಲಿಮ್ ಶಾಸಕರಿಗೆ ಇದ್ದ ವಿರಾಮ ರದ್ದುಗೊಳಿಸಿದ ಅಸ್ಸಾಮ್ ಸರಕಾರ

ಅಸ್ಸಾಂ ವಿಧಾನಸಭೆಯಲ್ಲಿ ಮುಸ್ಲಿಂ ಶಾಸಕರಿಗಿದ್ದ ಎರಡು ಗಂಟೆಗಳ ನಮಾಜ್ ವಿರಾಮ ರದ್ದುಗೊಳಿಸುವುದಾಗಿ ಅಸ್ಸಾಂ ಮುಖ್ಯಮಂತ್ರಿ ಹಿಮಂತ ಬಿಸ್ವಾ ಶರ್ಮಾ ಘೋಷಿಸಿದ್ದಾರೆ.

 

ಮುಸ್ಲಿಂ ಶಾಸಕರು ಮತ್ತು ಸಿಬ್ಬಂದಿ ಸದಸ್ಯರಿಗೆ ಶುಕ್ರವಾರದ ಪ್ರಾರ್ಥನೆ ಅಥವಾ ನಮಾಜ್‌ಗಾಗಿ ಅಸ್ಸಾಂನಲ್ಲಿ ಈ ಹಿಂದೆ ಎರಡು ಗಂಟೆಗಳ ಕಾಲ ವಿರಾಮವನ್ನು ನೀಡಲಾಗುತ್ತಿತ್ತು. ಆದರೆ ಈ ದೀರ್ಘಕಾಲದ ನಿಬಂಧನೆಯನ್ನು ಶುಕ್ರವಾರವೇ ಅಸ್ಸಾಂ ಸರ್ಕಾರ ತೆಗೆದುಹಾಕಿದೆ.

 

ಈ ನಿರ್ಧಾರವನ್ನು ಬೆಂಬಲಿಸಿದ ವಿಧಾನಸಭೆ ಸ್ಪೀಕರ್ ಬಿಸ್ವಜಿತ್ ಡೈಮರಿ ಮತ್ತು ಶಾಸಕರಿಗೆ ಮುಖ್ಯಮಂತ್ರಿ ಶರ್ಮಾ ಕೃತಜ್ಞತೆ ಸಲ್ಲಿಸಿದರು. ಜುಮ್ಮಾ ವಿರಾಮವನ್ನು ರದ್ದುಪಡಿಸುವ ಮೂಲಕ, ಶಾಸಕಾಂಗ ಉತ್ಪಾದಕತೆಗೆ ಆದ್ಯತೆ ನೀಡುತ್ತಿದ್ದಾರೆ ಎಂದು ಒತ್ತಿ ಹೇಳಿದರು.

error: Content is protected !!