ಜಾರ್ಖಂಡ್ ನ ರಾಂಚಿಯಲ್ಲಿರುವ ರಾಜೇಂದ್ರ ಇನ್ಸ್ಟಿಟ್ಯೂಟ್ ಆಫ್ ಮೆಡಿಕಲ್ ಸೈನ್ಸಸ್ (ರಿಮ್ಸ್) ನ ಆಂಕೊಲಾಜಿ ವಿಭಾಗದ ಜೂನಿಯರ್ ರೆಸಿಡೆಂಟ್ ವೈದ್ಯೆಯೊಬ್ಬಳು ಭಾನುವಾರ ಕೆಲಸಕ್ಕೆ ತೆರಳುತ್ತಿದ್ದಾಗ ಆಸ್ಪತ್ರೆಯ ಲಿಫ್ಟ್ ನಲ್ಲಿ ಲೈಂಗಿಕ ಕಿರುಕುಳಕ್ಕೊಳಗಾಗಿದ್ದಾಳೆ. ಎಫ್ಐಆರ್ ದಾಖಲಾದ ನಂತರ ಆರೋಪಿಯನ್ನು ಬಂಧಿಸಲಾಗಿದೆ.
ಇನ್ನು ಈ ಘಟನೆಯನ್ನು ಖಂಡಿಸಿ ವೈದ್ಯರ ಮುಷ್ಕರ ಮಾಡಿದ್ದಾರೆ. ಆದರೆ, ಜೂನಿಯರ್ ಡಾಕ್ಟರ್ಸ್ ಅಸೋಸಿಯೇಷನ್ (ಜೆಡಿಎ) ಮತ್ತು ರಿಮ್ಸ್ ಆಡಳಿತ ಮಂಡಳಿಯ ನಡುವಿನ ಚರ್ಚೆಯ ನಂತರ, ಆಡಳಿತವು ಹೆಚ್ಚಿನ ಭದ್ರತೆಯ ಭರವಸೆ ನೀಡಿದ ನಂತರ ಮುಷ್ಕರವನ್ನು ಹಿಂಪಡೆಯಲಾಯಿತು. ಪ್ರತಿ ಲಿಫ್ಟ್ ಗೆ ಲಿಫ್ಟ್ ಆಪರೇಟರ್ ಗಳನ್ನು ನೇಮಿಸಲು ಮತ್ತು ಪ್ರತಿ ವಾರ್ಡ್ ನಲ್ಲಿ ಸಶಸ್ತ್ರ ಪೊಲೀಸ್ ಅಧಿಕಾರಿಗಳನ್ನು ನಿಯೋಜಿಸಲು ಅವರು ಒಪ್ಪಿಕೊಂಡರು. ಕನಿಷ್ಠ 100 ಸಶಸ್ತ್ರ ಪೊಲೀಸ್ ಸಿಬ್ಬಂದಿಯನ್ನು ಸ್ಥಳದಲ್ಲಿ ನಿಯೋಜಿಸಲಾಗುವುದು.
ಆಗಸ್ಟ್ 9 ರಂದು ಮಹಿಳಾ ತರಬೇತಿ ವೈದ್ಯರ ಮೇಲೆ ಅತ್ಯಾಚಾರ ಎಸಗಿ ಹತ್ಯೆಗೈದ ಆರ್. ಜಿ. ಕರ್ ಆಸ್ಪತ್ರೆ ಪ್ರಕರಣದ ಬೆನ್ನಲ್ಲೇ ಈ ಘಟನೆ ನಡೆದಿದ್ದು, ಸಂತ್ರಸ್ತೆಗೆ ನ್ಯಾಯ ಕೋರಿ ವೈದ್ಯರು ಬೀದಿಗಿಳಿದಿದ್ದರಿಂದ ದೇಶಾದ್ಯಂತ ಭಾರೀ ಪ್ರತಿಭಟನೆಗಳಿಗೆ ಕಾರಣವಾಗಿತ್ತು.
ವರದಿ ಸದಾನಂದ