(b) NDPS Act ಪ್ರಕರಣದಲ್ಲಿ 375 ಗ್ರಾಂ ಗಾಂಜಾ, 174 ಮಾದಕ ಗುಳಿಗೆಗಳು ಹಾಗೂ 69 ಸಿರಫ್ ಬಾಟಲಗಳು ಹಾಗೂ ಕೃತ್ಯಕ್ಕೆ ಬಳಸಿದ ವಾಹನ ಸೇರಿ ಒಟ್ಟು 54,078/-ರೂ ಬೆಲೆವುಳ್ಳ ಮಾಲು ಜಪ್ತಿ ಮಾಡಿ, 03 ಜನ ಆರೋಪಿತರಿಗೆ ನ್ಯಾಯಾಂಗ ಬಂಧನಕ್ಕೆ ಕಳುಹಿಸಿರುತ್ತಾರೆ.
ಪ್ರಕರಣದ ಸಂಕ್ಷಿಪ್ತ ವಿವರ
ದಿನಾಂಕ 23.10.2024 ರಂದು ರಾತ್ರಿ 18:45 ಗಂಟೆಯಿಂದ 20:45 ಗಂಟೆಯ ಅವಧಿಯಲ್ಲಿ ಬೀದರ ನಗರದ ದೀನ ದಯಾಳ ನಗರ ಕಾಲೋನಿಯಲ್ಲಿ ಅನಧಿಕೃತವಾಗಿ ಯಾವುದೇ ಪರವಾನಿಗೆ ಇಲ್ಲದೆ ನರ್ಕೋಟಿಕ್ ಅಂಶ ಇರುವ ಔಷದಗಳು ಮತ್ತು ಗಾಂಜಾವನ್ನು ಮಾರಾಟ ಮಾಡುತ್ತಿರುವ ಬಗ್ಗೆ ಮಾಹಿತಿ ಮೇರೆಗೆ ಶ್ರೀ ಪ್ರದೀಪ ಗುಂಟಿ. ಐಪಿಎಸ್, ಮಾನ್ಯ ಪೊಲೀಸ ಅಧೀಕ್ಷಕರು, ಬೀದರ ಮತ್ತು ಶ್ರೀ ಮಹೇಶ ಮೇಘಣ್ಣನವರ್, ಮಾನ್ಯ ಹೆಚ್ಚುವರಿ ಪೊಲೀಸ ಅಧೀಕ್ಷಕರು ಬೀದರ-1, ಮತ್ತು ಶ್ರೀ ಚಂದ್ರಕಾಂತ ಪೂಜಾರಿ, ಮಾನ್ಯ ಹೆಚ್ಚುವರಿ ಪೊಲೀಸ ಅಧೀಕ್ಷಕರು ಬೀದರ-2 ಹಾಗು ಶ್ರೀ ಶಿವನಗೌಡ ಪಾಟೀಲ, ಪೊಲೀಸ ಉಪಾಧೀಕ್ಷಕರು, ಬೀದರ ರವರ ಮಾರ್ಗದರ್ಶನದಲ್ಲಿ ಶ್ರೀ ಶಿವಾನಂದ ಗಾಣಿಗೇರ, ಪಿ.ಐ, ಸೆನ್ ಪೊಲೀಸ ಠಾಣೆ ಬೀದರ ಮತ್ತು ಸಿಬ್ಬಂದಿಯವರಾದ ಶ್ರೀ ಅರುಣ ಪಾಟೀಲ ಸಿ.ಹೆಚ್.ಸಿ 822, ಶ್ರೀ ಮಲ್ಲಿಕಾರ್ಜುನ ಪಾಟೀಲ ಸಿ.ಹೆಚ್.ಸಿ 889, ಶ್ರೀ ಶಿವಕುಮಾರ ಸಿ.ಹೆಚ್.ಸಿ 888, ಶ್ರೀ ಮಲ್ಲಿನಾಥ ಸಿಪಿಸಿ 2017, ಶ್ರೀ ಪ್ರಶಾಂತರೆಡ್ಡಿ ಸಿಪಿಸಿ 1390 ವಾಹನ ಚಾಲಕ ಶ್ರೀ ಸಿದ್ರಾಮ ಎ.ಹೆಚ್.ಸಿ 13, ಮಾರ್ಕೆಟ ಪೊಲೀಸ ಠಾಣೆಯ ಶ್ರೀಮತಿ ಅನೀತಾ ಮ.ಎ.ಎಸ್.ಐ, ಶ್ರೀ ಸಂಗನ ಬಸವ ಸಿಪಿಸಿ 1216 ರವರ ತಂಡವು ದೀನ ದಯಾಳ ನಗರದಲ್ಲಿ ದಾಳಿ ಮಾಡಿ ಒಟ್ಟು 03 ಜನ ಆರೋಪಿತರ ವಶದಿಂದ.
59 ಗಾಂಜಾ ಪಾಕೀಟಗಳು ಒಟ್ಟು 357 ಗ್ರಾಂ ಅ: ಕಿ: 4,000/- ರೂ.ಗಳದ್ದು
Kuf Relief Cough syrup 53 100 2 2 2 169 0 : : 32,448/- ರೂ.ಗಳದ್ದು
Pyeevon spas Plus ಹೆಸರಿನ ಗುಳಿಗೆಗಳ 18 ಸ್ತ್ರೀಪಗಳು ಒಟ್ಟು 144 ಗುಳಿಗೆಗಳು ಅ: ಕಿ: 1382/- ರೂ.ಗಳದ್ದು
Nitravet-10ಮಜಿ(ನೆಟ್ರವೆಟ್) ಎಂಬ ಹೆಸರಿನ ಒಟ್ಟು 02 ಸ್ಟ್ರೀಪ್ ಗಳು ಒಟ್ಟು 30 ಗುಳಿಗೆಗಳು ಅ: ಕಿ: 248/- ರೂ.ಗಳದ್ದು
03 ಮೊಬಾಯಿಲಗಳು ಆ: ಕಿ: 6000/- ರೂ. ಗಳದ್ದು
ಒಂದು ಮೊಟಾರ ಸೈಕಲ ನಂ. ಕೆಎ-38/ಯು-2303 ಆ: ಕಿ: 10,000/-ರೂ. ನೇಗದ್ದನ್ನು ಜಪ್ತಿ ಮಾಡಿಕೊಂಡು, ಸದರಿ ಆರೋಪಿತರಿಗೆ ನ್ಯಾಯಾಂಗ ಬಂಧನಕ್ಕೆ ಕಳುಹಿಸಿದ್ದು ಇರುತ್ತದೆ.
ಈ ಪ್ರಕರಣವನ್ನು ಪತ್ತೆ ಹಚ್ಚುವಲ್ಲಿ ಪಾಲ್ಗೊಂಡ ಎಲ್ಲಾ ಅಧಿಕಾರಿ ಮತ್ತು ಸಿಬ್ಬಂದಿಯವರ ಕಾರ್ಯಕ್ಕೆ ಪೊಲೀಸ್ ಅಧೀಕ್ಷಕರು ಬೀದರ ಪ್ರಶಂಸನೀಯ ವ್ಯಕ್ತಪಡಿಸಿದ್ದಾರೆ.